ಕೇರಳದ ಗುರುವಾಯೂರಲ್ಲಿ 7 ತಾಸಲ್ಲಿ 416 ಮದುವೆ! ಒಂದೇ ದಿನದಲ್ಲಿ ಅತಿಹೆಚ್ಚು ವಿವಾಹ: ದಾಖಲೆ

Picture of Savistara

Savistara

Bureau Report

ಗುರುವಾಯೂರು: ಕೇರಳದ ಪ್ರಸಿದ್ದ ಗುರುವಾಯೂರು ಶ್ರೀ ಕೃಷ್ಣ ದೇಗುಲದಲ್ಲಿ ಭಾನುವಾರ ಕೇವಲ ಏಳು ಗಂಟೆಗಳಲ್ಲಿ ದಾಖಲೆಯ 416 ಮದುವೆಗಳು ನಡೆದಿವೆ. ಇದು ದೇಗುಲದಲ್ಲಿ ಒಂದೇ ದಿನ ನಡೆದ ಅತ್ಯಧಿಕ ಮದುವೆಗಳ ಸಂಖ್ಯೆಯಾಗಿದೆ ಎಂದು ದೇವಸ್ವಂ ಅಧಿಕಾರಿಗಳು ತಿಳಿಸಿದ್ದಾರೆ.ಸ್ಪಾಟ್ ಬುಕ್ಕಿಂಗ್ ಸೇರಿದಂತೆ ಒಟ್ಟು 442 ವಿವಾಹಗಳು ನಿಗದಿಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಲಯಾಳಂ ತಿಂಗಳಾದ ‘ಚಿಂಗಂ’ ಮಾಸದ ಮೊದಲ ಭಾನುವಾರವನ್ನು ಇಲ್ಲಿ ಮದುವೆಗಳಿಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ ಈ ಮಾಸದಲ್ಲಿ ಭಾರಿ ಸಂಖ್ಯೆಯಲ್ಲಿ ವಿವಾಹಗಳು ನಡೆಯುತ್ತವೆ.

ದೇವಸ್ಥಾನದ ಪ್ರಾಂಗಣದಲ್ಲಿ ಒಟ್ಟು 6 ಮಂಟಪಗಳನ್ನು ಸಿದ್ಧಪಡಿಸಲಾಗಿದ್ದು, ಮುಂಜಾನೆ 4.10 ರಿಂದ ಮಧ್ಯಾಹ್ನ 12.45 ರವರೆಗೆ (ಉಷಾಪೂಜೆ ಮತ್ತು ಪಂತೀರಾಡಿ ಪೂಜೆಗಾಗಿ ದೇವಸ್ಥಾನ ಮುಚ್ಚಿದ ಸಮಯವನ್ನು ಹೊರತುಪಡಿಸಿ) ಪ್ರತಿ ಗಂಟೆಗೆ 60ಕ್ಕೂ ಹೆಚ್ಚು ಮದುವೆಗಳು ನಡೆದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೇವಸ್ವಂ ಫೇಸ್‌ಬುಕ್ ಪೋಸ್ಟ್ ಪ್ರಕಾರ, ಈ ಹಿಂದೆ 2024ರ ಸೆ.8ರಂದು 334 ಮದುವೆಗಳು ನಡೆದಿದ್ದೇ ಇದುವರೆಗಿನ ದಾಖಲೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!