ಸೂಕ್ತ ದಾಖಲೆಗಳುಳ್ಳ ಅಡಿಕೆ ಸಾಗಣೆ ಸರಕುಗಳ ಸುಗಮ ಸಂಚಾರವನ್ನು ಖಚಿತಪಡಿಸುವ ಮೂಲಕ ಸಂಕಷ್ಟದಲ್ಲಿರುವ ಅಡಕೆ ಬೆಳೆಗಾರರು ಮತ್ತು ಅವರ ಕುಟುಂಬಗಳ ನೆರವಿಗೆ ಧಾವಿಸಲು ಒತ್ತಾಯಿಸಿದ ಸಂಸದರು
ಮಹಾರಾಷ್ಟ್ರದಲ್ಲಿ ತಡೆಹಿಡಲ್ಪಟ್ಟಿರುವ ಅಡಿಕೆ ಸಾಗಣೆ ಸರಕುಗಳನ್ನು ತ್ವರಿತವಾಗಿ ಬಿಡುಗಡೆ ಮಾಡಲು ಮತ್ತು ಲಕ್ಷಾಂತರ ಅಡಿಕೆ ಬೆಳೆಗಾರರ ಜೀವನೋಪಾಯವನ್ನು ರಕ್ಷಿಸಲು ಸುವ್ಯವಸ್ಥಿತ ಸಾಗಣೆ ಕಾರ್ಯವಿಧಾನವನ್ನು 53 8 MAMCOS, CAMPCO, TUMCOS ಮತ್ತು ಕರ್ನಾಟಕ ರಾಜ್ಯ ಅಡಿಕೆ ಮಾರುಕಟ್ಟೆ ಸಹಕಾರ ಸಂಘಗಳ ಒಕ್ಕೂಟದ ಪರವಾಗಿ ಬೇಡಿಕೆ ಮಂಡಿಸಿದ ಸಂಸದ ರಾಘವೇಂದ್ರ
ನವದೆಹಲಿ : ದಕ್ಷಿಣ ಭಾರತದ ಅಡಿಕೆ ಬೆಳೆಗಾರರ ಸಹಕಾರಿ ನಿಯೋಗದ ಜೊತೆಗೆ ಶಿವಮೊಗ್ಗ ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಇಂದು ನವದೆಹಲಿಯಲ್ಲಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದರು. ಮಲ್ನಾಡ್ ಅಡಿಕೆ ಮಾರ್ಕೆಟಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ (MAMCOS), ಸೆಂಟ್ರಲ್ ಅಡಿಕೆ ಮತ್ತು ಕೋಕೋ ಮಾರ್ಕೆಟಿಂಗ್ ಅಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (CAMPCO), ತೋಟ ಉತ್ಪನ್ನಗಳ ಮರಾಟ ಸಹಕಾರ ಸಂಘ ನಿಯಮಿತ (TUMCOS) ಮತ್ತು ಕರ್ನಾಟಕ ರಾಜ್ಯ ಅಡಿಕೆ ಮಾರ್ಕೆಟಿಂಗ್ ಕೋ-ಆಪರೇಟಿವ್ ಸೊಸೈಟಿಗಳ ಒಕ್ಕೂಟ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಅಡಿಕೆ ಸಹಕಾರಿ ಸಂಸ್ಥೆಗಳನ್ನು ಪ್ರತಿನಿಧಿಸುವ ನಿಯೋಗದೊಂದಿಗೆ ಭೇಟಿ ಮಾಡಿದರು. ಮಹಾರಾಷ್ಟ್ರದಲ್ಲಿ ಉತ್ತಮ ಅಡಿಕೆ ಸಾಗಣೆ ಸರಕುಗಳನ್ನು ದೀರ್ಘಕಾಲದವರೆಗೆ ತಡೆಹಿಡಿಯಲಾಗಿರುವುದರಿಂದ ಕರ್ನಾಟಕದಾದ್ಯಂತ ಮತ್ತು ದಕ್ಷಿಣ ಭಾರತದ ವ್ಯಾಪಕ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಬೆಳೆಗಾರರಿಗೆ ಗಣನೀಯ ತೊಂದರೆ ಉಂಟಾಗಿದೆ ಎಂದು ನಿಯೋಗ ಮುಖ್ಯಮಂತ್ರಿಗಳ ಮಧ್ಯಪ್ರವೇಶವನ್ನು ಕೋರಿತು.
ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಅಧಿಕಾರಿಗಳು, ಮಹಾರಾಷ್ಟ್ರದ ವಿವಿಧ ಸಾರಿಗೆ ಕೇಂದ್ರಗಳಲ್ಲಿ, ಉತ್ತರ ಭಾರತದ ಮಾರುಕಟ್ಟೆಗಳಿಗೆ ಹೋಗುವ ಮಾರ್ಗದಲ್ಲಿ ಮಹಾರಾಷ್ಟ್ರದ ಮೂಲಕ ಹಾದುಹೋಗುತ್ತಿದ್ದ, ಸೂಕ್ತ ದಾಖಲೆ ಹೊಂದಿರುವ, ಸುಮಾರು 50ಕ್ಕೂ ಅಧಿಕ ಅಡಿಕೆ ಸರಕು ಸಾಗಣೆ ಟ್ರಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಿಯೋಗವು ವಿವರಿಸಿತು. ಸಭೆಯಲ್ಲಿ ನಿಯೋಗದ ಪರವಾಗಿ ಮಾತನಾಡಿದ ಸಂಸದ ರಾಘವೇಂದ್ರ, ಭಾರತದ ಅಡಿಕೆ ಕೃಷಿಯ ಶೇ. 70 ಕ್ಕಿಂತ ಹೆಚ್ಚು ಪಾಲನ್ನು ಕರ್ನಾಟಕ ಹೊಂದಿದೆ ಮತ್ತು ದಕ್ಷಿಣ ಭಾರತದಾದ್ಯಂತ ಲಕ್ಷಾಂತರ ರೈತ ಕುಟುಂಬಗಳ ಜೀವನೋಪಾಯವು ಅಡಿಕೆ ಮೇಲೆ ಅವಲಂಬಿತವಾಗಿದೆ ಎಂದು ಒತ್ತಿ ಹೇಳಿದರು. ಪ್ರಸಕ್ತ ತಡೆಹಿಡಲ್ಪಟ್ಟಿರುವ ಸರಕುಗಳು, GST ಇನ್‌ವಾಯ್ಸ್ಗಳು, ಇ-ವೇ ಬಿಲ್‌ಗಳು ಮತ್ತು FSSAI ನೋಂದಣಿಗಳು ಸೇರಿದಂತೆ ಶಾಸನಬದ್ಧ ದಾಖಲೆಗಳನ್ನು ಹೊಂದಿವೆ ಮತ್ತು ಉತ್ತರ ಭಾರತದ ಮಾರುಕಟ್ಟೆಗಳಿಗೆ ಹೋಗುವ ಮಾರ್ಗದಲ್ಲಿ ಮಹಾರಾಷ್ಟ್ರದ ಮೂಲಕ ಕೇವಲ ಹಾದು ಹೋಗುತ್ತವೆ ಎಂದು ಅವರು ವಿವರಿಸಿದರು.ಅಂತಹ ಸರಕುಗಳನ್ನು ದೀರ್ಘಕಾಲದವರೆಗೆ ತಡೆಹಿಡಿಯುವುದು ಪೂರೈಕೆಯನ್ನು ಅಡ್ಡಿಪಡಿಸುವ ಮಾರುಕಟ್ಟೆ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ರೈತರು ಮತ್ತು ಸಹಕಾರಿ ಸಂಸ್ಥೆಗಳ ಮೇಲೆ ಅನಗತ್ಯ ಆರ್ಥಿಕ ಹೊರೆಯನ್ನುಂಟುಮಾಡುತ್ತದೆ ಎಂದು ನಿಯೋಗ ಹೇಳಿತು. ಜೊತೆಗೆ, ಆಧುನಿಕ ಅಡಿಕೆ ಸಂಸ್ಕರಣೆಯ ಅಂತರ್ಗತ ನಿಯಮಿತ ಯಾಂತ್ರಿಕ ಸಿಪ್ಪೆ ತೆಗೆಯುವ ಗುರುತುಗಳು ಮುಟ್ಟುಗೋಲು ಹಾಕಿಕೊಳ್ಳಲು ಅಥವಾ ಉತ್ತಮ ಸರಕುಗಳನ್ನು ದೀರ್ಘಕಾಲದವರೆಗೆ ತಡೆಹಿಡಿಯಲು ಕಾರಣವಾಗಬಾರದು ಎಂದು ವಿನಂತಿಸಿತು.
“ಪ್ರತಿಯೊಂದು ಟ್ರಕ್ ನಲ್ಲಿರುವ ಅಡಿಕೆಯ ಹಿಂದೆ ನೂರಾರು ಶ್ರಮಿಕ ಕೃಷಿ ಕುಟುಂಬಗಳಿವೆ, ಅವರ ಜೀವನೋಪಾಯ, ಸಕಾಲಿಕ ಮಾರುಕಟ್ಟೆ ವ್ಯಾಪಾರವನ್ನು ಅವಲಂಬಿಸಿದೆ. ದಕ್ಷಿಣ ಭಾರತದಾದ್ಯಂತ ಲಕ್ಷಾಂತರ ಕುಟುಂಬಗಳಿಗೆ, ಅಡಿಕೆ ಕೇವಲ ಬೆಳೆಯಲ್ಲ – ಅದು ಅವರ ಜೀವನಾಧಾರವಾಗಿದೆ. ಸೂಕ್ತ ದಾಖಲೆಗಳೊಂದಿಗೆ ಕೇವಲ ಮಹಾರಾಷ್ಟ್ರವನ್ನು ಹಾದುಹೋಗುವ ನೈಜ ಅಡಿಕೆ ಸರಕು ಸಾಗಣೆ ವಾಹನಗಳನ್ನು ತಡೆಹಿಡಯದಂತೆ ಗೌರವಪೂರ್ವಕವಾಗಿ ಕೋರುತ್ತೇವೆ” ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.ಪ್ರಸ್ತುತತಡೆಹಿಡಿಯಲ್ಪಟ್ಟಿರುವ ಸರಕು ಸಾಗಣೆ ವಾಹನಗಳನ್ನು ತ್ವರಿತವಾಗಿ ಬಿಡುಗಡೆ ಮಾಡಲು ಮತ್ತು ಮುಂದಿನ ದಿನಗಳಲ್ಲಿ ಮಾನ್ಯತೆ ಪಡೆದ ಸಹಕಾರಿ ಸಂಸ್ಥೆಗಳಿಗೆ ಸೇರಿದ ಸೂಕ್ತ ದಾಖಲೆ ಒಳಗೊಂಡ ಸಾಗಣೆ ಸರಕುಗಳನ್ನು ತಡೆಹಿಡಿಯದಂತೆ ಪಾರದರ್ಶಕ ಮತ್ತು ಕಾಲಬದ್ಧ ಕಾರ್ಯವಿಧಾನವನ್ನು ಸ್ಥಾಪಿಸಲು ನಿಯೋಗ ಮುಖ್ಯಮಂತ್ರಿಗಳನ್ನು ಒತ್ತಾಯಿಸಿತು. ತಮ್ಮ ಒತ್ತಡ ಕಾರ್ಯಬಾಹುಳ್ಯದ ನಡುವೆಯೂ, ಅದರಲ್ಲೂ ಮಹಾರಾಷ್ಟ್ರದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ನಡುವೆಯೂ ಕೂಡ ಸಭೆಗೆ ಅವಕಾಶ ನೀಡಿದ್ದಕ್ಕಾಗಿ ಸಿಎಂ ಫಡ್ನವೀಸ್ ಅವರನ್ನು ಶ್ಲಾಘಿಸಿದ ಸಂಸದ ರಾಘವೇಂದ್ರ, ಮುಖ್ಯಮಂತ್ರಿಗಳ ಸಕಾಲಿಕ ಹಸ್ತಕ್ಷೇಪದಿಂದಾಗಿ ಸಾವಿರಾರು ಅಡಿಕೆ ಬೆಳೆಯುವ ಕುಟುಂಬಗಳಿಗೆ ಅಗತ್ಯವಾದ ಪರಿಹಾರವನ್ನು ಒದಗಿಸುತ್ತದೆ ಮತ್ತು ತಡೆರಹಿತ ಅಂತರ-ರಾಜ್ಯ ಕೃಷಿ ವ್ಯಾಪಾರವನ್ನು ಬಲಪಡಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶ್ರೀ ಅರಗ ಜ್ಞಾನೇಂದ್ರ ಮಾಜಿಗೃಹ ಸಚಿವರು ಹಾಗೂ ಶಾಸಕರು, ಶ್ರೀನಿವಾಸ ಪೂಜಾರಿ ಮಾನ್ಯ ಸಂಸದರು ಉಡುಪಿ- ಚಿಕ್ಕಮಗಳೂರು,ಲೋಕಸಭಾ ಕ್ಷೇತ್ರ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ, CAMCO ಹಾಗೂ MAMCOS ಉಪಾಧ್ಯಕ್ಷರುಗಳು ಸದರಿ ಸಭೆಯಲ್ಲಿ ಹಾಜರಿದ್ದರು.









































