ನವದೆಹಲಿ: ಬಿಜೆಪಿಯ ಸಾಮಾಜಿಕ ಮಾಧ್ಯಮ (ಐಟಿ) ವಿಭಾಗದ ಮುಖ್ಯಸ್ಥರಾಗಿದ್ದ ಅಮಿತ್ ಮಾಳವೀಯ ಹಾಗೂ ಯುವ ಮೋರ್ಚಾದ ಅಧ್ಯಕ್ಷರಾಗಿದ್ದ ತೇಜಸ್ವಿ ಸೂರ್ಯ ಅವರನ್ನು ಕೈಬಿಡಲಾಗಿದೆ.
ಪಕ್ಷದ ಸಾಮಾಜಿಕ ಮಾಧ್ಯಮ (ಐಟಿ) ವಿಭಾಗದ ಮುಖ್ಯಸ್ಥರನ್ನಾಗಿ ದೀಪಕ್ ಮಸ್ಕಿ ಅವರನ್ನು ನೇಮಿಸಲಾಗಿದೆ. 11 ವರ್ಷಗಳಿಂದ ಪಕ್ಷದ ಸಾಮಾಜಿಕ ಮಾಧ್ಯಮ ಪ್ರಚಾರವನ್ನು ಮುನ್ನಡೆಸುತ್ತದ್ದ ಅಮಿತ್ ಮಾಳವೀಯ ಅವರನ್ನು ಕೈಬಿಡಲಾಗಿದೆ.ತೇಜಸ್ವಿ ಸೂರ್ಯ ಅವರನ್ನು ಕೈಬಿಟ್ಟು ಅವರ ಸ್ಥಾನಕ್ಕೆ ಗುಜರಾತ್ ರಾಜ್ಯದ ಡಾ.ಹೇಮಾಂಗ್ ಜೋಶಿ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.ದೀಪಕ್ ಅವರು ಛತ್ತೀಸ್‌ಗಢದ ರಸಾಯನಶಾಸ್ತ್ರ ಪ್ರಾಧ್ಯಾಪಕರು. ಅವರು ಪಕ್ಷದ ವಲಯದಲ್ಲಿ ಹೆಚ್ಚು ಪರಿಚಿತರಲ್ಲ.
‘ಪಕ್ಷವು ಹೊಸ ಎತ್ತರ ಏರಲು ಮತ್ತು ದೇಶದ ಮೂಲೆ ಮೂಲೆಗೆ ತನ್ನ ಸಂಘಟನೆ ವಿಸ್ತರಿಸಲು ಸಿದ್ಧವಾಗುತ್ತಿರುವ ನಿರ್ಣಾಯಕ ಹಂತದಲ್ಲಿ ಈ ನೇಮಕಾತಿ ನಡೆದಿದೆ’ ಎಂದು ಮಾಳವೀಯಾ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.ಮಾಳವೀಯಾ ಅವರು ‘ಫ್ರೆಂಡ್ಸ್ ಆಫ್ ಬಿಜೆಪಿ’ ಎಂಬ ತಂಡದ ಮೂಲಕ 2009 ರಲ್ಲಿ ಪ್ರವರ್ಧಮಾನಕ್ಕೆ ಬಂದವರು. ಅವರನ್ನು ಪಕ್ಷದ ಐಟಿ ವಿಭಾಗದ ಮುಖ್ಯಸ್ಥರನ್ನಾಗಿ 2015 ರಲ್ಲಿ ನೇಮಕ ಮಾಡಲಾಗಿತ್ತು.












































