ಮುಂದಿನ ಎರಡೂರು ವಾರಗಳಲ್ಲಿ ಇರಾನ್ ಮೇಲೆ ಭೀಕರ ದಾಳಿ: ಟ್ರಂಪ್‌ ಎಚ್ಚರಿಕೆ

Picture of Savistara

Savistara

Bureau Report

ಮುಂದಿನ ಎರಡೂರು ವಾರಗಳಲ್ಲಿ ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಲ್ಲದೇ ಈ ಯುದ್ಧವು ಮುಕ್ತಾಯದ ಹಂತದಲ್ಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಬುಧವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಮುಂದಿನ ಎರಡು-ಮೂರು ವಾರಗಳಲ್ಲಿ ನಾವು ಅವರನ್ನು ಶಿಲಾಯುಗಕ್ಕೆ ಕೊಂಡೊಯ್ಯಲಿದ್ದೇವೆ, ಅವರು ಇರಬೇಕಾದ ಜಾಗ ಅದೇ. ಅಮೆರಿಕದ ಪಡೆಗಳು ಶೀಘ್ರದಲ್ಲೇ ಗುರಿ ತಲುಪಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇಂದು ನಾನು ಬಹಳ ಸಂತೋಷದಿಂದ ಹೇಳುತ್ತಿದ್ದೇನೆ. ನಾವು ಈಗಾಗಲೇ ಇರಾನ್‌ನ ನೌಕಾ ಮತ್ತು ವಾಯುಪಡೆಯ ಸಾಮರ್ಥ್ಯವನ್ನು ಧ್ವಂಸಗೊಳಿಸಿದ್ದೇವೆ. ನಮ್ಮ ಪ್ರಮುಖ ಕಾರ್ಯತಂತ್ರದ ಗುರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ನಾವು ಈ ಕೆಲಸವನ್ನು ಬಹಳ ವೇಗವಾಗಿ ಮುಗಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಯುದ್ಧದಲ್ಲಿ ‘ಅಪ್ರತಿಮ’ ವಿಜಯ ಸಾಧಿಸಿದ್ದೇವೆ

‘ಕಳೆದ ನಾಲ್ಕು ವಾರಗಳಲ್ಲಿ ನಮ್ಮ ಸಶಸ್ತ್ರ ಪಡೆಗಳು ಯುದ್ಧಭೂಮಿಯಲ್ಲಿ ಅತ್ಯಂತ ವೇಗದ ಮತ್ತು ನಿರ್ಣಾಯಕ ವಿಜಯ ಸಾಧಿಸಿವೆ. ಇಂತಹ ವಿಜಯಗಳನ್ನು ಜಗತ್ತು ಈವರೆಗೆ ಕಂಡಿಲ್ಲ. ಇರಾನ್‌ನ ನೌಕಾಪಡೆ, ವಾಯುಪಡೆ ನಾಶವಾಗಿದೆ. ಅವರ ಪ್ರಮುಖ ನಾಯಕರು ಮೃತಪಟ್ಟಿದ್ದಾರೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನಾಶವಾಗುತ್ತಿದೆ’ ಎಂದೂ ಟ್ರಂಪ್ ತಿಳಿಸಿದ್ದಾರೆ.

ಇಂಧನ ಬೆಲೆ ಏರಿಕೆ ತಾತ್ಕಾಲಿಕ:

ಹೆಚ್ಚುತ್ತಿರುವ ಇಂಧನ ಬೆಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಟ್ರಂಪ್, ಈ ಬೆಲೆ ಏರಿಕೆ ಕೇವಲ ತಾತ್ಕಾಲಿಕ ಎಂದು ಪ್ರತಿಪಾದಿಸಿದ್ದಾರೆ. ನೆರೆಯ ದೇಶಗಳ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ಸರ್ಕಾರ ನಡೆಸಿದ ಅಟ್ಟಹಾಸದ ದಾಳಿಗಳೇ ಈ ಬೆಲೆ ಏರಿಕೆಗೆ ಕಾರಣ. ಶೀಘ್ರದಲ್ಲೇ ಬೆಲೆಗಳು ಇಳಿಕೆಯಾಗಲಿವೆ ಎಂದು ಅವರು ಭರವಸೆ ನೀಡಿದ್ದಾರೆ.

ಮಿತ್ರರಾಷ್ಟ್ರಗಳಿಗೆ ನೆರವಾಗಲು ಕಾರ್ಯಾಚರಣೆ

ಇರಾನ್ ಯುದ್ಧದ ಬಗ್ಗೆ ಮೊದಲ ಬಾರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌, ಈ ಸೇನಾ ಕಾರ್ಯಾಚರಣೆಯು ಇರಾನ್‌ನ ಯಾವುದೇ ತೈಲ ಸಂಪನ್ಮೂಲಗಳನ್ನು ಪಡೆಯಲು ಉದ್ದೇಶಿಸಿಲ್ಲ, ಬದಲಿಗೆ ಅಮೆರಿಕದ ಮಿತ್ರರಾಷ್ಟ್ರಗಳಿಗೆ ನೆರವಾಗಲು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಾವು ಈಗ ಮಧ್ಯಪ್ರಾಚ್ಯದ ಮೇಲೆ ಅವಲಂಬಿತವಾಗಿಲ್ಲ. ನಮಗೆ ಅವರ ತೈಲ ಅಥವಾ ಬೇರೆ ಯಾವುದೇ ಸಂಪನ್ಮೂಲ ಬೇಕಿಲ್ಲ. ಆದರೆ ನಾವು ನಮ್ಮ ಮಿತ್ರರಾಷ್ಟ್ರಗಳಿಗೆ ನೆರವಾಗಲು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!