ಸಮುದ್ರದ ಹಾದಿಗೆ ಅಮೆರಿಕದ ದಿಬ್ಬಂಧನ: ಟ್ರಂಪ್ ಮಾತು ಕೇಳಿ ಬೆಚ್ಚಿಬಿದ್ದ ತೈಲ ಮಾರುಕಟ್ಟೆ!

Picture of Savistara

Savistara

Bureau Report

ಜಗತ್ತಿನಾದ್ಯಂತ ತೈಲ ಸಾಗಣೆಗೆ ಅತ್ಯಂತ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅಮೆರಿಕದ ಸ್ವಂತ ಜಾಗ” ಎಂದು ಹೇಳಿಕೊಂಡಿರುವುದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಸೌತ್ ಕ್ಯಾರೋಲಿನಾದಲ್ಲಿ ಟ್ರಂಪ್‌ ಹೇಳಿದ್ದೇನು?

ಸೌತ್ ಕ್ಯಾರೋಲಿನಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಮಿಲಿಟರಿ ಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು. “ನಾವು ಇರಾನ್ ವಿರುದ್ಧದ ಯುದ್ಧದಲ್ಲಿ ಸಂಪೂರ್ಣ ಗೆಲುವು ಸಾಧಿಸಿದ್ದೇವೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರಸ್ತುತ ಹಾರ್ಮುಜ್ ಜಲಸಂಧಿಯನ್ನು ನಾನು ಅಮೆರಿಕದ ಸ್ವಂತ ಭೂಭಾಗ ಎಂದೇ ಭಾವಿಸಿದ್ದೇನೆ” ಎಂದು ಪ್ರತಿಪಾದಿಸಿದರು. ಅಷ್ಟೇ ಅಲ್ಲದೆ, “ಅಲ್ಲಿ ನಮ್ಮ ಅಮೆರಿಕನ್ ನೌಕಾಪಡೆ ಸಂಪೂರ್ಣ ದಿಬ್ಬಂಧನ ವಿಧಿಸಿದೆ. ನಾವು ಓಕೆ ಅಂದರೆ ಮಾತ್ರ ಯಾವುದೇ ಹಡಗು ಅಲ್ಲಿಂದ ಮುಂದೆ ಹೋಗಲು ಸಾಧ್ಯ” ಎಂದು ಹೇಳಿಕೊಂಡಿದ್ದರು.

ಇಷ್ಟಕ್ಕೇ ನಿಲ್ಲಿಸದ ಟ್ರಂಪ್, ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಹಾರ್ಮುಜ್ ಜಲಸಂಧಿಯನ್ನು “ಹೊಸ ಅಮೆರಿಕನ್ ಭೂಭಾಗ” ಎಂದು ಬರೆದಿದ್ದನಕ್ಷೆಯನ್ನು ಶೇರ್ ಮಾಡಿದ್ದನ್ನು ನೆನಪಿಸಿಕೊಂಡರು. “ಇವತ್ತು ನಮಗೆ ಸಾಕಷ್ಟು ಸಮಯವಿದೆ, ನಾನು ವಾಪಸ್ ಹೋಗಿ ಇರಾನ್ ಮೇಲೆ ಇನ್ನಷ್ಟು ಬಾಂಬ್ ಹಾಕಲೇ?” ಎಂದು ಸಭೆಯಲ್ಲಿದ್ದ ಜನರ ಬಳಿ ತಮಾಷೆಯಾಗಿ ಕೇಳಿದರು.

ಇರಾನೋ ಕೌಂಟರ್

ಟ್ರಾಂಪ್ ಅವರ ಈ ಮಾತುಗಳಿಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇರಾನ್‌ನ ಉಪ ವಿದೇಶಾಂಗ ಸಚಿವ ಕಾಜೆಮ್ ಗರೀಬಾಬಾದಿ ಅವರು ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿದ್ದು, “ಹಾರ್ಮುಜ್ ಜಲಸಂಧಿ ಅಮೆರಿಕದ ಆಸ್ತಿ ಎಂದುಕೊಳ್ಳುವುದು ಟ್ರಂಪ್ ಅವರ ದೊಡ್ಡ ಭ್ರಮೆ ಅಷ್ಟೇ” ಎಂದು ವ್ಯಂಗ್ಯವಾಡಿದ್ದಾರೆ.

ಏನಿದು ಹಾರ್ಮುಜ್ ಜಲಸಂಧಿ?

ಹಾರ್ಮುಜ್‌ ಜಲಸಂಧಿಯು ಇರಾನ್ ಮತ್ತು ಓಮನ್ ದೇಶಗಳ ನಡುವೆ ಇರುವ ಅತ್ಯಂತ ಆಯಕಟ್ಟಿನ ಸಮುದ್ರ ಮಾರ್ಗವಾಗಿದೆ. ಜಗತ್ತಿನಲ್ಲಿ ಸಮುದ್ರದ ಮೂಲಕ ಸಾಗಣೆಯಾಗುವ ಒಟ್ಟು ಕಚ್ಚಾ ತೈಲದಲ್ಲಿ ಶೇ. 20 ರಷ್ಟು (ಐದನೇ ಒಂದು ಭಾಗ) ತೈಲವು ಇದೇ ಹಾದಿಯಲ್ಲಿ ಹಾದುಹೋಗುತ್ತದೆ. ಕಳೆದ ಆರು ತಿಂಗಳುಗಳಿಂದ ಅಮೆರಿಕ ಮತ್ತು ಇರಾನ್ ನಡುವೆ ಘರ್ಷಣೆ ನಡೆಯುತ್ತಿರುವುದರಿಂದ ಈ ಹಾದಿಯಲ್ಲಿ ತೈಲ ಹಡಗುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. U.S. ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿಯಂತೆ, ಸುರಕ್ಷತೆಯ ದೃಷ್ಟಿಯಿಂದ ಅಮೆರಿಕನ್ ಸೇನೆಯು ಇದುವರೆಗೆ 68 ವಾಣಿಜ್ಯ ಹಡಗುಗಳ ಮಾರ್ಗವನ್ನು ಬದಲಾಯಿಸಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!