ಸುಬ್ರಹ್ಮಣ್ಯ: ನಮ್ಮ ನೆಚ್ಚಿನ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಈ ಸುದಿನದೊಂದಿಗೆ, ಅವರ 25 ವರ್ಷಗಳ ಸುದೀರ್ಘ ಹಾಗೂ ನಿಸ್ವಾರ್ಥ ಸಾರ್ವಜನಿಕ ಸೇವೆಯ ಅಪೂರ್ವ ಪಯಣವನ್ನೂ ನಾವು ಸಂಭ್ರಮದಿಂದ ಸ್ಮರಿಸುತ್ತಿದ್ದೇವೆ. ಅವರ ಈ ಸೇವಾ ಪಥವು #ಜನಸೇವೆಯ ನಿಜವಾದ ಶಕ್ತಿ ಮತ್ತು ಶಕ್ತಿಶಾಲಿ ಹಾಗೂ #ಆತ್ಮನಿರ್ಭರ_ಭಾರತ ನಿರ್ಮಾಣದ ಆಶಯಕ್ಕೆ ದಾರಿದೀಪವಾಗಿದೆ.ಈ ಶುಭ ಸಂದರ್ಭದಲ್ಲಿ ಪ್ರಧಾನಿಯವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ನಿರಂತರ ದೇಶಸೇವೆಗಾಗಿ ಪ್ರಾರ್ಥಿಸಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಮಹಾಪೂಜೆ ಸೇವೆ ಸಲ್ಲಿಸಲಾಯಿತು.

ಈ ಪುಣ್ಯ ಸೇವೆಯಲ್ಲಿ ಶ್ರೀಮತಿ ವನಜ ವಿ. ಭಟ್, ಶ್ರೀಮತಿ ಶೋಭಾ ಗಿರಿಧರ್ (ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ), ಶ್ರೀ ಗಿರೀಶ್ ಆಚಾರ್ಯ ಪೈಲಾಜೆ (ಅಧ್ಯಕ್ಷರು, ಹಿಂದುಳಿದ ವರ್ಗಗಳ ಮೋರ್ಚಾ, ಸುಳ್ಯ ಮಂಡಲ), ಶ್ರೀ ಕುಮಾರ್ ಬಿಲದ್ವಾರ, ಶ್ರೀ ಅಚ್ಯುತ ಗೌಡ ಕುಪ್ಪಪ್ಪನಮನೆ (ನಿರ್ದೇಶಕರು, ಎಲ್.ಡಿ. ಬ್ಯಾಂಕ್ ಸುಳ್ಯ), ಶ್ರೀಮತಿ ಸುಜಾತಾ ಧನಂಜಯ (ಮಾಜಿ ಅಧ್ಯಕ್ಷರು, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್), ಶ್ರೀಮತಿ ಭಾರತಿ ದಿನೇಶ್ (ನಿಕಟಪೂರ್ವ ಸದಸ್ಯರು, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್), ಶ್ರೀ ಈಶ್ವರಗೌಡ ಅರಂಪಾಡಿ (ಹಿರಿಯ ಬಿಜೆಪಿ ಕಾರ್ಯಕರ್ತರು), ಶ್ರೀ ಕಿರಣ್ ಫೈಲಾಜೆ (ನಿರ್ದೇಶಕರು, ಐನಕ್ಕಿದು ಸುಬ್ರಹ್ಮಣ್ಯ ಕೃಷಿಪತ್ತಿನ ಸಹಕಾರಿ ಸಂಘ), ಶ್ರೀ ಯಶವಂತ ಕೊಪ್ಪಳದಡ್ಡೆ (ಅಧ್ಯಕ್ಷರು, ಬಿಜೆಪಿ ಬೂತ್ ಸಮಿತಿ, ಐನೆಕ್ಕಿದು), ಶ್ರೀ ಅಜಿತ್ ಕಲ್ಲೇರಿ (ಕಾರ್ಯದರ್ಶಿ, ಬಿಜೆಪಿ ಬೂತ್ ಸಮಿತಿ, ಐನೆಕ್ಕಿದು), ಶ್ರೀ ರಮೇಶ್ ಕುಮಾರ್ (ಸದಸ್ಯರು, ಬಿಜೆಪಿ ಬೂತ್ ಸಮಿತಿ, ಐನೆಕ್ಕಿದು), ಶ್ರೀ ರಾಧಾಕೃಷ್ಣ ಆರು (ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್ ಬಜರಂಗದಳ, ಸುಬ್ರಹ್ಮಣ್ಯ ಘಟಕ) ಹಾಗೂ ಪ್ರಮುಖರಾದ ಶ್ರೀ ರೋಹಿತ್ ಕುಲ್ಕುಂದ ಉಪಸ್ಥಿತರಿದ್ದರು.
















































