ರದ್ದಾದ, ಚಲಾವಣೆ ಇಲ್ಲದ ನೋಟುಗಳನ್ನು ಸರ್ಕಾರ ಏನು ಮಾಡುತ್ತೆ?; ಇಲ್ಲಿದೆ ಉಪಯುಕ್ತ ಮಾಹಿತಿ

Picture of Savistara

Savistara

Bureau Report

100ಮತ್ತು 200 ಹೊಸ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚಿಗೆ ಹೇಳಿದೆ. ಒಂದು ವೇಳೆ ಹೊಸ ನೋಟುಗಳು ಮಾರುಕಟ್ಟಗೆ ಬಂದರೆ, ಹಳೆ ನೋಟುಗಳು ಬ್ಯಾನ್ ಆದ್ರೆ ಮತ್ತೆ 2016 ರಂತೆ ಬ್ಯಾಂಕ್ ಮುಂದೆ ನಿಂತು ಸರ್ಕಾರಕ್ಕೆ ಮರಳಿಸಬೇಕು. ಅದರಂತೆ ಹೊಸ ಕರೆನ್ಸಿಗಳು ಮಾರುಕಟ್ಟೆಗೆ ಬಂದ ನಂತರ ಹಳೆಯ ನೋಟುಗಳು ಏನಾಗುತ್ತದೆ ಎಂದು ತಿಳಿದಿಯೇ?. ಸರ್ಕಾರ ಈ ರದ್ದಾದ ನೋಟುಗಳನ್ನು ಏನು ಮಾಡುತ್ತದೆ ಎಂದು ಯೋಚಿಸಿದ್ದಿರಾ? ತಿಳಿಯೋಣ ಬನ್ನಿ..

ನೋಟುಗಳು ಅಮಾನೀಕರಣಗೊಂಡರೆ ಅವುಗಳನ್ನು ಬದಲಾಯಿಸಲು ಮೊದಲು ಬ್ಯಾಂಕ್‌ಗಳಿಗೆ ತೆರಳಬೇಕು. ಸರ್ಕಾರದ ಆದೇಶದ ಪ್ರಕಾರ ಬ್ಯಾಂಕ್ ರದ್ದಾದ ನೋಟುಗಳನ್ನು ಕೇಂದ್ರ ಸರ್ಕಾರಕ್ಕೆ ಮರಳಿ ಕಳುಹಿಸುತ್ತದೆ. ಅಂದರೆ ಆರ್‌ಬಿಐ ಪ್ರಾದೇಶಿಕ ಕಚೇರಿಗೆ ರದ್ದಾದ ನೋಟುಗಳು ಸೇರುತ್ತದೆ. ಈ ನೋಟುಗಳು ನಿಷ್ಟ್ರಯೋಜಕವಾಗಿರುವುದರಿಂದ, ಅವು ವ್ಯರ್ಥವಾಗಿ ಉಳಿದಿವೆ. ಆದರೆ, ಆರ್‌ಬಿಐ ಈ ನೋಟುಗಳನ್ನು ಯಾರೂ ದುರುಪಯೋಗಪಡಿಸಿಕೊಳ್ಳದ ರೀತಿಯಲ್ಲಿ ವಿಲೇವಾರಿ ಮಾಡುತ್ತದೆ.

ರದ್ದಾದ ನೋಟುಗಳನ್ನು ಯಾವ ರೀತಿ ವಿಲೇವಾರಿ..?

ಈ ಮೊದಲು ಸರ್ಕಾರ ರದ್ದಾದ ನೋಟುಗಳನ್ನು ಸುಟ್ಟು ಹಾಕುತ್ತಿತ್ತು. ಆದರೆ, ಈಗ ಪ್ರಕ್ರಿಯೆ ಬೇರೆ ರೀತಿಯಲ್ಲಿ ಮಾಡುತ್ತದೆ. ಆರ್‌ಬಿಐ ಮೊದಲು ನೋಟುಗಳನ್ನು ಪರಿಶೀಲಿಸುತ್ತದೆ. ಏಕೆಂದರೆ ಅದರಲ್ಲಿ ನಕಲಿ ನೋಟುಗಳು ಏನಾದರೂ ಇದೆಯೇ ಎಂದು. ಯಂತ್ರದ ಮೂಲಕ ಪರಿಶೀಲಿಸಿ ಎಣಿಸುತ್ತದೆ. ಬಳಿಕ ತಮ್ಮ ಪ್ರಾದೇಶಿಕ ಕಚೇರಿಯ ವ್ಯಾಪ್ತಿಯಲ್ಲಿಯೇ ತುಂಡು-ತುಂಡುಗಳಾಗಿ ಮಾಡುತ್ತದೆ. ಹೇಗೆ ಕತ್ತರಿಸಲಾಗುತ್ತದೆ ಎಂದರೆ ಮತ್ತೆ ಮರು ಬಳಕೆಗೆ ಬಾರದಂತೆ ಮಾಡುತ್ತದೆ.

ಕತ್ತರಿಸಿದ ಬಳಿಕ ಮುಂದೇನು..?

ಕತ್ತರಿಸಿದ ತ್ಯಾಜ್ಯ ಕರೆನ್ಸಿ ನೋಟುಗಳನ್ನು ಇಟ್ಟಿಗೆ, ಮರುಬಳಕೆಯ ಕಾಗದವನ್ನು ಕಾರ್ಖಾನೆಗಳಿಗೆ ನೀಡಲಾಗುತ್ತದೆ, ಇದರಿಂದ ಕಾರ್ಡೋಡ್ ನಂತಹ ವಸ್ತುಗಳನ್ನು ತಯಾರಿಸಲಾಗುತ್ತದೆ. 2016 ರದ್ದಾದ ನೋಟುಗಳನ್ನು ಆರ್‌ಬಿಐ ಕೇರಳದ ವೆಸ್ಟರ್ನ್ ಇಂಡಿಯಾ ಪ್ರೈವುಡ್ ಎಂಬ ಕಂಪನಿಗೆ ಮಾರಾಟ ಮಾಡಿತ್ತು.(ಏಜೆನ್ಸಿಸ್)

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!