ಹೊರ್ಮುಜ್ ಜಲಸಂಧಿ ಮುಕ್ತವಾದರಷ್ಟೇ ಕದನ ವಿರಾಮ ಸಾಧ್ಯ: ಇರಾನ್‌ಗೆ ಟ್ರಂಪ್‌

Picture of Savistara

Savistara

Bureau Report

ವಾಷಿಂಗ್ಟನ್: ‘ಇರಾನ್ ಕದನ ವಿರಾಮ ಬಯಸುತ್ತಿದೆ. ಆದರೆ,ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ಒಂದು ವೇಳೆ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ ಭೀಕರ ದಾಳಿ ಮುಂದುವರಿಸಲಾಗುವುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ಪ್ರಸ್ತುತ ನಡೆಯುತ್ತಿರುವ ಯುದ್ಧದ ನಡುವೆ ಇರಾನ್‌ ಹೊಸ ನಾಯಕರು ಕದನ ವಿರಾಮ ಬಯಸುತ್ತಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ಮುಕ್ತವಾಗಿ ತೆರೆದಾಗ ಮಾತ್ರ ಕದನ ವಿರಾಮ ಸಾಧ್ಯವಾಗುತ್ತದೆ. ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ ನಾವು ಇರಾನ್ ಅನ್ನು ಸಂಪೂರ್ಣವಾಗಿ ನಿರ್ನಾಮ ಮಾಡುತ್ತೇವೆ ಅಥವಾ ಅವರೇ ಹೇಳುವಂತೆ ಶಿಲಾಯುಗಕ್ಕೆ ಅಟ್ಟುತ್ತೇವೆ!’ ಎಂದು ಟ್ರಂಪ್ ಸಾಮಾಜಿಕ ಜಾಲತಾಣ ಟ್ರುಥ್‌ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ‘ಇರಾನ್ ವಿರುದ್ಧದ ಯುದ್ಧ ಎರಡು ಅಥವಾ ಮೂರು ವಾರಗಳಲ್ಲಿ ಅಂತ್ಯಗೊಳ್ಳಲಿದೆ’ ಎಂದು ಹೇಳಿದ್ದರು.ಇಂಧನ ಬೆಲೆ ಏರಿಕೆಯ ಪರಿಣಾಮ ಕುರಿತು ಕೇಳಿದಾಗ, ‘ನಾವು ಬೇಗನೇ ಇರಾನ್ ಬಿಟ್ಟು ಹೋಗಬೇಕಿದೆ. ಇರಾನ್‌ನಲ್ಲಿ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಕೊನೆಗೊಳಿಸಲಾಗುವುದು.ಇರಾನ್ ಸೋಲಿನ ಸನಿಹದಲ್ಲಿದೆ’ ಎಂದು ಹೇಳಿದ್ದರು.

‘ನಾವು ನಮ್ಮ ಕೆಲಸವನ್ನು ಮುಗಿಸುತ್ತಿದ್ದೇವೆ. ಬಹುಶಃ ಎರಡು ಅಥವಾ ಮೂರು ವಾರಗಳಲ್ಲಿ ನಾವು ಮುಗಿಸಲಿದ್ದೇವೆ. ಅಮೆರಿಕದ ಕಾರ್ಯಾಚರಣೆಯ ಅಂತ್ಯವು ಇರಾನ್‌ನ ಜೊತೆ ಯಾವುದೇ ಒಪ್ಪಂದವನ್ನು ಅವಲಂಬಿಸಿಲ್ಲ’ ಎಂದೂ ಟ್ರಂಪ್‌ ಸ್ಪಷ್ಟಪಡಿಸಿದ್ದರು.

[t4b-ticker]
error: Content is protected !!