ಬೆಂಗಳೂರು, ಜೂನ್ 25: ಸಂಪುಟ ವಿಸ್ತರಣೆ ವಿಳಂಬ ಮತ್ತುರಾಜ್ಯದಲ್ಲಿ ಮಳೆ ಆವರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಲುವಾಗಿ ಉಪ ಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ತಕ್ಷಣದಿಂದ ಜಾರಿಗೆ ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪ ಬರುವಂತೆ 3-4 ಮೇಲುಸ್ತುವಾರಿಯಾಗಿ ನೇಮಿಸಿ ರಾಜ್ಯ ಸರಕಾರ ಆದೇಶ ಮಾಡಿದೆ.ಡಾ.ಜಿ.ಪರಮೇಶ್ವರ್- ತುಮಕೂರು ಮತ್ತು ಚಿತ್ರದುರ್ಗ, ಕೆ.ಎಚ್ ಮುನಿಯಪ್ಪ- ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ವಿಜಯನಗರ, ರಾಮಲಿಂಗಾರೆಡ್ಡಿ- ಬೆಂಗಳೂರು ದಕ್ಷಿಣ ಮತ್ತು ಮಂಡ್ಯ ລ໐.໖ ಪಾಟೀಲ್- ವಿಜಯಪುರ ಮತ್ತು ಬಾಗಲಕೋಟ, ಕೆಜೆ ಜಾರ್ಜ್ -ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ, ಕೃಷ್ಣ ಭೈರೇಗೌಡ ಬೆಂಗಳೂರು ನಗರ ಮತ್ತು ಹಾಸನ ಜಿಲ್ಲೆ,ಈಶ್ವರ ಖಂಡ್ರೆ- ಬೀದರ್ ಮತ್ತು ಗದಗ, ಸತೀಶ್ ಜಾರಕಿಹೊಳಿ-ಬೆಳಗಾವಿ, ಧಾರವಾಡ ಮತ್ತು ಹಾವೇರಿ, ಪ್ರಿಯಾಂಕ ಖರ್ಗೆ-ಕಲಬುರ್ಗಿ ಮತ್ತು ಯಾದಗಿರಿ, ಶರಣಪ್ರಕಾಶ್ ಪಾಟೀಲ್-ರಾಯಚೂರು ಮತ್ತು ಕೊಪ್ಪಳ, ಯುಟಿ ಖಾದರ್- ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಉತ್ತರ ಕನ್ನಡ, ಭೈರತಿ ಸುರೇಶ್ ಕೋಲಾರ ಮತ್ತು ಚಿಕ್ಕಬಳ್ಳಾಪುರ, ಯತೀಂದ್ರ ಸಿದ್ದರಾಮಯ್ಯ- ಮೈಸೂರು, ಚಾಮರಾಜನಗರ.ಪೂರ್ತಿ ಸಚಿವ ಸಂಪುಟ ವಿಸ್ತರಣೆ ಆಗದೇ ಇರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರ ನಿಯೋಜನೆ ಆಗಿಲ್ಲ. ಸದ್ಯ ಸಚಿವ ಸ್ಥಾನಕ್ಕಾಗಿ ಹೊಸಬರು ಮತ್ತು ಹಳಬರು ತೀವ್ರ ಲಾಬಿ ನಡೆಸುತ್ತಿರುವುದರಿಂದ ಸಂಪುಟ ವಿಸ್ತರಣೆ ತಡವಾಗುವ ನಿರೀಕ್ಷೆಯಿದೆ. ಈ ಹಿಂದೆ ಪರಿಷತ್ ಚುನಾವಣೆ ಬೆನ್ನಲ್ಲೇ ಸಂಪುಟ ವಿಸ್ತರಣೆ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಈ ನಡುವೆ ಮಳೆಗಾಲ ಆವರಿಸಿದ್ದರಿಂದ ತುರ್ತು ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಹಾಲಿ ಇರುವ ಸಚಿವರಿಗೆ ಎಲ್ಲ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ.
ಸಂಪುಟ ವಿಸ್ತರಣೆ ವಿಳಂಬ ; ಪ್ರಕೃತಿ ವಿಕೋಪ ಮೇಲುಸ್ತುವಾರಿಗೆ ಸಚಿವರ ನೇಮಕ, ಕೆಲವರಿಗೆ 3-4 ಜಿಲ್ಲೆಯ ಉಸ್ತುವಾರಿ, ಯುಟಿ ಖಾದರ್ ಗೆ ಕರಾವಳಿಯ ನಾಲ್ಕು ಜಿಲ್ಲೆಗಳ ಹೊಣೆ !
Savistara
Bureau Report
[t4b-ticker]










































