ಮಂಗಳೂರು: ಹಿಂದೂ ಕಾರ್ಯಕರ್ತ, ರೌಡಿ ಶೀಟ‌ರ್ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ – ಇಬ್ಬರು ಹಿಂದೂ ಯುವಕರ ಸಹಿತ 8 ಆರೋಪಿಗಳು ಅಂದ‌ರ್ – ಇಲ್ಲಿದೆ ಹಂತಕರ ವಿವರ

Picture of Savistara

Savistara

Bureau Report

ಮಂಗಳೂರು: ನಗರದಲ್ಲಿ ಇತ್ತೀಚೆಗೆ ತಡರಾತ್ರಿ ಬರ್ಬರವಾಗಿ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಹಾಗೂ ಪೊಲೀಸ್ ದಾಖಲೆಗಳ ಪ್ರಕಾರ ರೌಡಿ ಶೀಟರ್ ಆಗಿದ್ದ ಸುಹಾಸ್‌ ಶೆಟ್ಟಿ (Suhas Shetty) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ. ಮಂಗಳೂರು ನಗರ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಸುಹಾಸ್‌ ಶೆಟ್ಟಿ ಅವರ ಹತ್ಯೆ ನಗರದಲ್ಲಿ ಸಂಚಲನ ಮೂಡಿಸಿತ್ತು.ತಡರಾತ್ರಿ ನಡೆದ ಈ ಬರ್ಬರ ಕೃತ್ಯದ ತನಿಖೆ ಚುರುಕುಗೊಳಿಸಿದ್ದ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಬಂಧಿತ ಆರೋಪಿಗಳ ವಿವರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದು. ಅವು ಈ ಕೆಳಗಿನಂತಿವೆ:

Advertisement

ಅಬ್ದುಲ್ ಸಫ್ಘಾನ್ (29): ಪೇಜಾವರ ನಿವಾಸಿ, ಪ್ರಸ್ತುತ ಬಜಪೆ ಕಿನ್ನಿಪದವುದಲ್ಲಿ ವಾಸ, ವೃತ್ತಿಯಲ್ಲಿ ಡ್ರೈವರ್.ನಿಯಾಜ್ (28): ಬಟ್ಟೆ ಶಾಂತಿಗುಡ್ಡೆ ನಿವಾಸಿ, ಮೇಸ್ತ್ರಿ ಹೆಲ್ಪರ್ ಕೆಲಸ.ಮೊಹಮ್ಮದ್ ಮುಝಮಿಲ್ (32): ಕೆಂಜಾರು ನಿವಾಸಿ,ಹಿಂದೆ ಸೌದಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ. ಇತ್ತೀಚೆಗೆ ವಿವಾಹವಾಗಿದ್ದ. ಈತನ ಮೇಲೆ ಈ ಹಿಂದೆ ಪಣಂಬೂರು ಠಾಣೆಯಲ್ಲಿ ದರೋಡೆ ಪ್ರಕರಣ (IPC 392) ದಾಖಲಾಗಿದೆ.

Advertisement

ಕಲಂದರ್ ಶಾಫಿ (31): ಕಳವಾರು ನಿವಾಸಿ. ಬೆಂಗಳೂರಿನಲ್ಲಿ ಸೇಲ್ಸ್ ಮ್ಯಾನ್. ಈತನ ಮೇಲೆ ಸುರತ್ಕಲ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Advertisement

ರಂಜಿತ್ (19): ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದವ, ಆದಿ ಕರ್ನಾಟಕ (SC) ಸಮುದಾಯಕ್ಕೆ ಸೇರಿದವ, ವೃತ್ತಿಯಲ್ಲಿ ಡ್ರೈವರ್. ಕೃತ್ಯಕ್ಕೆ ಬಳಸಿದ ಲಾಂಗ್ (ಮಚ್ಚು) ಅನ್ನು ಕಾರಿನಿಂದ ತೆಗೆದುಕೊಟ್ಟ ಆರೋಪ ಈತನ ಮೇಲಿದೆ.

Advertisement

ನಾಗರಾಜ್ (20): ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದವ, ಒಕ್ಕಲಿಗ ಗೌಡ ಸಮುದಾಯದವ, ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ.

Advertisement

ಮೊಹಮ್ಮದ್ ರಿಜ್ವಾನ್ (28): ಜೋಕಟ್ಟೆ ನಿವಾಸಿ, ಹಿಂದೆಸೌದಿ ಅರೇಬಿಯಾದಲ್ಲಿ ಆಯಿಲ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ.ಅದಿಲ್ ಮೆಹರೂಫ್‌: (ಈತನ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ).

Advertisement

ಬಂಧಿತರಲ್ಲಿ ಮಂಗಳೂರು ಸ್ಥಳೀಯರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಯುವಕರೂ ಸೇರಿದ್ದಾರೆ. ಕೆಲವರ ಮೇಲೆ ಈ ಹಿಂದೆಯೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಕೊಲೆಯ ಹಿಂದಿನ ನಿಖರ ಕಾರಣ. ಸಂಚು ಹಾಗೂ ಇದರಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisement
News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

[t4b-ticker]
error: Content is protected !!