ಸಾಲು ಸಾಲು ಹಬ್ಬಗಳ ನಡುವೆಯೇ ಜನಸಾಮಾನ್ಯರಿಗೆ ಬಿಗ್ ರಿಲೀಫ್: ಬೆಲೆ ನಿಯಂತ್ರಣಕ್ಕೆ ಸಕ್ಕರೆ ಆಮದು ಸುಂಕ ಪೂರ್ತಿ ರದ್ದು!

Picture of Savistara

Savistara

Bureau Report

ವರಮಹಾಲಕ್ಷ್ಮಿ ಹಬ್ಬ ಮುಗಿದು ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿಯಂತಹ ಸಾಲು ಸಾಲು ದೊಡ್ಡ ಹಬ್ಬಗಳು ಹತ್ತಿರವಾಗುತ್ತಿರುವಂತೆಯೇ ಸಕ್ಕರೆ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಕೆಯನ್ನು ತಡೆಯಲು ಮತ್ತು ಪೂರೈಕೆಯನ್ನು ಹೆಚ್ಚಿಸಲು ಆಮದು ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.​ಕಡಿಮೆ ಮಳೆಯಿಂದಾಗಿ ಕಬ್ಬಿನ ಇಳುವರಿ ಕುಸಿದು ದೇಶದಲ್ಲಿ ಸಕ್ಕರೆ ಬೆಲೆ ಶೇಕಡಾ 13ರಷ್ಟು ಏರಿಕೆಯಾಗಿತ್ತು. ಹಬ್ಬಗಳ ಸಾಲಿನಲ್ಲಿ ಹೆಚ್ಚಾಗುವ ಬೇಡಿಕೆಯನ್ನು ಸರಿದೂಗಿಸಲು 2026ರ ಅಕ್ಟೋಬರ್ 31ರವರೆಗೆ 10 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಸಕ್ಕರೆಯನ್ನು ಯಾವುದೇ ತೆರಿಗೆಯಿಲ್ಲದೆ ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.

ಇದರ ಜೊತೆಗೆ, ಕಾಳಸಂತೆ ಮತ್ತು ಅಕ್ರಮ ದಾಸ್ತಾನು ತಡೆಯಲು ತಿಂಗಳಿಗೆ 10 ಟನ್‌ಗಿಂತ ಹೆಚ್ಚು ಸಕ್ಕರೆ ಬಳಸುವ ಸಂಸ್ಥೆಗಳಿಗೆ ಕೇವಲ 15 ದಿನಗಳ ದಾಸ್ತಾನು ಮಿತಿಯನ್ನು ವಿಧಿಸಲಾಗಿದೆ. ಸರ್ಕಾರದ ಈ ಸಮಯೋಚಿತ ನಿರ್ಧಾರದಿಂದ ಮುಂಬರುವ ಹಬ್ಬಗಳ ಸಮಯದಲ್ಲಿ ಗ್ರಾಹಕರಿಗೆ ದೊಡ್ಡ ಮಟ್ಟದ ಆರ್ಥಿಕ ಸಮಾಧಾನ ಸಿಗಲಿದೆ.

[t4b-ticker]
error: Content is protected !!