ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರಲಿದ್ದಾನೆ ಹೊಸ ‘ಕ್ಯಾಪ್ಟನ್’! ನಾಲ್ಕು ಆನೆಗಳ ನಡುವೆ ತೀವ್ರ ಪೈಪೋಟಿ!

Picture of Savistara

Savistara

Bureau Report

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭಗೊಂಡಿದ್ದು, ಈ ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಯಾರು ಹೊರಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಹೆಚ್ಚಾಗಿದೆ.

ಸುದೀರ್ಘ ಕಾಲ ಜಂಬೂಸವಾರಿಯ ನಾಯಕತ್ವ ವಹಿಸಿದ್ದ ‘ಕೂಂಬಿಂಗ್ ಸ್ಟಾರ್’ ಅಭಿಮನ್ಯು ಆನೆಗೆ ವಯೋಸಹಜ ನಿವೃತ್ತಿ ಮತ್ತು ದಂತ ಮುರಿದಿರುವ ಕಾರಣ, ಹೊಸ ಅಂಬಾರಿ ಆನೆಯ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದೆ.
​

ಅಂಬಾರಿ ಹೊರಲು 4 ಆನೆಗಳ ರೇಸ್: ಈ ಬಾರಿ ಚಿನ್ನದ ಅಂಬಾರಿಯನ್ನು ಹೊರಲು ಮಹೇಂದ್ರ, ಧನಂಜಯ, ಪ್ರಶಾಂತ ಹಾಗೂ ಏಕಲವ್ಯ ಆನೆಗಳು ಸಾಮರ್ಥ್ಯ ಹೊಂದಿವೆ. ಮೈಸೂರಿಗೆ ಬಂದ ನಂತರ ಮರಳು ಮೂಟೆ ತಾಲೀಮು, ಮರದ ಅಂಬಾರಿ ತಾಲೀಮು ಮತ್ತು ಸಿಡಿಮದ್ದು ತಾಲೀಮು ನಡೆಸಿದ ಬಳಿಕ ಅಂತಿಮವಾಗಿ ‘ಅಂಬಾರಿ ಕ್ಯಾಪ್ಟನ್’ ಆಯ್ಕೆ ಮಾಡಲಾಗುವುದು ಎಂದು ಮುಖ್ಯ ಅರಣ್ಯಾಧಿಕಾರಿ (CCF) ರವಿಶಂಕರ್ ತಿಳಿಸಿದ್ದಾರೆ.

​ಆಗಸ್ಟ್ 26ಕ್ಕೆ ಗಜಪಯಣ: ದಸರಾದಲ್ಲಿ ಭಾಗವಹಿಸುವ ಮೊದಲ ತಂಡದ 9 ಆನೆಗಳು ನಾಗರಹೊಳೆಯ ವೀರನಹೊಸಹಳ್ಳಿಯಿಂದ ಆಗಸ್ಟ್ 26ರಂದು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಲಿವೆ. ಆಗಸ್ಟ್ 28ರಂದು ಶುಭ ಮುಹೂರ್ತದಲ್ಲಿ ಅರಮನೆಯನ್ನು ಪ್ರವೇಶಿಸಿ, ತೂಕ ತಪಾಸಣೆಯ ನಂತರ ಪ್ರತಿದಿನ ರಾಜಮಾರ್ಗದಲ್ಲಿ ತಾಲೀಮು ನಡೆಸಲಿವೆ.
​

ಮೊದಲ ಹಾಗೂ ಎರಡನೇ ತಂಡದ ಗಜಪಡೆ:
​

ಮೊದಲ ತಂಡ: ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಕಾವೇರಿ, ಮಹೇಂದ್ರ, ಲಕ್ಷ್ಮೀ ಮತ್ತು ಏಕಲವ್ಯ.

​ಎರಡನೇ ತಂಡ: ರೂಪ, ಚೈತ್ರಾ ಹಾಗೂ ಶ್ರೀಕಂಠ.
​ಮೀಸಲು ಆನೆಗಳು: ಭೀಮ (ಮದ ಏರಿರುವ ಕಾರಣ) ಮತ್ತು ಹರ್ಷ.
​

ಅಭಿಮನ್ಯುಗೆ ಬೀಳ್ಕೊಡುಗೆ ಹಾಗೂ ಬಜೆಟ್ ಪ್ರಸ್ತಾವನೆ: ಈ ಬಾರಿ ಅಭಿಮನ್ಯು ಆನೆಯನ್ನು ಮೈಸೂರಿಗೆ ಕರೆತಂದು ಸಾಂಪ್ರದಾಯಿಕವಾಗಿ ಗೌರವಯುತ ಬೀಳ್ಕೊಡುಗೆ ನೀಡಲು ಯೋಜಿಸಲಾಗಿದೆ. ಅಲ್ಲದೆ, 50 ದಿನಗಳ ಕಾಲ ಗಜಪಡೆಯ ನಿರ್ವಹಣೆ ಮತ್ತು ಪೋಷಣೆಗಾಗಿ ಅರಣ್ಯ ಇಲಾಖೆಯು ಸರ್ಕಾರಕ್ಕೆ ₹2 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!