ಸುಳ್ಯದ ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್‌ರೈಟಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಬೇಸಿಗೆ ಶಿಬಿರ ಶುರು | ನೀವು ಭಾಗವಹಿಸಬಹುದು | ಇಲ್ಲಿದೆ ಫುಲ್ ಡೀಟೇಲ್ಸ್ |

Picture of Savistara

Savistara

Bureau Report

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಅಂಗೀಕೃತವಾದ ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್‌ರೈಟಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಬೇಸಿಗೆ ದಿನಗಳ ವಿಶೇಷ ಬೇಸಿಗೆ ಶಿಬಿರವನ್ನು ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಸುಳ್ಯದ ರಥಬೀದಿಯ ಅಶ್ವಿನಿ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಆಯೋಜಿಸಲಾಗಿದೆ.ಶಿಬಿರದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸರಕಾರಿ/ಖಾಸಗಿ ಉದ್ಯೋಗಸ್ಥರು ಕೂಡ ಭಾಗವಹಿಸಬಹುದಾಗಿದೆ. ಈ ಶಿಬಿರದಲ್ಲಿ ಒಂದು ತಿಂಗಳ ಕಂಪ್ಯೂಟರ್ ಮತ್ತು ಟೈಪ್‌ ರೈಟಿಂಗ್ ನ ಯಾವುದೇ ಕೋರ್ಸುಗಳನ್ನು ಅತ್ಯಂತ ಕಡಿಮೆ ದರದಲ್ಲಿ ಪಡೆಯಬಹುದಾಗಿದೆ.ಹಾಗೆಯೇ ಸಂಸ್ಥೆಯಲ್ಲಿ ಪ್ರತಿ 6 ತಿಂಗಳಿಗೊಮ್ಮೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯವರು ಪರೀಕ್ಷೆಯನ್ನು ನಡೆಸುತ್ತಿದ್ದು, ಪ್ರಮಾಣ ಪತ್ರ ಮತ್ತು ಅಂಕಪಟ್ಟಿಯು ಪ್ರತಿ 6 ತಿಂಗಳಿಗೊಮ್ಮೆ ವಿತರಣೆಯಾಗುತ್ತದೆ. ಸರಕಾರಿ ಉದ್ಯೋಗ ಪಡೆಯುವ ಅಭ್ಯರ್ಥಿಗಳಿಗೆ ಈ ಪ್ರಮಾಣ ಪತ್ರ ಮತ್ತು ಅಂಕಪಟ್ಟಿಯ ಅವಶ್ಯಕತೆಯಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.ಪೋಷಕರೇ ವಿದ್ಯಾರ್ಥಿಗಳು ರಜಾ ದಿನಗಳನ್ನು ವ್ಯರ್ಥ ಮಾಡದೆ ಈ ಅವಕಾಶವನ್ನು ಉಪಯೋಗಪಡಿಸಿಕೊಂಡಲ್ಲಿ ಅವರ ಮುಂದಿನ ಭವಿಷ್ಯಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಈ ಅವಕಾಶವನ್ನುಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್‌ ರೈಟಿಂಗ್ ಸಂಸ್ಥೆಯಿಂದ ಒದಗಿಸಲಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಮೊ: 9900909648, 8792420118 ಕರೆ ಮಾಡುವಂತೆ ವಿನಂತಿಸಲಾಗಿದೆ.

[t4b-ticker]
error: Content is protected !!