ಇಂದು ಸೂಪರ್‌ಮೂನ್ ಕಾರ್ತಿಕ ಹುಣ್ಣಿಮೆಗೆ ಚಂದ್ರನೂ ಸೊಬಗು

Picture of Savistara

Savistara

Bureau Report

ಉಡುಪಿ, ನ.23: ಕಾಕತಾಳೀಯ ಎಂಬಂತೆ ಕಾರ್ತಿಕದ ದೀಪೋತ್ಸವಕ್ಕೆ ಹುಣ್ಣಿಮೆ ಚಂದಿರ ತನ್ನದೂ ಒಂದು ಕೊಡುಗೆ ಇರಲಿ ಎಂದು ಹುಣ್ಣಿಮೆಯ ದಿನ ಹೆಚ್ಚು. ಪ್ರಕಾಶಮಾನವಾಗಿ ಹೊಳೆಯಲಿದ್ದಾನೆ.

Advertisement

ಅಂದರೆ, ಅಂದು ಸೂಪರ್ ಮೂನ್ ಇರಲಿದೆ.28 ದಿನಗಳಲ್ಲಿ ಚಂದ್ರ ಪ್ರತಿದಿನ ಒಂದೊಂದು ನಕ್ಷತ್ರಕ್ಕೆ ನೇರಬಂದಂತೆ ಕಾಣುವನು. ನ. 24ರಂದು ಕೃತ್ತಿಕಾ ನಕ್ಷತ್ರ ಹಾಗೂ ಅದೇ ದಿನ ಕಾರ್ತಿಕ ಹುಣ್ಣಿಮೆ. ಅಂದು ಚಂದ್ರ ಹೆಚ್ಚು ಪ್ರಕಾಶಮಾನವಾಗಿ ಕಾಣಲಿದ್ದಾನೆ.ಭೂಮಿ ಸುತ್ತುವ ಚಂದ್ರನ ಪಥ ವರ್ತುಲವಲ್ಲ, ದೀರ್ಘ ವೃತ್ತಾಕಾರ.

Advertisement

Advertisement

ಈ ಪಥದಲ್ಲಿ 28 ದಿನಗಳಿಗೊಮ್ಮೆ ಭೂಮಿಗೆ ಚಂದ್ರ ಸಮೀಪ ಹಾಗೂ (ಇದನ್ನು ಎಪೋಜಿ ಸಮೀಪ ದೂರ ) ದೂರದ ದೂರ ( ಪೆರಿಜಿ) ಬರುವುದು. ಭೂಮಿ ಮತ್ತು ಚಂದ್ರರ ಸರಾಸರಿ ದೂರ 3.84 ಲಕ್ಷ ಸಾವಿರ ಕಿ.ಮೀ. ಆಗಿದೆ. ಚಂದ್ರ ಸಮೀಪ ಬಂದಾಗ 3.60 ಲಕ್ಷ ಸಾವಿರ ಕಿ.ಮೀ. ಆಗುತ್ತದೆ.

Advertisement

Advertisement

ಹೀಗೆ ಹತ್ತಿರ ಬಂದಾಗ, ಸುಮಾರು 25 ಸಾವಿರ ಕಿ.ಮೀ. ಭೂಮಿಗೆ ಹತ್ತಿರದಲ್ಲಿ ಕಂಡು 14 ಪಟ್ಟು ದೊಡ್ಡದಾಗಿ ಕಾಣುವುದು. ಹಾಗೆಯೇ ಹುಣ್ಣಿಮೆಯ ಬೆಳಗಿನ ಪ್ರಭೆ ಸುಮಾರು 30 ಪಟ್ಟು ಹೆಚ್ಚಾಗಲಿದೆ.

Advertisement

Advertisement

ನ.24ರಂದು ಚಂದ್ರ ಭೂಮಿಯಿಂದ 3.60 ಲಕ್ಷಸಾವಿರ ಕಿ.ಮೀ. ದೂರದಲ್ಲಿದ್ದು ಹೆಚ್ಚು ಆಕರ್ಷಕವಾಗಿ ಕಾಣಲೆಂದು ಉಡುಪಿಯ ಖಗೋಳ ಇದೆ ಡಾ|ಎ.ಪಿ. ಭಟ್ ಅವರು ಪ್ರಕಟಿಸಿದರು.

[t4b-ticker]
error: Content is protected !!