ಜಾರ್ಖಂಡ್: 2 ಸಾವಿರ ಸರ್ಕಾರಿ ನೌಕರರಿಗೆ ಕೊಕ್?

Picture of Savistara

Savistara

Bureau Report

ರಾಂಚಿ (ಪಿಟಿಐ): ‘ನಾವು ಮಾಡಿದ ಅಪರಾಧವೇನು? ನಮ್ಮನ್ನುಹೊರಗೆ ಎಸೆಯಬೇಡಿ. ನಾವು ತನಿಖೆಯನ್ನು ವಿರೋಧಿಸುತ್ತಿಲ್ಲ. ಆದರೆ, ನಮ್ಮನ್ನು ಸಮರ್ಥಿಸಿಕೊಳ್ಳಲು ಸಹ ನ್ಯಾಯಯುತ ಅವಕಾಶ ನೀಡಿಲ್ಲ’

ಹೊರಗುತ್ತಿಗೆ ಸಂಸ್ಥೆ ಟಿಎಸ್‌ಆರ್ ಡೇಟಾ ಪ್ರೊಸೆಸಿಂಗ್ ಪ್ರೈವೆಟ್ ಲಿಮಿಟೆಡ್ (ಟಿಡಿಪಿಎಲ್) 2014ರಿಂದ ನಡೆಸಿದ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಜಾರ್ಖಂಡ್‌ ಸರ್ಕಾರ ಘೋಷಿಸಿರುವುದರಿಂದ ಸುಮಾರು ಎರಡು ಸಾವಿರ ಜನ ಸರ್ಕಾರಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.2014ರಿಂದ ನಡೆದ ಪರೀಕ್ಷೆಗಳಲ್ಲಿ ಹಲವು ಮಂದಿ ನೇಮಕಗೊಂಡು ಈಗ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಆ ಎಲ್ಲ ಪರೀಕ್ಷೆಗಳ ರದ್ದತಿಯಿಂದಾಗಿ ಅವರೆಲ್ಲರ ನೇಮಕಾತಿಯು ಅನೂರ್ಜಿತಗೊಳ್ಳುತ್ತದೆ. ಅವರು ಮತ್ತೆ ಪರೀಕ್ಷೆ ಬರೆಯಬೇಕಾಗುತ್ತದೆ. ಹಲವರ ವಯಸ್ಸಿನ ಮಿತಿ ದಾಟಿರುವುದರಿಂದ ಅವರಿಗೆ ಆ ಅವಕಾಶವೂ ಸಿಗುವುದಿಲ್ಲ.

ಸರ್ಕಾರದ ನಿರ್ಧಾರವನ್ನು ಖಂಡಿಸಿ 2014ರ ಬಳಿಕ ನೇಮಕಗೊಂಡ ಅಭ್ಯರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

‘ತಾನು ಬಡತನದ ಹಿನ್ನೆಲೆ ಹೊಂದಿದ್ದು, 14ನೇ ಜೆಪಿಎಸ್‌ ಪರೀಕ್ಷೆಯಲ್ಲಿ ಆಯ್ಕೆಯಾಗಿ ಅರಣ್ಯ ಇಲಾಖೆಯ ಅಧಿಕಾರಿಯಾಗಿದ್ದೇನೆ. ನಾವು ಉದ್ಯೋಗವನ್ನು ಖರಿದೀಸಲು ಸಾಧ್ಯವಿಲ್ಲ. ಯಾವುದೇ ತಪ್ಪುಗಳು ಸಾಬೀತಾಗದೆಯೇ ನಮಗೆ ಶಿಕ್ಷೆ ನೀಡಲಾಗುತ್ತಿದೆ’ ಎಂದು ಅಭ್ಯರ್ಥಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ನೇಮಕಾತಿ ನಡೆದ ಕಾರಣಕ್ಕೆ ಸುಮಾರು 500 ಮಂದಿ ಕೇಂದ್ರ ಸರ್ಕಾರದ ನೌಕರಿಯನ್ನು ತ್ಯಜಿಸಿದ್ದಾರೆ. ಈಗ ನಾವು ಎಲ್ಲಿಗೇ ಹೋಗಬೇಕು’ ಎಂದು ಮತ್ತೊಬ್ಬ ಅಭ್ಯರ್ಥಿ ಪ್ರಶ್ನಿಸಿದ್ದಾರೆ.ನೇಮಕಗೊಂಡಿರುವ ಅಭ್ಯರ್ಥಿಗಳು ಕಾನೂನಿನ ಮೊರೆ ಹೋಗಬಹುದು ಎಂದು ಜಾರ್ಖಂಡ್‌ನ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಸುದಿವ್ಯ ಕುಮಾ‌ರ್ ಅವರು ತಿಳಿಸಿದ್ದಾರೆ.

ಮಹತೊ ಸೇರಿ ಮೂವರ ಉಪವಾಸ

ಅಂತ್ಯ ನೇಮಕಾತಿ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಜಾರ್ಖಂಡ್ ಸರ್ಕಾರ ಘೋಷಿಸಿದ ಬೆನ್ನಲ್ಲೇ ಜೆಲ್‌ಎಂ ನಾಯಕ ದೇವೇಂದ್ರ ಮಹತೊ ಸೇರಿದಂತೆ ಮೂವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಸೋಮವಾರ ರಾತ್ರಿ ಅಂತ್ಯಗೊಳಿಸಿದ್ದಾರೆ. ‘ಇನ್ನೂ ಮೂರು ಜನ ತಮ್ಮ ಉಪವಾಸವನ್ನು ಮುಂದುವರಿಸಿದ್ದಾರೆ’ ಎಂದು ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಸುಧಾರಣಾ ಮಂಚ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ.

ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮ ಖಂಡಿಸಿ ಜುಲೈ 25ರಿಂದ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಮಹಾತೊ ಅವರು 16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಪರೀಕ್ಷಾ ಅಕ್ರಮದ ಬಗ್ಗೆ ಸಿಬಿಐ ತನಿಖೆ ನಡೆಸುವವರೆಗೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪ್ರತಿಭಟನಕಾರರು ತಿಳಿಸಿದ್ದಾರೆ.ಮಹತೊ ಅವರಿಗೆ ವಿಡಿಯೊ ಕರೆ ಮಾಡಿದ ಹೋರಾಟಗಾರ ಸೊನಮ್ ವಾಂಗ್ಟಕ್ ಅವರು ‘ಇದು ಎಲ್ಲರ ಗೆಲುವು’ ಎಂದು ಹೇಳಿದರು. ಶೀಘ್ರದಲ್ಲಿ ಎರಡನೇ ಹಂತದ ಪ್ರತಿಭಟನೆ: ನಾನು ಉಪವಾಸ ಕೈಬಿಟ್ಟಿದ್ದೇನೆ ಹೊರತು ಪ್ರತಿಭಟನೆಯನ್ನಲ್ಲ. ಭ್ರಷ್ಟಾಚಾರ ರಹಿತವಾಗಿ ಜೆಪಿಎಸ್‌ಸಿ ಮತ್ತು ಜೆಎಸ್‌ಎಸ್‌ಸಿ ಪರೀಕ್ಷೆ ನಡೆಸುವಂತೆ ಆಗ್ರಹಿಸಿ ಎರಡನೇ ಹಂತದ ಪ್ರತಿಭಟನೆಯನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಜೆಎಲ್‌ಎಂ ನಾಯಕ ದೇವೇಂದ್ರ ಮಹತೊ ಅವರು ತಿಳಿಸಿದ್ದಾರೆ.

[t4b-ticker]
error: Content is protected !!