ವಿಮಾನಯಾನ ಸಂಸ್ಥೆಗಳಿಗೆ ಮಾರ್ಗ ಆಯ್ಕೆಯ ಮುಕ್ತ ಅವಕಾಶ; ಉಡಾನ್ 6.0 ಜಾರಿಯಾಗುವವರೆಗಿನ ಮಧ್ಯಂತರ ಅವಧಿಯಲ್ಲಿ ವಿಮಾನ ಸೇವೆಗೆ ನೆರವಾಗಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿರುವ ಸಂಸದ ಬಿವೈಆರ್
ಶಿವಮೊಗ್ಗ, 23 ನವೆಂಬರ್ 2026: ಕಳೆದ 15-20 ದಿನಗಳಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಇದ್ದ ಆತಂಕದ ವಾತಾವರಣ ತಿಳಿಯಾಗುವ ಲಕ್ಷಣಗಳು ಕಾಣುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ, ‘ಉಡಾನ್ 6.0’ ಟೆಂಡರ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪರಿಗಣಿಸಿ, ಬಿಡ್ ಕರೆದಿರುವುದು ಅತ್ಯಂತ ಸಂತೋಷದ ಸುದ್ದಿಯಾಗಿದೆ ಎಂದು ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಈ ವರ್ಷದ ಡಿಸೆಂಬರ್ 31 ರವರೆಗೂ ಟೆಂಡರ್ ಸಲ್ಲಿಸಲು ಅವಕಾಶವಿದ್ದು, ಹಿಂದಿನ ಟೆಂಡರ್‌ಗಳಂತೆ ನಿರ್ದಿಷ್ಟ ಸ್ಥಳಗಳು ಅಥವಾ ಮಾರ್ಗಗಳನ್ನು ಈ ಬಾರಿ ಉಲ್ಲೇಖಿಸದೆ,


ಶಿವಮೊಗ್ಗದಿಂದ ಯಾವ ಮಾರ್ಗಕ್ಕೆ ಕಾರ್ಯಾಚರಣೆ ನಡೆಸಬೇಕು ಎನ್ನುವುದನ್ನು ವಿಮಾನಯಾನ ಸಂಸ್ಥೆಗಳ ವಿವೇಚನೆಗೇ ಬಿಡಲಾಗಿದೆ. ಬಿಡ್ ನಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳಿಗೆ ಉಡಾನ್ ಸಬ್ಸಿಡಿ ಸೌಲಭ್ಯ ದೊರೆಯಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆಶಿವಮೊಗ್ಗದ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಸದರು, ಟೆಂಡರ್ ಪ್ರಕ್ರಿಯೆಯಿಂದ ಶಿವಮೊಗ್ಗ ವಿಮಾನ ನಿಲ್ದಾಣ ಹೊರಗುಳಿಯುವ ಆತಂಕದ ನಡುವೆ, ಮತ್ತೆ ಈ ಸಾಲಿನ ಉಡಾನ್ ಟೆಂಡರ್ ನಲ್ಲೂ ಸೇರ್ಪಡೆ ಮಾಡಿರುವುದಕ್ಕೆ, ತಮ್ಮ ನಿರಂತರ ಪ್ರಯತ್ನಗಳ ಜೊತೆಗೆ, ವಿಶೇಷವಾಗಿ


ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿರವರ ಒತ್ತಾಸೆಯ ಒತ್ತಾಯಗಳು ಕಾರಣವಾಗಿವೆ ಎಂದು ಅವರಿಗೆ ಸಂಸದ ರಾಘವೇಂದ್ರ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. *ಮಧ್ಯಂತರ ಅವಧಿಯಲ್ಲಿ ವಿಮಾನ ಸೇವೆಗೆ ನೆರವಾಗಲು ರಾಜ್ಯ ಸರ್ಕಾರಕ್ಕೆ ಒತ್ತಾಯ:* ಟೆಂಡರ್ ಪ್ರಕ್ರಿಯೆ ಅಂತಿಮಗೊಂಡು ಕಾರ್ಯಾಚರಣೆ ಆರಂಭವಾಗಲು ೨೦೨೭ರ ಫೆಬ್ರವರಿ ಅಥವಾ ಮಾರ್ಚ್ ವರೆಗೂ ಸಮಯ ತೆಗೆದುಕೊಳ್ಳಲಿದ್ದು, ಅಲ್ಲಿಯವರೆಗೆ ಸುಮಾರು ಮೂರರಿಂದ ನಾಲ್ಕು ತಿಂಗಳ ಅಂತರ (ಗ್ಯಾಪ್) ಉಂಟಾಗುವ ಸಾಧ್ಯತೆ ಇರುವುದರಿಂದ, ಆ ಮಧ್ಯಂತರ ಅವಧಿಯಲ್ಲಿ (ಅಂದಾಜು 2-3 ತಿಂಗಳವರೆಗೆ) ರಾಜ್ಯ ಸರ್ಕಾರ ವಿಜಿಎಫ್


(VGF – Viable Gap Funding) ಯೋಜನೆಯಡಿ ಕನಿಷ್ಠ ಶಿವಮೊಗ್ಗ–ಬೆಂಗಳೂರು ಮತ್ತು ಶಿವಮೊಗ್ಗ–ಹೈದರಾಬಾದ್ ಮಾರ್ಗಗಳಿಗೆ ಅಥವಾ ಒಂದು ಮಾರ್ಗಕ್ಕಾದರೂ ತಾತ್ಕಾಲಿಕ ನೆರವು ನೀಡಿ, ವಿಮಾನ ಸೇವೆ ಒದಗಿಸಲು ನೆರವಾಗಬೇಕು ಎಂದು ರಾಜ್ಯ ಸರ್ಕಾರವನ್ನು ಸಂಸದರು ಒತ್ತಾಯಿಸಿದ್ದಾರೆ. ವಿಮಾನಯಾನ ಸಂಸ್ಥೆ ಈ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡರೆ ರಾಜ್ಯ ಸರ್ಕಾರ ತಮ್ಮ ಸೇವೆಯನ್ನು ಹಿಂಪಡೆಯಲಿ,

ಹಿಂದಿನ ಕಾನೂನಿನಂತೆ ಉಡಾನ್ ಅವಧಿ ಮುಗಿದ ಬಳಿಕ ಒಂದು ವರ್ಷದ ವಾಣಿಜ್ಯ ವಿರಾಮ (ಕಮರ್ಷಿಯಲ್ ಬ್ರೇಕ್) ಇರುತ್ತಿತ್ತು, ಆದರೆ ಈ ಬಾರಿ ಯಾವುದೇ ವಿರಾಮವಿಲ್ಲದೆ ಮುಂದಿನ ಟೆಂಡರ್‌ನಲ್ಲಿ ಶಿವಮೊಗ್ಗ ಸೇರ್ಪಡೆಯಾಗಿರುವುದರಿಂದ, ಮುಂದಿನ ಐದು ವರ್ಷಗಳ ಕಾಲ ಉಡಾನ್ ಯೋಜನೆಯಿಂದಾಗಿ ಶಿವಮೊಗ್ಗ ವಾಣಿಜ್ಯವಾಗಿ ಬೆಳೆದು ಸಹಜವಾಗಿಯೇ ವಿಮಾನ ಸೇವೆಗಳು ಬರುವ ವಿಶ್ವಾಸವಿದೆ ಎಂದು ಅವರು ಸಂಸದ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ, ಕಾರ್ಗೋ ವಿಮಾನ ಸೇವೆ ಮತ್ತು ನೈಟ್ ಲ್ಯಾಂಡಿಂಗ್ ಕುರಿತಂತೆ ಮಾತನಾಡಿದ ಸಂಸದರು, ಕಾರ್ಗೋ ಸೇವೆಯೂ ಸೇರಿದಂತೆ ಎಲ್ಲವೂ ಸ್ಥಳೀಯ ಬೇಡಿಕೆ, ಬೆಳೆಗಳು ಹಾಗೂ ರಫ್ತು ಅವಕಾಶಗಳನ್ನು ಆಧರಿಸಿ ಸಮೀಕ್ಷೆ ನಡೆಸಿ ನಿರ್ಧರಿಸಲಾಗುತ್ತದೆ, ಜೊತೆಗೆ ಮೂರು ವಿಮಾನಯಾನ ಸಂಸ್ಥೆಗಳೊಂದಿಗೆ ಟೆಂಡರ್‌ನಲ್ಲಿ ಪಾಲ್ಗೊಳ್ಳುವ ಕುರಿತು ಈಗಾಗಲೇ ಮಾತುಕತೆ ನಡೆಸುವ ಪ್ರಯತ್ನ ಸಾಗಿದೆ ಎಂದು ತಿಳಿಸಿದರು.














































