ಅಲುವ ವಿಧಾನಸಭಾ ಬಿಜೆಪಿ ಪ್ರಚಾರ ಸಭೆ | ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಮತಯಾಚನೆ

Picture of Savistara

Savistara

Bureau Report

ಕೇರಳಂನ ಅಲುವಾ ವಿಧಾನಸಭಾ ಕ್ಷೇತ್ರದಲ್ಲಿಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಮಂಜೂರನ್ ಕುಟುಂಬದ ಶ್ರೀ ಜೋಸ್ ಮಂಜೂರನ್, ಪೊಲೀಸ್ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶ್ರೀ ಅಜಯನ್ ಕೂಟುಂಗಲ್,

ಅಲುವಾ ವ್ಯವಸಾಯ ವ್ಯಾಪಾರಿ ಸಂಘದ ಅಧ್ಯಕ್ಷ ಶ್ರೀ ಟಾಮಿ ವರ್ಗಿಸ್, ಜಾಕೋಬೈಟ್ ಅಂಗಮಾಲಿ ಪ್ರದೇಶದ ಎಚ್.ಜಿ. ಬಿಷಪ್ ಮ್ಯಾಥ್ಯೂಸ್ ಮೋರ್ ಅಂತೋಸ್, ರೋಮನ್ ಕ್ಯಾಥೋಲಿಕ್ ಡಯಾಸಿಸ್ನ ಬಿಷಪ್ ಗ್ರೇಸಿಯನ್ ಮುಂಡದನ್ ಮತ್ತು ಸೇಂಟ್ ಥಾಮಸ್ ಕ್ಯಾಪುಚಿನ್ ಆಶ್ರಮ ಸೇರಿದಂತೆ ಕ್ಷೇತ್ರದಾದ್ಯಂತ ಪ್ರಮುಖ ಮತದಾರರು ಮತ್ತು ಸಮುದಾಯದ ನಾಯಕರನ್ನು ಭೇಟಿ ಮಾಡಿ, ಮತಯಾಚನೆ ಮಾಡಲಾಯಿತು.

ಪ್ರಚಾರದ ವೇಳೆ ಎಲ್ಲರೊಂದಿಗೆ ಅರ್ಥಪೂರ್ಣವಾದ ಚರ್ಚೆ ನಡೆಸಿ, ಸಮಾಜದ ಎಲ್ಲಾ ವರ್ಗಗಳಿಂದ ಆತ್ಮೀಯ ಸ್ವಾಗತ ಮತ್ತು ಆಶೀರ್ವಾದಗಳನ್ನು ಪಡೆಯಲಾಯಿತು. ಬಿಜೆಪಿ ಅಭ್ಯರ್ಥಿ ಮತ್ತು ಎರ್ನಾಕುಲಂ ಉತ್ತರ ಜಿಲ್ಲಾ ಅಧ್ಯಕ್ಷರಾದ ಶ್ರೀ ಬ್ರಹ್ಮ ರಾಜ್ ಅವರು ಬಲವಾದ ಸಂಪರ್ಕ,

ಸಮರ್ಪಣೆ ಮತ್ತು ಜನರಿಗೆ ಸೇವೆ ಸಲ್ಲಿಸುವ ಬದ್ಧತೆಯೊಂದಿಗೆ ಆಲುವಾ ಕ್ಷೇತ್ರದ ಪ್ರತಿಯೊಂದು ಮೂಲೆ ಮೂಲೆಯನ್ನು ತಲುಪುತ್ತಿರುವುದು, ಗೆಲುವಿನ ಭರವಸೆ ಮೂಡಿಸಿದೆಯೆಂದರು ಈ ಸಂದರ್ಭದಲ್ಲಿ ಕೇಂದ್ರ ಉಕ್ಕು ಸಚಿವ ಶ್ರೀನಿವಾಸ ವರ್ಮಾ ಭೂಪತಿ ರಾಜು, ಅಲುವ ಕ್ಷೇತ್ರ ಬಿಜೆಪಿ ಪ್ರಭಾರಿ ಪ್ರಸನ್ನ ದರ್ಬೆ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!