ಜೋಲಾರ್ಪೆಟ್ಟೆ: ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷವಾದಎಐಎಡಿಎಂಕೆಯನ್ನು ಸೋಲಿಸಿ, ಅದರ ಮಿತ್ರ ಪಕ್ಷ ಬಿಜೆಪಿ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳಬೇಕೆಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಬುಧವಾರ (ಏಪ್ರಿಲ್ 1) ಜನರಲ್ಲಿ ಮನವಿ ಮಾಡಿದ್ದಾರೆ.ಚೆನ್ನೈನಿಂದ ಸುಮಾರು 215 ಕಿ.ಮೀ ದೂರದಲ್ಲಿರುವ ಜೋಲಾರ್ಪೆಟ್ಟೆನಲ್ಲಿ ಡಿಎಂಕೆ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಪಕ್ಷದ ಯುವ ಘಟಕದ ಕಾರ್ಯದರ್ಶಿ, ರಾಜ್ಯದಲ್ಲಿ ಎಐಎಡಿಎಂಕೆ ಮೈತ್ರಿಗೆ ಸಂಪೂರ್ಣ ಸೋಲುಣಿಸುವಂತೆ ಜನರನ್ನು ಒತ್ತಾಯಿಸಿದರು.”ಫ್ಯಾಸಿಸ್ಟ್ ಬಿಜೆಪಿ” ತಮಿಳುನಾಡಿಗೆ ಪ್ರವೇಶಿಸಲು ಜನರ ಒಪ್ಪಿಗೆ ಇಲ್ಲ, ಕೇಸರಿ ಪಕ್ಷವು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದರು.
ತಮಿಳುನಾಡು ವಿಧಾನಸಭೆಯ ಎಲ್ಲಾ 234 ಸ್ಥಾನಗಳಿಗೆ ಏಪ್ರಿಲ್ 23 ರಂದು ಮತದಾನ ನಡೆಯಲಿವೆ. ಮತಗಳ ಎಣಿಕೆ ಮೇ 4 ರಂದು ನಡೆಯಲಿದೆ.














































