ಕುಕ್ಕೆ ಸುಬ್ರಮಣ್ಯ ದೇವಸ್ಥಾನ ನಕಲಿ ವಿಡಿಯೋ ಮೂಲಕ ವಂಚನೆ ಆರೋಪ | ಕುಕ್ಕೆ ಸುಬ್ರಮಣ್ಯ ಪಾವಿತ್ರ್ಯತೆ ಉಳಿಸಿ,ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕುಕ್ಕೆ ದೇವಸ್ಥಾನ ಮಾಜಿ ಟ್ರಸ್ಟಿ ಪ್ರಸನ್ನ ದರ್ಬೆ ಒತ್ತಾಯ

Picture of Savistara

Savistara

Bureau Report

5000 ವರ್ಷಗಳ ಇತಿಹಾಸ, ವಿಜಯನಗರದ ಬುಕ್ಕರಾಯರಿಂದ ಹಿಡಿದು ಕೆಂಪೇಗೌಡರು, ಇಕ್ಕೇರಿ ಮತ್ತು ಮೈಸೂರು ಮಹಾರಾಜ ಸೇರಿದಂತೆ ಅನೇಕ ರಾಜ ಮಹಾರಾಜರುಗಳ ಸೇವೆ ಪಡೆದಂತಹ ನಮ್ಮ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ದುರುಪಯೋಗ ಮಾಡುತ್ತಿರುವುದು ದುಃಖದ ವಿಚಾರ.ಇಂದು ದೇವಾಲಯದಲ್ಲಿ ನಡೆಯಬೇಕಾದ ಪೂಜೆಗಳು ಗ್ಯಾರೇಜ್, ಅಂಗಡಿ, ಕಾರ್ ಶೆಡ್, ಟಾರ್ಪಾಲಿನ್ ಹಾಕಿದ ಅಂಗಳದಲ್ಲಿ ನಡೆಯುತ್ತಿವೆ. “ಸಿಕ್ಕಿದಲ್ಲೆಲ್ಲಾ ಪೂಜೆ” ಎಂಬ ಪರಿಸ್ಥಿತಿ ಬಂದಿದೆ.750 ರೂಪಾಯಿ ಪಾವತಿಸಿ ರಶೀದಿ ಪಡೆಯಿರಿ ವಂಚನೆ ನಡೆಯುತ್ತಿದ್ದೂ ದೇವಸ್ಥಾನದ ಪೂಜೆಯ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಮೋಸದ ದಂಧೆಯೂ ಶುರುವಾಗಿದೆ ಇಂದು ದೇವಾಲಯಕ್ಕೆ ಬರುವ ಭಕ್ತರನ್ನು ಬೀದಿಯಲ್ಲಿ ಕೈ ಹಿಡಿದು ಎಳೆದುಕೊಂಡು ಹೋಗಿ, “ನಾವು ಬೇರೆ ಕಡೆ ನಿಮನ್ನು ಮಾತ್ರ ಕೂರಿಸಿ ಪೂಜೆ ಮಾಡಿಸಿಕೊಡುತ್ತೇವೆ” ಎಂದು ದಾರಿ ತಪ್ಪಿಸುವ ದೃಶ್ಯಗಳನ್ನು ನೋಡುತ್ತಿದ್ದೇವೆ ಈ ಬಗ್ಗೆ ಆಡಳಿತ ಮಂಡಳಿ,ಮುಜರಾಯಿ ಇಲಾಖೆ ಕ್ರಮ ಕೈಗೊಳ್ಳುವಂತೆ ಕುಕ್ಕೆ ದೇವಸ್ಥಾನ ಮಾಜಿ ಸದಸ್ಯ ಪ್ರಸನ್ನ ದರ್ಬೆ ಒತ್ತಾಯಿಸಿದ್ದಾರೆ ದೇವಾಲಯದ ಆದಾಯ 100 ಕೋಟಿಯಿಂದ 150 ಕೋಟಿಗೆ ಏರಿದೆ. ಆದರೆ ಸಿಬ್ಬಂದಿಗಳ ಸಂಖ್ಯೆ ಏರಿಕೆಯಾಗಿಲ್ಲ ಅವರ ಕಷ್ಟ ಯಾರು ಕೇಳುವವರಿಲ್ಲ ಹೆಚ್ಚುವರಿ ಕೆಲಸದ ಹೊರೆ ಎಲ್ಲವೂ ಅವರ ಮೇಲೆಯೇ.ಅರ್ಚಕರ ಪರಿಸ್ಥಿತಿ ಇನ್ನೂ ದಯನೀಯ. 7 ಜನ ಮುಖ್ಯ ಅರ್ಚಕರು ಇರಬೇಕಾದಲ್ಲಿ ಇವಾಗ ಇರುವುದು ಕೇವಲ 4 ಜನ ಮಾತ್ರ. ಬೆಳಿಗ್ಗೆ 5 ಗಂಟೆಗೆ ಬರಿ ಹೊಟ್ಟೆಯಲ್ಲಿ ಮಡಿ ಹಿಡಿದು ನಿಲ್ಲುವ ಅರ್ಚಕರು ಮಧ್ಯಾಹ್ನ 1:30ರವರೆಗೂ ನೀರು ಸಹ ಮುಟ್ಟದೆ ನಿಲ್ಲಬೇಕಾಗುತ್ತದೆ ಅದು ಇಲ್ಲಿನ ಪದ್ಧತಿ. ಆದರೆ ಇವಾಗ ಇನ್ನು ಒಂದು ಗಂಟೆ ಹೆಚ್ಚುವರಿ ನಿಲ್ಲಬೇಕೆಂದು ಆದೇಶಗಳು ಬಂದಿದ್ದು ಇಲ್ಲಿ ಬರುವ ಲಕ್ಷಾಂತರ ಭಕ್ತರ ಅನುಕೂಲ, ಅರ್ಚಕರು ಮತ್ತು ಸಿಬ್ಬಂದಿಗಳ ಬದುಕು – ಇವೆಲ್ಲವೂ ಈಗ ಪ್ರಶ್ನಾರ್ಹವಾಗಿದೆ. ಆಡಳಿತ ಮಂಡಳಿ ಈ ಬಗ್ಗೆ ಗಂಭೀರ ಚಿಂತನೆ ಅಗತ್ಯವಿದೆ, ಈ ಹಿಂದೆ ಅವಧಿಯಲ್ಲಿ ಪೊಲೀಸ್ ಇಲಾಖೆ ಮೂಲಕ ಇಂತಹ ಜಾಲವನ್ನು ಹತ್ತಿಕ್ಕಿದ್ದೆವು,ದೇವಾಲಯ ಮತ್ತು ಭಕ್ತರ ಹಿತಕ್ಕಾಗಿ ನಾವು ಪಕ್ಷಾತೀತವಾಗಿ ಬೆಂಬಲ ಕೊಡಲು ಸಿದ್ಧರಿದ್ದೇವೆಂದು ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯ ಪ್ರಸನ್ನ ದರ್ಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ

[t4b-ticker]
error: Content is protected !!