ಆಳ್ವಾಸ್ ಮೆಡಿಕಲ್ ಕಾಲೇಜು ಉದ್ಘಾಟಿಸಿದ ಪ್ರಹ್ಲಾದ್ ಜೋಶಿ

Picture of Savistara

Savistara

Bureau Report

ಮೂಡುಬಿದಿರೆ: ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಮಹತ್ವಾಕಾಂಕ್ಷಿ ಹೆಜ್ಜೆಯಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್‌ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ (ಆಳ್ವಾಸ್ ಮೆಡಿಕಲ್ ಕಾಲೇಜು) ಸೆ. 21ರಂದು ಮಿಜಾರಿನ ಶ್ರೀಮತಿ ಶೋಭಾ ಮೋಹನ ಆಳ್ವ ಆವರಣದಲ್ಲಿ ಉದ್ಘಾಟನೆಗೊಂಡಿತು.ಆವರಣದ ಮಿಜಾರುಗುತ್ತು ಶ್ರೀಮತಿ ಸುಂದರಿ ಆನಂದ ಆಳ್ವ ವೇದಿಕೆಯಲ್ಲಿ ಕಾಲೇಜು ಉದ್ಘಾಟಿಸಿ ಮಾತನಾಡಿದ ಕೇಂದ್ರದ ಶಿಕ್ಷಣ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗ್ರಾಹಕ ವ್ಯವಹಾರಗಳು, ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ‘ಆಳ್ವಾಸ್ ಪರಿಗಣಿತ ವಿಶ್ವವಿದ್ಯಾಲಯದ ಮಾನ್ಯತೆ ಇನ್ನೊಂದು ತಿಂಗಳಲ್ಲಿ ಸಿಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ನಮ್ಮ ಮುಂಬೈ ಕರ್ನಾಟಕದ ಜನ ದೇವರ ಬಳಿ ಧರ್ಮಸ್ಥಳಕ್ಕೆ ಹಾಗೂ ಶಿಕ್ಷಣಕ್ಕೆ ಮೂಡುಬಿದಿರೆ ಆಳ್ವಾಸ್‌ಗೆ ಬರುತ್ತಾರೆ. ಆಳ್ವರೇ ನಿಮಗೆ ದೇವರ ಆಶೀರ್ವಾದ ಇದೆ’ ಎಂದು ಸಂತಸ ಹಂಚಿಕೊಂಡರು. ‘ನೂರು ಕೈಯಿಂದ ಗಳಿಸಿ, ಸಾವಿರ ಕೈಗಳಿಂದ ಕೊಡುಬೇಕು’ ಎಂಬುದನ್ನು ನಮ್ಮ ಸಂಸ್ಕೃತಿ ಹೇಳುತ್ತದೆ. ಅದಕ್ಕೆ ನಿದರ್ಶನ ಆಳ್ವರು. ಅಶಕ್ತರಿಗೆ ಕೊಡುವ ಸಂಸ್ಥೆ ಆಳ್ವಾಸ್ ಎಂದು ಬಣ್ಣಿಸಿದರು. ‘ಜಗತ್ತು ವೃದ್ಧ ಆಗುತ್ತಿದೆ. ಆದರೆ, ಭಾರತ ಯುವಜನರ ದೇಶ. ಭಾರತದ ವೈದ್ಯ ಹಾಗೂ ಶುಶೂಷಕರ ಮೇಲೆ ವಿಶ್ವಾಸ ಹೆಚ್ಚುತ್ತಿದೆ. ದಕ್ಷಿಣ ಕನ್ನಡವು ಜಗತ್ತಿನ ವೈದ್ಯಕೀಯ ಕೇಂದ್ರ ಆಗಲಿ ಎಂದರು. ವೈದ್ಯಕೀಯ ಸಂಶೋಧನೆಯಲ್ಲಿ ಮಾನವೀಯತೆ ಅವಶ್ಯ ಎಂದ ಅವರು, ಕೌಶಲ ಮತ್ತು ಧೈರ್ಯ ವಿದ್ಯಾರ್ಥಿಗಳಿಗೆ ಬೇಕು. ಅಂತಹ ಸೇವಾ ಸಂಕಲ್ಪ ಭಾರತದಲ್ಲಿ ಇದೆ ಎಂದು ವಿವರಿಸಿದರು. ಯುವಜನತೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಕ್ಕಳ ಮೇಲೆ ಒತ್ತಡ ಹಾಕಬೇಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು. ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ವಿದ್ಯುತ್ ಉತ್ಪಾದನೆ ಹೆಚ್ಚಾಗುತ್ತಿರುವುದು ಇದಕ್ಕೊಂದು ನಿದರ್ಶನ ಎಂದರು. ಭಾರತವು ಇಂದು 863 ಬಿಲಿಯನ್ ಡಾಲರ್ ರಫ್ತು ಮಾಡುತ್ತಿದೆ. 300ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸುತ್ತಿದೆ. ದೇಶದ ಆರ್ಥಿಕ ಸಾಧನೆ ಕಂಡು

ಹಲವು ರಾಷ್ಟ್ರಗಳು ನಮ್ಮ ಜೊತೆ ಮುಕ್ತ ಒಪ್ಪಂದ ಮಾಡಿಕೊಳ್ಳುತ್ತಿವೆ ಎಂದರು. ಶೇ98ರಷ್ಟು ಮೊಬೈಲ್ ಉತ್ಪಾದನೆಯನ್ನು ಭಾರತವೇ ಇಂದು ಮಾಡುತ್ತಿದೆ. ಮುಂದಿನ 6ಜಿ ತಂತ್ರಜ್ಞಾನವನ್ನು ಭಾರತ ನೀಡಲಿದೆ ಎಂದು ಭವಿಷ್ಯ ನುಡಿದರು.ಭಾರತದಲ್ಲಿ ಪ್ರಸ್ತುತ 1.4ಲಕ್ಷ ವೈದ್ಯಕೀಯ ಸೀಟುಗಳಿವೆ. 1.03 ಲಕ್ಷ ಪೇಟೆಂಟ್, 2.3 ಲಕ್ಷ ಸ್ಟಾರ್ಟ್ ಅಪ್‌ಗಳು ಸೇರಿದಂತೆ ಭಾರತದ ಶೈಕ್ಷಣಿಕ ಸಾಧನೆ ಜಾಗತಿಕ ಗಮನ ಸೆಳೆಯುತ್ತಿದೆ ಎಂದರು. ‘ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಟಾರ್ಟ್ ಅಪ್‌ಗಳು ರಾಜ್ಯ ಹಾಗೂ ದಕ್ಷಿಣ ಕನ್ನಡದಿಂದ ಬರಲಿ’ ಎಂದು ಆಶಿಸಿದ ಅವರು, ಹೊಸ ಯೋಚನೆ -ಯೋಜನೆ ವೈದ್ಯಕೀಯ ಕ್ಷೇತ್ರದಿಂದ ಬರಲಿ’ ಎಂದರು. ಯುವ ಜನತೆಗೆ ಸಾಕಷ್ಟು ಅವಕಾಶಗಳಿವೆ. ಕೇಂದ್ರವು ಪ್ರಸ್ತುತ 2.5 ಲಕ್ಷ ಕೋಟಿ ರೂಪಾಯಿ ಸಂಶೋಧನೆಗೆ ಮೀಸಲು ಇಟ್ಟಿದೆ. 21ನೇ ಶತಮಾನ ಭಾರತದ್ದು, 2047 ಕ್ಕೆ ವಿಕಸಿತ ಭಾರತ ಆಗಲಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್. ತಿಪ್ಪೇಸ್ವಾಮಿ ಮಾತನಾಡಿ, ಶಿಕ್ಷಣದ ಜೊತೆ ಸಂಸ್ಕಾರ ಅವಶ್ಯ. ಇದಕ್ಕೆ ಅತ್ಯುತ್ತಮ ಸಂಸ್ಥೆ ಆಳ್ವಾಸ್‌. ಆಳ್ವಾಸ್‌ ಸಾಮಾಜಿಕ ಬದ್ಧತೆ ಶ್ಲಾಘನೀಯ ಎಂದರು.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ ಮಾತನಾಡಿ, ಆಳ್ವಾಸ್ ನಮ್ಮ ವಿ.ವಿ.ಯ ಭಾಗವಾಗಿರುವುದು ನಮ್ಮೆಲ್ಲರ ಹೆಮ್ಮೆ. ಶಿಕ್ಷಣ ಮಿದುಳಿನ ಜೊತೆ ಹೃದಯಕ್ಕೂ ಸಿಗಬೇಕು ಎಂಬ ಸಾಕ್ರೆಟಿಸ್ ಮಾತಿಗೆ ಡಾ. ಎಂ ಮೋಹನ ಆಳ್ವರ ಮಾದರಿ ಅತ್ಯುತ್ತಮ ನಿದರ್ಶನ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ ಆಳ್ವ, ಆಳ್ವಾಸ್ ಮೆಡಿಕಲ್‌ ಕಾಲೇಜು ನಿರ್ಮಾಣದ ಹಿಂದೆ ಶ್ರಮಿಸಿದ, ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು.ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಹಿರಿಯ ವೈದ್ಯರು ಹಾಗೂ ವೈದ್ಯಕೀಯ ದಿಗ್ಗಜರ ಸ್ಮರಣೆಯನ್ನು ಗೌರವಿಸುವ ಉದ್ದೇಶದಿಂದ ಕಾಲೇಜಿನ ವಿವಿಧ ಚಿಕಿತ್ಸಾ ಕೇಂದ್ರಗಳು ಮತ್ತು ವಿಭಾಗಗಳಿಗೆ ಟಿ.ಎಂ.ಎ. ಪೈ, ಡಾ. ಎಸ್. ಕಾಂತ, ಡಾ. ಶಂಕರ್ ನಾಯಕ್, ಡಾ. ವಿ.ಎಸ್. ಆಚಾರ್ಯ, ಡಾ. ಶಾಂತರಾಮ್ ಶೆಟ್ಟಿ, ವಿನಯ್ ಹೆಗ್ಡೆ, ಡಾ. ಚಂದ್ರಶೇಖ‌ರ್ ಶೆಟ್ಟಿ,

ಡಾ. ಸುಧಾಕರ್ ಶೆಟ್ಟಿ, ಡಾ. ವಿ.ಎಸ್. ಕಾಮತ್, ಡಾ. ಮನೋರಮಾ, ಡಾ. ಕೃಷ್ಣಮೂರ್ತಿ ಹಾಗೂ ಡಾ. ಅಮರನಾಥ ಹೆಗ್ಡೆ ಅವರ ಹೆಸರುಗಳನ್ನು ಇಡಲಾಗಿದೆ ಎಂದು ಅವರು ತಿಳಿಸಿದರು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮನ ಸೆಳೆಯಿತು.ಉಮಾನಾಥ ಎ. ಕೋಟ್ಯಾನ್, ಶಾಸಕರು, ಮೂಡುಬಿದಿರೆ, ಡಾ. ಎಸ್. ಕಾಂತಾ, ಮೊದಲ ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ., ಡಾ. ಎಸ್. ಚಂದ್ರಶೇಖ‌ರ್ ಶೆಟ್ಟಿ, ವಿಶ್ರಾಂತ ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ., ಡಾ. ಎಚ್.ಎಸ್. ಬಲ್ಲಾಳ್, ಕುಲಾಧಿಪತಿಗಳು, ಮಾಹೆ, ಡಾ. ರಮಾನಂದ ಶೆಟ್ಟಿ, ವಿಶ್ರಾಂತ ಕುಲಪತಿಗಳು, ಡಾ. ಎಸ್. ಸಚ್ಚಿದಾನಂದ, ವಿಶ್ರಾಂತ ಕುಲಪತಿಗಳು, ಡಾ. ಜಯಕರ್ ಶೆಟ್ಟಿ, ವಿಶ್ರಾಂತ ಕುಲಪತಿಗಳು, ಡಾ. ಪಿ.ಎಲ್. ಧರ್ಮ, ಕುಲಪತಿಗಳು, ಮಂಗಳೂರು ವಿ.ವಿ., ಡಿ. ಸುರೇಂದ್ರ ಕುಮಾರ್, ಧರ್ಮಸ್ಥಳ, ಡಿ. ಹರ್ಷೇಂದ್ರ ಕುಮಾ‌ರ್, ಧರ್ಮಸ್ಥಳ, ಡಾ. ಎ.ಜೆ. ಶೆಟ್ಟಿ, ಅಧ್ಯಕ್ಷರು,

ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್‌ ಟ್ರಸ್ಟ್, ವಿಶಾಲ್ ಹೆಗ್ಡೆ,ಕುಲಾಧಿಪತಿಗಳು, ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ, ಡಾ.ಅಬ್ದುಲ್ ಕುಂ ಪರಿಣಾಮÂ ಕುಲಾಧಿಪತಿಗಳು, ಯೆನೆಪೊಯ ಪರಿಗಣಿತವಿಶ್ವವಿದ್ಯಾನಿಲಯ, ಮಂಗಳೂರು, ಫೌಸ್ಟಿನ್ ಲ್ಯೂಕಸ್ಲೋಬೋ, ನಿರ್ದೇಶಕರು, ಫಾದರ್ ಮುಲ್ಲರ್ ಚಾರಿಟೆಬಲ್ಇನ್‌ಸ್ಟಿಟ್ಯೂಷನ್ಸ್, ಮಂಗಳೂರು, ಡಾ. ಹಾಜಿ ಯು.ಕೆ. ಮೋನು,ಅಧ್ಯಕ್ಷರು, ಕಣಚೂರು ಸಮೂಹ ಸಂಸ್ಥೆಗಳು, ಡಾ. ರಾಜೇಶ್ಶೆಟ್ಟಿ, ವೈದ್ಯಕೀಯ ನಿರ್ದೇಶಕರು, ಫಸ್ಟ್ ನ್ಯೂರೋ ಹಾಸ್ಪಿಟಲ್ಸ್,ಡಾ. ಪ್ರಕಾಶ್‌ ಶೆಟ್ಟಿ, ಪ್ರವರ್ತಕರು ಮತ್ತು ಅಧ್ಯಕ್ಷರು, ಎಂಆರ್‌ಜಿಗ್ರೂಪ್, ಕಿಶೋರ್ ಆಳ್ವ, ಕಾರ್ಯನಿರ್ವಾಹಕ ನಿರ್ದೇಶಕರುಹಾಗೂ ಅಧ್ಯಕ್ಷರು, ಅದಾನಿ ಸಮೂಹ, ಕರ್ನಾಟಕ, ರೆ. ಫಾ.ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಧರ್ಮಗುರುಗಳು, ಮಂಗಳೂರುಧರ್ಮಪ್ರಾಂತ್ಯ, ಡಾ. ಎಂ.ಎಸ್. ಆಳ್ವ, ಮುಂಬೈ, ರಾಮಚಂದ್ರಶೆಟ್ಟಿ, ಕೊಡ್ಡಣ್‌ ಗುತ್ತು, ಶ್ರೀನಿವಾಸ ಆಳ್ವ, ಮಿಜಾರುಗುತ್ತು,ಶ್ರೀಪತಿ ಭಟ್‌, ಉದ್ಯಮಿಗಳು, ಮೂಡುಬಿದಿರೆ, ಕುಲದೀಪ ಎಂ.,ಚೌಟರ ಅರಮನೆ, ಮೂಡುಬಿದಿರೆ, ಡಾ. ಪಿ.ಜಿ.ಆ‌ರ್. ಸಿಂಧ್ಯಾ,ರಾಜ್ಯ ಪ್ರಧಾನ ಆಯುಕ್ತರು, ಭಾರತ್ ಸೌಟ್ಸ್ ಮತ್ತು ಗೈಡ್ಸ್,ಕರ್ನಾಟಕ, ಕೆ. ಅಭಯಚಂದ್ರ ಜೈನ್, ಮಾಜಿ ಸಚಿವರು,

ವಿನಯ ಕುಮಾರ್ ಸೊರಕೆ, ಮಾಜಿ ಸಚಿವರು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ವಿಧಾನಪರಿಷತ್‌ ಸದಸ್ಯರು, ಡಾ. ಶಾಂತಾರಾಮ್ ಶೆಟ್ಟಿ, ಸ್ಥಾಪಕ ಅಧ್ಯಕ್ಷರು, ತೇಜಸ್ವಿನಿ ಆಸ್ಪತ್ರೆ, ಮಂಗಳೂರು, ಡಾ. ಕಿರಣ್ ಕೆ.ವಿ. ಆಚಾರ್ಯ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮೂಳೆಚಿಕಿತ್ಸಾ ವಿಭಾಗ, ಕೆಎಂಸಿ, ಮಣಿಪಾಲ, ಜಯಶ್ರೀ ಅಮರನಾಥ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಡಾ. ಅಮರಶ್ರೀ, ಅಧ್ಯಕ್ಷರು, ಅಮರನಾಥ್‌ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಡಾ. ಶಿವಶರಣ್ ಶೆಟ್ಟಿ, ನಿಕಟಪೂರ್ವ ಸಿಂಡಿಕೇಟ್, ಡಾ. ವೈಶಾಲಿ ಶ್ರೀಜಿತ್‌, ಸೆನೆಟ್ ಸದಸ್ಯರು, ಪ್ರವೀಣ್ ಕುಮಾ‌ರ್, ಆಡಳಿತ ನಿರ್ದೇಶಕರು, ಬಿಮಾಲ್ ಬಿಲ್ಡಾನ್ ಪ್ರೈ.ಲಿ., ಪಂಕಜಾ ಶಂಕರ ನಾಯಕ್, ಸ್ಥಾಪಕಾಧ್ಯಕ್ಷರು, ಡಾ. ಶಂಕರ್ ನಾಯಕ್ ಚಾರಿಟೆಬಲ್ ಟ್ರಸ್ಟ್, ಮಂಜರಿ ಪ್ರವೀಣ್ ಸಲ್ದಾನ, ಸಲ್ದಾನ ಮತ್ತು ಅಸೋಸಿಯೇಟ್ಸ್, ಎಂ.ಬಿ.ಪುರಾಣಿಕ್, ಕಿಶೋರ್ ಆಳ್ವ, ಡಾ.ಎಂ.ಎಸ್.ಆಳ್ವ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮುಸ್ತಫಾ ಎಸ್‌.ಎಂ., ವ್ಯವಸ್ಥಾಪಕ ನಿರ್ದೇಶಕರು, ಭಾರತ್‌ ಇನ್‌ಫ್ರಾಟೆಕ್ ಪ್ರೈ., ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮತ್ತು ಡಾ.ವಿನಯ್ ಆಳ್ವ

ಹಾಗೂ ಗ್ರೀಷ್ಮಾ ವಿವೇಕ್ ಆಳ್ವ, ಹನ್ನಾ ವಿನಯ್ ಆಳ್ವ, ಉದ್ಯಮಿ ಶ್ರೀಪತಿ ಭಟ್ ಮತ್ತಿತರ ಗಣ್ಯರು ಇದ್ದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.

ಆರೋಗ್ಯ- ಅಧ್ಯಾತ್ಮಿಕ ಗುಣಮುಖ ರಾಜಧಾನಿ ದಕ್ಷಿಣ ಕನ್ನಡ: ಚೌಟ

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಆಳ್ವಾಸ್ ಮೆಡಿಕಲ್‌ ಕಾಲೇಜು ಮೂಲಕ ಶಿಕ್ಷಣ ಪ್ರೇಮಿಗಳ ಬೇಡಿಕೆ, ಆಳ್ವರ ಕನಸು, ಜನರ ಅಪೇಕ್ಷೆ ಈಡೇರಿದೆ. ಆಳ್ವರ ಸಾಧನೆಗೆ ಅವರೇ ಸಾಟಿ ಎಂದರು. ಆರ್ಥಿಕವಾಗಿ ಕೈಗೆಟಕುವ, ಗುಣಮಟ್ಟದ, ಸುಲಭವಾಗಿ ದೊರೆಯುವ ಆರೋಗ್ಯ ಸೇವೆ ನಮ್ಮದಾಗಬೇಕು ಎಂಬುದು ಕೇಂದ್ರ ಸರ್ಕಾರದ ಕನಸು. ಕೇಂದ್ರದ ಈ ನೀತಿಯ ಕಾರಣ ಇಂದು ವೇಗವಾಗಿ ಆರೋಗ್ಯ ಕ್ಷೇತ್ರ ಅಭಿವೃದ್ಧಿ ಕಾಣುತ್ತಿದೆ ಎಂದ ಅವರು, ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಕೈಜೋಡಿಸಿ ಎಂದು ವಿನಂತಿಸಿದರು. ಆರೋಗ್ಯ ಮತ್ತು ಅಧ್ಯಾತ್ಮಿಕ ಗುಣಮುಖ ರಾಜಧಾನಿ ದಕ್ಷಿಣ ಕನ್ನಡ ಆಗಲಿ. ಆರೋಗ್ಯ ದೇವಾಲಯ ಹೆಚ್ಚಾಗಲಿ. ವೈದ್ಯಕೀಯ ಪ್ರವಾಸಿತಾಣವಾಗಲಿ ಎಂದ ಅವರು, ಆಳ್ವಾಸ್ ಪರಿಗಣಿತ ವಿಶ್ವವಿದ್ಯಾನಿಲಯ ಬೇಗನೇ ನನಸಾಗಲಿ ಎಂದರು.

[t4b-ticker]
error: Content is protected !!