ಪುತ್ತೂರು: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನೂತನ ಸಂಚಾಲಕರಾಗಿ ಪ್ರಸನ್ನ ದರ್ಬೆ ಆಯ್ಕೆ

Picture of Savistara

Savistara

Bureau Report

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತಕ್ಕೊಳಪಟ್ಟ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿಯ ನೂತನ ಸಂಚಾಲಕ (Correspondent) ಆಗಿ ಶ್ರೀ ಪ್ರಸನ್ನ ದರ್ಬೆ ಅವರು ನೇಮಕಗೊಂಡಿದ್ದಾರೆ.

ಶ್ರೀಯುತರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಟ್ರಸ್ಟಿ ಯಾಗಿ,ಶ್ರವಣಬೆಳಗೋಲ ಮಸ್ತಕಾಭಿಷೇಕ ಸಂದರ್ಭದಲ್ಲಿ ತಾಂತ್ರಿಕ ನಿರ್ವಹಣೆ ನಿರ್ವಹಿಸಿದ್ದರು KRDCL ವಿಭಾಗ ಎಂಜಿನಿಯರ್ ಗಿ ಅನೇಕ ಸೇತುವೆಗಳ ವಿನ್ಯಾಸಕರಾಗಿ ಕೆಲಸ ಮಾಡಿದ್ದಾರೆ ಪ್ರಸ್ತುತ ಜಿಲ್ಲಾ ಬಿಜೆಪಿ ಪ್ರಕೋಷ್ಠ ಸಹ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಹಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆ ಯಲ್ಲಿ ಸಕ್ರಿಯರಾಗಿರುವ ಪ್ರಸನ್ನ ದರ್ಬೆ ಅವರ ಸೇವೆ ಹಾಗೂ ಸಂಘಟನಾ ಅನುಭವವನ್ನು ಪರಿಗಣಿಸಿ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ನೂತನ ಸಂಚಾಲಕರಿಗೆ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

[t4b-ticker]
error: Content is protected !!