ಮಾಣಿ-ಸಂಪಾಜೆ ರಾ.ಹೆದ್ದಾರಿ ಚತುಷ್ಪಥ ಯೋಜನೆ

Picture of Savistara

Savistara

Bureau Report

ಪುತ್ತೂರು: ಬಹು ನಿರೀಕ್ಷೆಯ ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ275ರ ಚತುಷ್ಪಥ ಯೋಜನೆಯ ಯೋಜನಾ ವರದಿ(ಡಿಪಿಆರ್) ಸಿದ್ದವಾಗಿದ್ದು ಅದರ ಅಪೂವಲ್‌ಗೆ ಕ್ರಮಕ್ಕಾಗಿ ಸರಕಾರಕ್ಕೆ ಡಿಪಿಆ‌ರ್ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಕಾರದ ಪ್ರಾದೇಶಿಕ ಆಯುಕ್ತರಿಗೆ ಶಾಸಕ ಅಶೋಕ್ ಕುಮಾರ್ ರೈ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರದ ಆಯುಕ್ತ ಟಿ ಶ್ರೀಧ‌ರ್ ಅವರ ಕಚೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿದ ಶಾಸಕರು, ಈಗಾಗಲೇ ರಾಜ್ಯ ಸರಕಾರದ ಮೂಲಕ 3.19 ಕೋಟಿ ರೂ ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಲಾಗಿದೆ. ಲೋಕೋಪಯೋಗಿ ಸಚಿವರಾಗಿದ್ದ ಸತೀಶ್‌ಜಾರಕಿಹೊಳಿಯವರ ಮೂಲಕ ಮಾಣಿ-ಸಂಪಾಜೆ ರಾ. ಹೆದ್ದಾರಿ ಚತುಷ್ಪಥ ಯೋಜನೆಯ ಡಿಪಿಆರ್ ಸಿದ್ದಪಡಿಸಿ ಕೆಲ ತಿಂಗಳುಗಳು ಕಳೆದರೂ ಇನ್ನೂ ಅದನ್ನು ಅಪೂವಲ್‌ಗೆ ರಾಷ್ಟ್ರೀಯ ಹೆದ್ದಾರಿ ಸಚಿವಾಲಯಕ್ಕೆ ಕಳುಹಿಸದ ಕಾರಣ ಈ ಬೃಹತ್ ಯೋಜನೆಗೆ ಹಿನ್ನಡೆಯಾಗಿದೆ ಎಂದು ಹೇಳಿದ ಶಾಸಕ ರೈ, ಇಲಾಖಾ ಮಟ್ಟದಲ್ಲಿ ಆಗಬೇಕಾದ ಕೆಲಸಗಳನ್ನು ತಕ್ಷಣವೇ ಮಾಡುವಂತೆ ಅಽಕಾರಿಗೆ ಮನವಿ ಮಾಡಿದರು.

ಮಾಣಿ-ಸಂಪಾಜೆ ರಾ. ಹೆದ್ದಾರಿ ಚತುಷ್ಪಥ ಯೋಜನೆಯ ಡಿಪಿಆ‌ರ್ ಸಿದ್ಧಪಡಿಸಲಾಗಿದೆ, ಇದಕ್ಕಾಗಿ ಸುಮಾರು 3.19 ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರ ನೀಡಿದ್ದು ಕರ್ನಾಟಕ ಸರಕಾರದಿಂದ ಈ ಯೋಜನೆಗೆ ಆಗಬೇಕಾದ ಕೆಲಸಗಳು ನಡೆದಿದೆ. ನಾವು ಸಿದ್ದಪಡಿಸಿದ ಯೋಜನಾ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿ ಅದಕ್ಕೆ ಅಪೂವಲ್ ಪಡೆದುಕೊಳ್ಳಬೇಕಿದೆ. ಒತ್ತಡ ಹಾಕದೇ ಇದ್ದಲ್ಲಿ ಕೆಲಸಗಳು ನಡೆಯುವುದಿಲ್ಲ ಈ ಕಾರಣಕ್ಕೆ ಇಂದು ಇಲಾಖೆಯ ಆಯುಕ್ತರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ. ಮಾಣಿ-ಸಂಪಾಜೆ ಚತುಷ್ಪಥ ಹೆದ್ದಾರಿಯಾದಲ್ಲಿ ಪುತ್ತೂರು ಇನ್ನಷ್ಟು ಅಭಿವೃದ್ದಿಯಾಗುವುದರ ಜೊತೆಗೆ ಪುತ್ತೂರಿನಿಂದ ಮಂಗಳೂರಿಗೆ ಕೇವಲ ಅರ್ಧಗಂಟೆಯಲ್ಲಿ ತಲುಪಬಹುದಾಗಿದೆ, ಈ ಯೋಜನೆ ಕಾರ್ಯರೂಪಕ್ಕೆ ಬರಬೇಕೆಂಬುದು ನಾಗರಿಕರ ಒತ್ತಾಸೆಯಾಗಿದೆ

  • ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು
[t4b-ticker]
error: Content is protected !!