ಹೊಸದಿಲ್ಲಿ: ಪಶ್ಚಿಮ ಏಷ್ಯಾ ಸಂಘರ್ಷ,ಹರ್ಮುಜ್ ಜಲಸಂಧಿಯಲ್ಲಿನ ಅಡೆತಡೆ ಯಿಂದ ಭಾರತದಲ್ಲಿ ತಲೆದೋರಿರುವ ಇಂಧನ ಬಿಕ್ಕಟ್ಟು ಪರಿಹರಿಸಲು ಅಗತ್ಯವಿರುವ ತೈಲ ಹಾಗೂ ಎಲ್‌ಪಿಜಿ ಪೂರೈಸುವುದಾಗಿ ರಷ್ಯಾ ಭರವಸೆ ನೀಡಿದೆ.ಭಾರತ ಪ್ರವಾಸದಲ್ಲಿರುವ ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮಾಂಟುರೋವ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಜತೆ ನಡೆದ ಚರ್ಚೆ ವೇಳೆ ಭಾರತಕ್ಕೆ ತೈಲ ಹಾಗೂ ನೈಸರ್ಗಿಕ ಅನಿಲ ರಫ್ತು ಹೆಚ್ಚಿಸುವ ಭರವಸೆ ನೀಡಿದ್ದಾರೆ.ರಷ್ಯಾ ತೈಲ ಕಂಪನಿಗಳು ಭಾರತಕ್ಕೆ ತೈಲ ಹಾಗೂ ಅನಿಲ ರಫ್ತು ಹೆಚ್ಚಳಕ್ಕೆ ಕ್ರಮ ಕೈಗೊಂಡಿವೆ. ಉಭಯ ದೇಶಗಳ ನಡುವಿನ ಇಂಧನ ಭದ್ರತೆ ಖಾತರಿಪಡಿಸಲು ರಷ್ಯಾ ಬದ್ಧವಾಗಿದೆ ಎಂದು ಮಾಂಟುರೋವ್ ಉಲ್ಲೇಖಿಸಿ ಹೇಳಿಕೆ ಭಾರತದಲ್ಲಿರುವ ರಷ್ಯಾ ರಾಯಭಾರ ಕಚೇರಿ ಪ್ರಕಟಣೆ ಹೊರಡಿಸಿದೆ.-ಇಸ್ರೇಲ್ – ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಬಳಿಕ ಪರ್ಷಿಯನ್ ಕೊಲ್ಲಿ ಮತ್ತು ಒಮನ್ ಕೊಲ್ಲಿ ನಡುವಿನ ಕಿರಿದಾದ ಹಡಗು ಮಾರ್ಗವಾದ ಹರ್ಮುಜ್ ಜಲಸಂಧಿಯನ್ನು ಇರಾನ್ ನಿರ್ಬಂಧಿಸಿದೆ. ಜಾಗತಿಕವಾಗಿ ಶೇ.20 ರಷ್ಟು ತೈಲ ಮತ್ತು ಎಲ್ಎನ್‌ಜಿ ಪೂರೈಕೆ ಮಾರ್ಗ ಮುಚ್ಚಿದ ಪರಿಣಾಮ ತೈಲ ಮತ್ತು ಅನಿಲ ಬೆಲೆಗಳು ಗಗನಕ್ಕೇರಿವೆ.
ಭಾರತಕ್ಕೆ ತೈಲ, ಅನಿಲ ರಫ್ತು ಹೆಚ್ಚಿಸುವುದಾಗಿ ರಷ್ಯಾ ಭರವಸೆ
Savistara
Bureau Report
[t4b-ticker]














































