ಮಾರುಕಟ್ಟೆಯಲ್ಲಿ ಏರಿಕೆಯತ್ತ ಚಾಲಿ ಅಡಿಕೆ ಧಾರಣೆ

Picture of Savistara

Savistara

Bureau Report

ಪುತ್ತೂರು: ರಾಜ್ಯ ಬಜೆಟ್‌ ಮಂಡನೆ ಬೆನ್ನಲ್ಲೇ ಹೊಸ ಅಡಿಕೆ, ರಬ್ಬರ್‌ ಧಾರಣೆ ಏರಿಕೆಯತ್ತ ಮುಖ ಮಾಡಿದ್ದು, ಬೆಳೆಗಾರರಲ್ಲಿ ನಿರೀಕ್ಷೆ ಮೂಡಿಸಿದೆ.ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ 400 ರೂ. ತಲುಪಿದೆ.

ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಮಾ.8ರಂದು ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 390 ರೂ.ಇದ್ದರೆ, ಹೊರ ಮಾರುಕಟ್ಟೆಯಲ್ಲಿ 400 ರೂ.ಇತ್ತು. ಸಿಂಗಲ್‌ ಚೋಲ್‌ 455 ರೂ., ಡಬ್ಬಲ್‌ ಚೋಲ್‌ 495 ರೂ. ಇದ್ದು ಧಾರಣೆ ಸ್ಥಿರವಾಗಿತ್ತು. 190ಕ್ಕೆ ತಲುಪಿದ ರಬ್ಬರ್‌ ಧಾರಣೆಮಾ.

8ಕ್ಕೆ ರಬ್ಬರ್‌ ಗ್ರೇಡ್‌ಗೆ 190 ರೂ., ರಬ್ಬರ್‌ ಸ್ಕ್ರಾಪ್‌ 125 ರೂ. ದಾಖಲಾಗುವ ಮೂಲಕ ಏರಿಕೆ ದಾಖಲಿಸಿದೆ. ಎರಡು ದಿನಗಳ ಹಿಂದೆ ರಬ್ಬರ್‌ ಗ್ರೇಡ್‌ಗೆ 189 ರೂ., ರಬ್ಬರ್‌ ಸ್ಕ್ರಾಪ್‌ 124.5 ರೂ. ನಷ್ಟಿತ್ತು. ರಬ್ಬರ್‌ ಗ್ರೇಡ್‌ ಧಾರಣೆ ಸದ್ಯದಲ್ಲೇ 200 ರೂ. ತಲುಪುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!