ದೇಶದ ನೂರಾರು ಗ್ರಾಮಗಳಲ್ಲಿ ತೂಗುಸೇತುವೆಗಳನ್ನು ನಿರ್ಮಿಸಿ ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಗೆ ಕಾರಣರಾದ, ‘ಬ್ರಿಡ್ಜ್ ಮ್ಯಾನ್’ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ| ಗಿರೀಶ್ ಭಾರದ್ವಾಜ್ ಅವರ ನಿಧನದ ಸುದ್ದಿ ಅತೀವ ನೋವನ್ನುಂಟು ಮಾಡಿದೆ.ರಸ್ತೆ-ಸೇತುವೆಗಳಿಲ್ಲದೆ ಸಮಾಜದ ಮುಖ್ಯವಾಹಿನಿಯೊಂದಿಗೆ ಸಂಪರ್ಕವನ್ನು ಹೊಂದದೆ ಉಳಿದಿದ್ದ ಅನೇಕ ಗ್ರಾಮಗಳಿಗೆ ತೂಗುಸೇತುವೆಗಳ ಮೂಲಕ ಸಂಪರ್ಕವನ್ನು ಕಲ್ಪಿಸಿ, ಗ್ರಾಮೀಣ ಭಾರತಕ್ಕೆ ತಂತ್ರಜ್ಞಾನದ ಸ್ಪರ್ಶ ನೀಡಿದವರು ಡಾ| ಗಿರೀಶ್ ಭಾರದ್ವಾಜ್. ನೂರಾರು ನದಿಗಳಿಗೆ ದೇಶದ ಭದ್ರತೆ ಮತ್ತು ಸುರಕ್ಷತೆಗೆ ಪೂರಕವಾಗುವ ಆಯಕಟ್ಟಿನ ಜಾಗಗಳಲ್ಲಿ 130ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸುವ ಮೂಲಕ ನಾಡಿಗೆ ಅಪೂರ್ವವಾದ ಕೊಡುಗೆಗಳನ್ನು ನೀಡಿದ್ದಾರೆ. ಅವರ ವೃತ್ತಿಪ್ರೀತಿ, ಪರಿಸರಕ್ಕೆ ಪೂರಕವಾಗಿದ್ದ ಅವರ ವೃತ್ತಿಪರತೆ, ಕ್ರಿಯಾಶೀಲತೆ, ಸರಳತೆ ಹಾಗೂ ಕೆಲಸದಲ್ಲಿನ ಶ್ರದ್ದೆ ಯುವಪೀಳಿಗೆಗೆ ಮಾದರಿ.ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಹಾಗೂ ಬಂಧುಮಿತ್ರರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಮತ್ತು ಅಗಲಿದ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲೆಂದು ಪ್ರಾಂತ ಸಂಘಚಾಲಕ್ ಜಿ.ಎಸ್ ಉಮಾಪತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ತೂಗು ಸೇತುವೆ ಸರದಾರ ಪದ್ಮಶ್ರೀ ಗಿರೀಶ್ ಭಾರಧ್ವಾಜ್ ನಿಧನ | ಸಂತಾಪ ವ್ಯಕ್ತಪಡಿಸಿದ ಅರೆಸೆಸ್
Savistara
Bureau Report
[t4b-ticker]









































