ಇಟಾವಾ : ಉತ್ಪನ್ನವನ್ನು ರೈಲು ಹತ್ತಿಸಿ ಬೀಳ್ಕೊಡಲು ಹೋದ12 ಮಂದಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನೊಳಗೆ ಸಿಲುಕಿಕೊಂಡು ಅನಿರೀಕ್ಷಿತವಾಗಿ 140 ಕಿಲೋಮೀಟರ್ ಪ್ರಯಾಣಿಸಿ, ಕೊನೆಗೆ 36,000 ರೂಪಾಯಿ ದಂಡ ತೆತ್ತ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಸುರ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಡೆದಿದೆ.

ಏನಿದು ಘಟನೆ: :ವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ಸಂಭವಿಸಿದೆ. ಕಳೆದ ಭಾನುವಾರ (ನ,15) ರಂದು ಬೆಳಿಗ್ಗೆ ವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾನ್ಸುರ ಸೆಂಟ್ರಲ್ ನಿಲ್ದಾಣಕ್ಕೆ ಬಂದು ನಿಂತಿದೆ.


ಈ ವೇಳೆ ತಮ್ಮ ಉತ್ಪನ್ನ ಲಗೇಜ್ ಇರಿಸಿ ಅವರನ್ನು ಬೀಳ್ಕೊಡಲು 12 ಮಂದಿ ರೈಲಿನೊಳಗೆ ಪ್ರವೇಶಿಸಿದ್ದಾರೆ. ಆದರೆ, ನಿಗದಿತ ಸಮಯಕ್ಕೆ ಸರಿಯಾಗಿ ರೈಲಿನ ಆಟೋಮ್ಯಾಟಿಕ್ ಬಾಗಿಲುಗಳು ಲಾಕ್ ಆಗಿ ರೈಲು ಕಾನ್ಸುರದಿಂದ ಹೊರಟಿದೆ. ರೈಲಿನೊಳಗೆ ಸಿಲುಕಿಕೊಂಡವರು ಬಾಗಿಲು ತೆರೆಯುವಂತೆ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಆದರೆ, ಚಲಿಸುತ್ತಿರುವ ರೈಲಿನಲ್ಲಿ ಸುರಕ್ಷತಾ ಮತ್ತು ತಾಂತ್ರಿಕ ನಿರ್ಬಂಧಗಳ ಕಾರಣದಿಂದ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಇದರಿಂದ ಬೀಳ್ಕೊಡಲು ಬಂದವರು ರೈಲಿನೊಳಗೆ ಸಿಲುಕಿಕೊಳ್ಳುವಂತಾಯಿತು.


ವಿಷಯ ತಿಳಿದ ರೈಲ್ವೆ ಸಿಬ್ಬಂದಿ ತಕ್ಷಣವೇ ತುಂಡ್ಲಾ ರೈಲ್ವೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ನಿಯಂತ್ರಣ ಕೊಠಡಿಯ ಸೂಚನೆಯ ಮೇರೆಗೆ ಇಟಾವಾ ಜಂಕ್ಷನ್‌ನಲ್ಲಿ ವಂದೇ ಭಾರತ್ ರೈಲನ್ನು ನಿಲ್ಲಿಸಲಾಯಿತು. ಅಷ್ಟೋತ್ತಿಗಾಗಲೇ ರೈಲು 140 ಕಿಲೋಮೀಟರ್ ದೂರ ಪ್ರಯಾಣ ಬೆಳೆಸಿತ್ತು. ಈ ವೇಳೆ ಇಟಾವಾ ಜಂಕ್ಷನ್ ನಿಲ್ದಾಣದ ಅಧೀಕ್ಷಕ ಪಿ.ಎಂ. ಮೀನಾ, ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಸಿಂಗ್ ಹಾಗೂ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಇನ್ಸ್‌ಪೆಕ್ಟರ್ ಯದುವೀರ್ ಸಿಂಗ್ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ.


ಬಳಿಕ ಆರ್‌ಪಿಎಫ್ ಮತ್ತು ಜಿಆರ್‌ಪಿ ತಂಡದ ಸಿಬ್ಬಂದಿ ರೈಲಿನಲ್ಲಿದ್ದ 12 ಮಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ನಂತರ ಅವರನ್ನು ಆರ್‌ಪಿಎಫ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಘಟನೆಯ ವಿವರಗಳನ್ನು ದಾಖಲಿಸಿಕೊಂಡಿದ್ದಾರೆ.
ಸೂಕ್ತ ಅನುಮತಿ ಇಲ್ಲದೆ ರೈಲು ಹತ್ತಿದ್ದ ಮತ್ತು ರೈಲ್ವೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ರೈಲ್ವೆಯ ವಾಣಿಜ್ಯ ವಿಭಾಗವು ಪ್ರತಿಯೊಬ್ಬರಿಂದ ತಲಾ ₹3,000 ದಂಡ ವಸೂಲಿ ಮಾಡಿದ್ದು, ಒಟ್ಟು ₹36,000 ದಂಡ ಸಂಗ್ರಹಿಸಿ ನಂತರ ರೈಲಿನಲ್ಲಿ ಮಾನ್ಯ ಟಿಕೆಟ್ ಅಥವಾ ಅನುಮತಿ ಇಲ್ಲದೆ ಹತ್ತಬಾರದು ಎಂದು ಎಚ್ಚರಿಕೆ ನೀಡಿ 12 ಮಂದಿಯನ್ನು ಬಿಡುಗಡೆ ಮಾಡಿದ್ದಾರೆ.
ಸ್ವಯಂಚಾಲಿತ ಬಾಗಿಲು ಹೊಂದಿರುವ ಆಧುನಿಕ ರೈಲುಗಳಲ್ಲಿ ಪ್ರಯಾಣಿಸುವಾಗ ಈ ಘಟನೆಗಳನ್ನು ಪಾಲಿಸುವುದು ಎಷ್ಟು ಮುಖ್ಯ ಮತ್ತೊಮ್ಮೆ ನೆನಪಿಸಿದೆ. ಸಣ್ಣ ನಿರ್ಲಕ್ಷ್ಯವೂ ಪ್ರಯಾಣಿಕರಿಗೆ ಅನಗತ್ಯ ತೊಂದರೆ ಹಾಗೂ ಭಾರೀ ದಂಡಕ್ಕೆ.










































