ದಿನೇಶ್ ಪುಂಡಿಗದ್ದೆ ಸಂಪರ್ಕಿಸಿದಾಗ ದೇವಸ್ಥಾನದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಪ್ರತಿವರ್ಷದ ಲೆಕ್ಕಪತ್ರವನ್ನು ಸಮರ್ಪಕವಾಗಿ ಭಕ್ತರ ಮುಂದೆ ಮಂಡಿಸಬೇಕು. ದೇವಸ್ಥಾನದ ಆದಾಯ-ವೆಚ್ಚದ ಲೆಕ್ಕದಲ್ಲಿ ಪಾರದರ್ಶಕತೆ ಇರಬೇಕು. ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ತಕ್ಷಣ ರಾಜೀನಾಮೆ ನೀಡಬೇಕು ಅದಕ್ಕೆ ಭಕ್ತರ ಸಾಮಾನ್ಯ ಸಭೆಯಲ್ಲಿಯೇ ಸಮರ್ಪಕ ಉತ್ತರ ನೀಡುವ ಜವಾಬ್ದಾರಿ ಅವರದ್ದಾಗಿದೆ. ತಪ್ಪನ್ನು ಮುಚ್ಚಿಡುವ ಪ್ರಯತ್ನ ಮಾಡಬಾರದು.
ಭಕ್ತರು ದೇವರ ದರ್ಶನಕ್ಕೆ ಬರುವುದು ಶಾಂತಿಗಾಗಿ. ಅಲ್ಲಿ ಸರಿಯಾದ ಊಟದ ವ್ಯವಸ್ಥೆ, ವ್ಯವಸ್ಥಿತ ಪೂಜಾ ಕಾರ್ಯಕ್ರಮಗಳು ನಡೆಯಬೇಕು. ಪ್ರಸಾದ, ಅನ್ನದಾನದಲ್ಲಿ ಯಾವುದೇ ಲೋಪವಾಗಬಾರದು.ಇವರು ಅಧ್ಯಕ್ಷರಾಗಿ ನೇಮಕವಾಗಿದ್ದು ಕಾಂಗ್ರೆಸ್ ಪಕ್ಷದ ಶಿಫಾರಸಿನಿಂದ ಎಂಬುದನ್ನು ಮರೆಯಬಾರದು. ಪಕ್ಷದ ಹೆಸರಿಗೆ ಚ್ಯುತಿ ಬರುವಂತೆ ನಡೆದುಕೊಳ್ಳಬಾರದು. ದೇವಸ್ಥಾನವನ್ನು ರಾಜಕೀಯಕ್ಕಾಗಿ ಬಳಸದೆ, ಭಕ್ತರ ಸೇವೆಗಾಗಿ ಬಳಸಬೇಕೆಂದರು, ಕಾಂಗ್ರೆಸ್ ಮುಖಂಡರಿಗೆ ಈ ಬಗ್ಗೆ ಮೂರು ದಿನ ಗಡುವು ನೀಡಲಾಗಿದೆಯೆಂದರು











































