TV Rules | ಟಿವಿ ವೀಕ್ಷಕರಿಗೆ ಕೇಂದ್ರದಿಂದ ಶಾಕ್! ಇನ್ಮುಂದೆ ಜಾಹೀರಾತುಗಳಿಗೆ ಇರಲ್ಲ ಯಾವುದೇ ಲಿಮಿಟ್!

Picture of Savistara

Savistara

Bureau Report

ಧಾರಾವಾಹಿ, ಸಿನಿಮಾ ಹಾಗೂ ಸುದ್ದಿಗಳನ್ನು ವೀಕ್ಷಿಸುವ ಟಿವಿ ಪ್ರೇಕ್ಷಕರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದ್ದು, ಚಾನೆಲ್‌ಗಳಲ್ಲಿ ಜಾಹೀರಾತು ಪ್ರಸಾರದ ಮೇಲಿದ್ದ ಸಮಯದ ಮಿತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.​

ಏನಿದು ಹೊಸ ನಿರ್ಧಾರ?

ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯು ‘ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಮಗಳು 2026’ ಅಡಿಯಲ್ಲಿ ಈ ಹೊಸ ತಿದ್ದುಪಡಿಯನ್ನು ಜಾರಿಗೆ ತಂದಿದೆ. 2006ರಲ್ಲಿ ಜಾರಿಯಲ್ಲಿದ್ದ ನಿಯಮದ ಪ್ರಕಾರ, ಯಾವುದೇ ಚಾನೆಲ್ ಪ್ರತಿ ಗಂಟೆಗೆ ಗರಿಷ್ಠ 12 ನಿಮಿಷಗಳಿಗಿಂತ ಹೆಚ್ಚು ಜಾಹೀರಾತು ಪ್ರಸಾರ ಮಾಡುವಂತಿರಲಿಲ್ಲ. ಆದರೆ ಈಗ ಈ 12 ನಿಮಿಷಗಳ ಮಿತಿಯನ್ನು ತೆಗೆದುಹಾಕಲಾಗಿದೆ.​

ನಿಯಮ ಸಡಿಲಿಕೆಗೆ ಕಾರಣವೇನು?​

ಚಾನೆಲ್‌ಗಳ ಸಂಖ್ಯೆ ಹೆಚ್ಚಳ: 2006ರಲ್ಲಿ ದೇಶದಲ್ಲಿ ಕೇವಲ 62 ಚಾನೆಲ್‌ಗಳಿದ್ದವು. ಆದರೆ ಈಗ ಈ ಸಂಖ್ಯೆ 900ಕ್ಕೂ ಅಧಿಕವಾಗಿದೆ.​

ಡಿಜಿಟಲ್ ಕ್ರಾಂತಿ: ಡಿಟಿಎಚ್, ಐಪಿಟಿವಿ ಸೇರಿದಂತೆ ತಂತ್ರಜ್ಞಾನ ಬೆಳೆದಿದ್ದು, ಪ್ರಸಾರ ರಂಗದಲ್ಲಿ ಭಾರಿ ಪೈಪೋಟಿ ನಿರ್ಮಾಣವಾಗಿದೆ.​

ಸುಲಭ ವಹಿವಾಟು (Ease of Business): ನ್ಯಾಯಯುತ ಸ್ಪರ್ಧೆಗೆ ಅವಕಾಶ ನೀಡಲು ಹಾಗೂ ವ್ಯಾಪಾರ ವಹಿವಾಟನ್ನು ಸುಲಭಗೊಳಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.​

ಪ್ರೇಕ್ಷಕರಿಗೆ ತಮಗಿಷ್ಟ ಬಂದ ಚಾನೆಲ್ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರುವುದರಿಂದ, ಪ್ರಸ್ತುತ ಮಾರುಕಟ್ಟೆ ಟ್ರೆಂಡ್‌ಗೆ ತಕ್ಕಂತೆ ಈ ಬದಲಾವಣೆ ಮಾಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!