ಇಶಾನ್​ ಕಿಶನ್​ ಸ್ಫೋಟಕ ಶತಕ: ಹೈದರಾಬಾದ್​ ಆರ್ಭಟಕ್ಕೆ ಮುಗ್ಗರಿಸಿದ ರಾಜಸ್ಥಾನ!

Picture of Savistara

Savistara

Bureau Report

ಐಪಿಎಲ್​ನ ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ತಂಡ ಭರ್ಜರಿ ಗೆಲುವು ಸಾಧಿಸಿದೆ.

RR vs SRH: ಸನ್‌ರೈಸರ್ಸ್ ಹೈದರಾಬಾದ್ ತಂಡವು ಭರ್ಜರಿ ಗೆಲುವಿನೊಂದಿಗೆ ಐಪಿಎಲ್ 2025ರ ಋತುವನ್ನು ಆರಂಭಿಸಿದೆ. ಹೈದರಾಬಾದ್‌ನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 44 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ 242/6ಕ್ಕೆ ಸೀಮಿತವಾಯಿತು. ಧ್ರುವ್ ಜುರೆಲ್ (70) ಮತ್ತು ಸಂಜು ಸ್ಯಾಮ್ಸನ್ (66) ಅವರ ಹೋರಾಟ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.ಆರಂಭಿಕ ಬ್ಯಾಟರ್​ಗಳಾದ ಜೈಸ್ವಾಲ್ (1) ಮತ್ತು ರಿಯಾನ್ ಪರಾಗ್ (4) ಅಲ್ಪ ಮೊತ್ತಕ್ಕೆ ಇನ್ನಿಂಗ್ಸ್​ ಮುಗಿಸಿದರು. ಕೊನೆಯಲ್ಲಿ, ಶಿಮ್ರಾನ್ ಹೆಟ್ಮೆಯರ್ (42) ಮತ್ತು ಶುಭಮ್ ದುಬೆ (34*) ಆಕ್ರಮಣಕಾರಿಯಾಗಿ ಆಡಿದರೂ, ರಾಜಸ್ಥಾನಕ್ಕೆ ಗೆಲುವು ದಕ್ಕಲಿಲ್ಲ. ಹೈದರಾಬಾದ್ ಪರ ಸಿಮರ್‌ಜಿತ್ ಸಿಂಗ್, ಹರ್ಷಲ್ ಪಟೇಲ್ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ಆಡಮ್ ಜಂಪಾ ತಲಾ ಒಂದು ವಿಕೆಟ್ ಪಡೆದರು.ಇದಕ್ಕೂ ಮೊದಲು ಬ್ಯಾಟಿಂಗ್​ ಮಾಡಿದ್ದ ಹೈದರಾಬಾದ್ ತಂಡದ ಪರ ಟ್ರಾವಿಸ್ ಹೆಡ್ (67) ಸ್ಫೋಟಕ ಇನ್ನಿಂಗ್ಸ್​ ಮಾಡಿದರೇ, ಇಶಾನ್ ಕಿಶನ್ (106*) ಭರ್ಜರಿ ಶತಕ ಸಿಡಿಸಿದರು. ಹೆಡ್ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಇಶಾನ್ 45 ಎಸೆತಗಳಲ್ಲಿ ಶತಕ ಪೂರೈಸಿದರು. ಉಳಿದಂತೆ ಹೆನ್ರಿಕ್ ಕ್ಲಾಸೆನ್ (34), ನಿತೀಶ್ ಕುಮಾರ್ ರೆಡ್ಡಿ (30), ಮತ್ತು ಅಭಿಷೇಕ್ ಶರ್ಮಾ (24) ಕೂಡ ಕ್ರೀಸ್‌ನಲ್ಲಿದ್ದು ಮಿಂಚಿ ತಂಡದ ಸ್ಕೋರ್​ಗೆ ಕೊಡುಗೆ ನೀಡಿದರು.ರಾಜಸ್ಥಾನದ ಬೌಲರ್‌ಗಳಲ್ಲಿ ತುಷಾರ್ ದೇಶಪಾಂಡೆ 3 ವಿಕೆಟ್, ಮಹೀಶ್ ತೀಕ್ಷಣ 2 ವಿಕೆಟ್ ಮತ್ತು ಸಂದೀಪ್ ಶರ್ಮಾ ಒಂದು ವಿಕೆಟ್ ಪಡೆದರು. ಆದರೆ ಜೋಫ್ರಾ ಆರ್ಚರ್ ನಾಲ್ಕು ಓವರ್‌ಗಳಲ್ಲಿ 76 ರನ್‌ಗಳನ್ನು ಬಿಟ್ಟುಕೊಟ್ಟು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಕೆಟ್ಟ ದಾಖಲೆಯನ್ನು ಬರೆದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!