ತೋಟಗಾರಿಕೆ ಸಬ್ಸಿಡಿಗೆ ಹೊಸ ನಿಯಮ

Picture of Savistara

Savistara

Bureau Report

ನವದೆಹಲಿ:ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ವಾಣಿಜ್ಯ ತೋಟಗಾರಿಕೆ ಹಾಗೂ ಶೀತಲ ಸಂಗ್ರಹ ಯೋಜನೆಗಳಡಿ ಹಣಕಾಸು ನೆರವು ಪಡೆಯಲು ಕೇಂದ್ರ ಸರ್ಕಾರ ಹೊಸ. ನಿರ್ಬಂಧಗಳನ್ನು ವಿಧಿಸಿದೆ. ಸಾಂವಿಧಾನಿಕ ಹುದ್ದೆ ಶಾಸಕರು ಯೋಜನೆಯಿಂದ ಹೊರಗೆಹೊಂದಿರುವವರು, ಹಾಲಿ ಸಚಿವರು, ಸಂಸದರು, ಶಾಸಕರು, ಮೇಯರ್‌ಗಳು ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು ಯೋಜನೆಯಿಂದ ಹೊರಗಿಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವಾಲಯ, ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ಸ್ವಾಯತ್ತ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಹಾಲಿ ನೌಕರರೂ ನೆರವು ಪಡೆಯುವಂತಿಲ್ಲ. ಆದರೆ ಎಂಟಿಎಸ್, ನಾಲ್ಕನೇ ದರ್ಜೆ ಹಾಗೂ ಗ್ರೂಪ್ ಡಿ ನೌಕರರಿಗೆ ವಿನಾಯಿತಿ ನೀಡಲಾಗಿದೆ. ತಿಂಗಳಿಗೆ 10,000 ರೂ. ಅಥವಾ ಅದಕ್ಕಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತರೂ ಅನರ್ಹರಾಗಿದ್ದಾರೆ.

ಕುಟುಂಬಕ್ಕೆ ಒಬ್ಬರಿಗೆ ಮಾತ್ರ:ದಿಅನಿ ವಾ ದೇ ಬಾಹೊಸ ನಿಯಮ ದಂತೆ, ಪತಿ ಅಥವಾ ಪತ್ನಿ, ಪೋಷಕರು, ಪುತ್ರರು ಹಾಗೂ ಪುತ್ರಿಯರನ್ನು ಒಂದೇ ಕುಟುಂಬವೆಂದು ಪರಿಗಣಿಸಲಾಗುತ್ತದೆ. ಕುಟುಂಬದ ಒಬ್ಬ ಸದಸ್ಯ ಯೋಜನೆಯಡಿ ನೆರವು ಪಡೆದರೆ, ಉಳಿದವರಿಗೆ ಯಾವುದೇ ಯೋಜನೆಯಡಿ ಮತ್ತೊಮ್ಮೆ ನೆರವು ಸಿಗುವುದಿಲ್ಲ. ತಪ್ಪು ಮಾಹಿತಿ ನೀಡಿ ಸಬ್ಸಿಡಿ ಪಡೆದರೆ ಬಡ್ಡಿ ಸಹಿತ ಹಣ ವಸೂಲಿ ಮಾಡಲಾಗುತ್ತದೆ. ಈ ಬದಲಾವಣೆಗಳು ಸಬ್ಸಿಡಿಯ ಸಮಾನ ಹಂಚಿಕೆ. ಒಂದೇ ಯೋಜನೆಗೆ ಪುನರಾವರ್ತಿತ ನೆರವು ತಡೆಯುವುದು ಹಾಗೂ ಪಾರದರ್ಶಕತೆ ಹೆಚ್ಚಿಸುವ ಉದ್ದೇಶ ಹೊಂದಿವೆ ಎಂದು ಮಂಡಳಿ ತಿಳಿಸಿದೆ. ಕೃಷಿ ಸಚಿವಾಲಯದ ರಾಜ್ಯ ಸಚಿವ ಭಗೀರಥ್ ಚೌಧರಿ ಹಾಗೂ ಬಿಜೆಪಿ ಸಂಸದ ಲುಂಬಾ ರಾಮ್ ಯೋಜನೆಯಿಂದ ಪ್ರಯೋಜನ ಪಡೆದಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಚೌಧರಿ ತಾವು ಪಡೆದ ಸಬ್ಸಿಡಿಯನ್ನು ಬಳಿಕ ಹಿಂದಿರುಗಿಸಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!