ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ₹ 41 ಇಳಿಕೆ

Picture of Savistara

Savistara

Bureau Report

ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡ‌ರ್ ದರ * 41 ಇಳಿಕೆಯಾಗಿದೆ ಎಂದು ತೈಲ ಮಾರಾಟ ಕಂಪನಿಗಳು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿವೆ.

ಈ ನೂತನ ದರ ಇಂದಿನಿಂದ (ಏಪ್ರಿಲ್ 1) ಜಾರಿಗೆ ಬರಲಿದೆ ಎಂದು ತೈಲ ಮಾರಾಟ ಕಂಪನಿಗಳು ತಿಳಿಸಿವೆ. 19 ಕೆ.ಜಿ ತೂಕದ ಅಡುಗೆ ಸಿಲಿಂಡರ್ ದರ ₹41 ಇಳಿಕೆಯಾಗಿದೆ.ದೆಹಲಿಯಲ್ಲಿ ₹1,803 ಇದ್ದ ಸಿಲಿಂಡ‌ರ್ ದರ ₹1,762ಕ್ಕೆ ದೊರೆಯಲಿದೆ.

ಕಳೆದ ಫೆಬ್ರುವರಿಯಲ್ಲಿ ₹ 6 ಇಳಿಕೆ ಮಾಡಲಾಗಿತ್ತು, ಮಾರ್ಚ್‌ನಲ್ಲಿ * 7 ಹೆಚ್ಚಳ ಮಾಡಲಾಗಿತ್ತು.* 41 ಇಳಿಕೆಯ ಪರಿಣಾಮ ಮುಂಬೈನಲ್ಲಿ ₹1,714, ಕೋಲ್ಕತ್ತದಲ್ಲಿ ₹ 1,872, ಚೆನ್ನೈನಲ್ಲಿ ₹1,924ಕ್ಕೆ ವಾಣಿಜ್ಯ ಬಳಕೆಯ ಒಂದು ಸಿಲಿಂಡ‌ರ್ ದೊರೆಯಲಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾ ತೈಲದ ದರ ಹಾಗೂ ವಿದೇಶಿ ವಿನಿಮಯ ದರದ ಆಧಾರದ ಮೇಲೆ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು, ಎಟಿಎಫ್ ಹಾಗೂ ಸಿಲಿಂಡರ್‌ ಬೆಲೆಯನ್ನು ಪರಿಷ್ಕರಿಸಿವೆ.ಆದರೆ, ಅಡುಗೆ ಅನಿಲ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸದ್ಯ 14.2 ಕೆ.ಜಿ ತೂಕದ ಸಿಲಿಂಡರ್‌ ದರವು ₹803 ಆಗಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!