ಸುಳ್ಯ ತಾಲೂಕಿನ ದುಗಲಡ್ಕ,ಕಂದಡ್ಕ ಪರಿಸರದಲ್ಲಿ ಕಾಡನೆ ಉಪಟಳ, ಕೃಷಿ ಹಾನಿ

Picture of Savistara

Savistara

Bureau Report

ಸುಳ್ಯ: ಸುಳ್ಯ ತಾಲೂಕಿನ ಆನೇಕ ಕಡೆ ಕಾಡನೆ ನಿರಂತರವಾಗಿ ಕೃಷಿಕರ ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದೂ ಈ ಬಗ್ಗೆ ದುಗ್ಗಲಡ್ಕ ಪ್ರದೇಶದಲ್ಲಿ ಸುಮಾರು ಹತ್ತು ದಿನಗಳಿಂದ ಆನೆಗಳು ಕೃಷಿ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿರುವುದರಿಂದ ಆನೆಗಳು ಬಂದಾಗ ನಾವೇನು ಮಾಡಬೇಕು- ಏನೇನು ಮುನ್ನೆಚ್ಚರಿಕೆ ವಹಿಸಬೇಕೆಂಬ ಬಗ್ಗೆ ಚರ್ಚಿಸಲು ಪೂಮಲೆ ಕಾಡು ಪ್ರಾಣಿ ಮತ್ತು ಆನೆಗಳ ಮಾಹಿತಿ ವಾಟ್ಸಾಪ್ ಗ್ರೂಪ್ ವತಿಯಿಂದ ಊರವರ ಸಭೆ ಆ.9 ರಂದು ದುಗ್ಗಲಡ್ಕದ ದುಗ್ಗಲಾಯ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಸಭೆಯಲ್ಲಿ ಹಿರಿಯ ಕೃಷಿಕರಾಗಿ ತನ್ನ ತೋಟದಲ್ಲಿ ಆನೆಗಳ ದಾಳಿಯನ್ನು ನಿರಂತರ ಎದುರಿಸುತ್ತಿರುವ ಪಿ.ಬಿ. ಪ್ರಭಾಕರ ರೈ ಮತ್ತು ಕೆ.ಪಿ.ಜಗದೀಶ್ ರೈ ಸಂಪಾಜೆ ಮಾಹಿತಿ ನೀಡಿದರು. ಹಲವಾರು ಕೃಷಿಕರು ಮಾಹಿತಿ,ಅನುಭವಗಳನ್ನು ಹಂಚಿಕೊಂಡರು. ತೋಟಗಳಿಗೆ ನುಗ್ಗುವ ಆನೆಗಳನ್ನು ಸಮಾಧಾನದಿಂದ ಓಡಿಸುವ ಕೆಲಸವನ್ನು ಮಾಡಬೇಕು. ಅದರ ಮೇಲೆ ಸವಾರಿ ಮಾಡಿದರೆ ಅವು ನಮ್ಮ ಮೇಲೆಯೇ ತಿರುಗಿ ಬೀಳುತ್ತವೆ. ಒಮ್ಮೆ ಆನೆಗಳು ಬಂದ ಭಾಗದಲ್ಲಿ ಸಂಪೂರ್ಣ ಬಾಳೆ ಇತ್ಯಾದಿ ಮುಗಿದ ಮೇಲೆಯೇ ಮತ್ತೊಂದು ಪ್ರದೇಶಕ್ಕೆ ಹೋಗುತ್ತವೆ. ನಾಯಿಯನ್ನು ಬಿಟ್ಟು ಆನೆಗಳನ್ನು ಓಡಿಸುವ ಕೆಲಸ ಮಾಡಬಾರದು. ಇದರಿಂದ ಆಕ್ರೋಶಗೊಂಡು ದಾಳಿ ಮಾಡುವ ಸಾಧ್ಯತೆ ಇದೆ. ಹೊಳೆಯನ್ನು ದಾಟಿ ಕೂಡ ಆನೆಗಳು ಸಂಚರಿಸುತ್ತವೆ. ಆನೆಗಳ ದಿಕ್ಕನ್ನು ನೋಡಿ ಸಿಡಿಮದ್ದು ಸಿಡಿಸಿ ಆನೆಗಳನ್ನು ಓಡಿಸುವ ಕೆಲಸ ಮಾಡಬೇಕು.ಸೋಲಾರ್ ಬೇಲಿಗಳಿಂದಲೂ ಆನೆಗಳು ಬರುವುದನ್ನು ತಡೆಯಲು ಸಾಧ್ಯ ಎಂಬ ಅಭಿಪ್ರಾಯನ್ನು ಗ್ರೂಪ್ ನ ಸದಸ್ಯರು ಹೇಳಿದರು. ದುಗ್ಗಲಡ್ಕ ಪ್ರದೇಶದಲ್ಲಿ ಆದ ಕೃಷಿ ನಾಶ ಮತ್ತು ಆನೆಗಳು ಬರುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವ ಬಗ್ಗೆ ಸಂಸದರಿಗೆ, ಉಸ್ತುವಾರಿ ಸಚಿವರು, ಶಾಸಕರಿಗೆ ಮನವಿ ನೀಡುವುದೆಂದು ನಿರ್ಧರಿಸಲಾಯಿತು.ಸಭೆಯಲ್ಲಿ
ಕಜೆ ಕುಶಾಲಪ್ಪ ಗೌಡ,ಶಂಭಯ್ಯ ಪಾರೆ,ಡಾ.ಗಣೇಶ್ ಭಟ್,
ಡಾ.ಸಿ.ಆರ್.ಭಟ್ ,ಹೇಮಂತ ಕುಮಾರ್ ಕಂದಡ್ಕ, ಚಂದ್ರಶೇಖರ ಗೌಡ ಮೋಂಟಡ್ಕ,
ದಯಾನಂದ ಸಾಲಿಯಾನ್ ,
ಶಶಿಕಲಾ ನೀರಬಿದಿರೆ,
ಶೀಲಾವತಿ ಮಾಧವ,
ಜಯರಾಮ ಗೌಡ ಪಾನತ್ತಿಲ,
ರವಿ ಕುಮಾರ್ ಮೈರಾಜೆ,
ಇಬ್ರಾಹಿಂ ನೀರಬಿದಿರೆ,
ಎ.ಟಿ.ಕುಸುಮಾಧರ,
ದಿನೇಶ್ ಮಣಿಯಾಣಿ ದುಗ್ಗಲಡ್ಕ,
ಪ್ರಭಾವತಿ ರೈ ದುಗ್ಗಲಡ್ಕ,
ರಾಜೇಶ್ ಭಟ್ಉಬರಡ್ಕ,
ಹಸೈನಾರ್ ಕೊಳೆಂಜಿಕೋಡಿ,
ರಾಮ್ ಕುಮಾರ್ ಮಂಡೆಕೋಲು,
ಭವಾನಿಶಂಕರ,
ಯಶವಂತ ಕುಡೆಕಲ್ಲು,
ಚಿಂತನ್ ಕೊಯಿಕುಳಿ,
ಸಾಯಿ ರಂಜನ್ ಕಲ್ಚಾರ್,
ಕುಶ ನೀರಬಿದಿರೆ ಮೊದಲಾದವರು ಉಪಸ್ಥಿತರಿದ್ದರು.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!