ಪೊಲೀಸರ ರಜೆ ದಿಢೀರ್ ರದ್ದು | ರಜೆಯಲ್ಲಿ ಇರುವವರಿಗೆ ಶೀಘ್ರ ಮರಳಲು ಸೂಚನೆ

Picture of Savistara

Savistara

Bureau Report

ಅಹಮದಾಬಾದ್/ಚಂಡೀಗಢ: ಭಾರತ ಮತ್ತು ಪಾಕಿಸ್ತಾನನಡುವಿನ ಉದ್ವಿಗ್ನತೆಯಿಂದಾಗಿ ಯಾವಾಗ ಏನು ನಡೆಯುವುದೋ ಎಂಬಂಥ ಅನಿಶ್ಚಿತ ಸನ್ನಿವೇಶ ಇರುವುದರಿಂದ ಪಾಕ್ ಜತೆ ಗಡಿ ಹಂಚಿಕೊಂಡಿರುವ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳ ಎಲ್ಲ ಪೊಲೀಸರ ರಜೆ ರದ್ದುಪಡಿಸಲಾಗಿದ್ದು, ರಜೆ ಮೇಲೆ ತೆರಳಿರುವವರು ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳು ನಿರ್ದೇಶಿಸಿದ್ದಾರೆ. ಭಾರತ-ಪಾಕ್ ಯುದ್ಧದ ಕಾರ್ಮೋಡ ಕವಿದಿರುವುದರಿಂದ ಗುಜರಾತ್ ಕರಾವಳಿಯುದ್ದಕ್ಕೂ ಭದ್ರತೆ ಬಿಗಿಗೊಳಿಸಲಾಗಿದೆ. ಎರಡೂ ದೇಶಗಳ ನಡುವಿನ 강원 ಉಲ್ಬಣಿಸುವ ಸಾಧ್ಯತೆ ಇರುವುದರಿಂದ ಅದನ್ನು ಎದುರಿಸಲು ಉಭಯ ರಾಜ್ಯಗಳು ಸಜ್ಜುಗೊಂಡಿವೆ. ‘ಅನಿಶ್ಚಿತ ಪರಿಸ್ಥಿತಿ ಇರುವುದರಿಂದ ರಜೆಯಲ್ಲಿರುವ ಎಲ್ಲ ಸಿಬ್ಬಂದಿ ಕೂಡಲೇ ಕೆಲಸಕ್ಕೆ ಮರಳುವಂತೆ ಗುಜರಾತ್ ಡಿಜಿಪಿ ವಿಕಾಸ್ ಸಹಾಯ್‌ರ ಕಚೇರಿ ಬುಧವಾರ ರಾತ್ರಿಯೇ ಆದೇಶ ಹೊರಡಿಸಿದೆ.ಪಾಕ್‌ನಲ್ಲಿ ನಡೆಸಲಾದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯ ನಂತರ ಕರಾವಳಿಯುದ್ದಕ್ಕೂ ಪೊಲೀಸರನ್ನು ಕಟ್ಟೆಚ್ಚರ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ರಾಜ್‌ ಕೋಟ್ ವಲಯದ ಐಜಿಪಿ ಅಶೋಕ್ ಕುಮಾರ್ ಯಾದವ್ ಹೇಳಿದ್ದಾರೆ. ರಾಜ್ ಕೋಟ್ ವಲಯ ವ್ಯಾಪ್ತಿಯ ಐದು ಜಿಲ್ಲೆಗಳ ಪೈಕಿ ಜಾಮ್‌ನಗರ, ಮೊರ್ಬಿ ಮತ್ತು ದೇವಭೂಮಿ ದ್ವಾರಕೆ ಕರಾವಳಿ ಪ್ರದೇಶದಲ್ಲಿವೆ. ಗುಜರಾತ್‌ನ ಕರಾವಳಿಯುದ್ದಕ್ಕೂ ಕಳೆದೆರಡು ದಿನಗಳಿಂದ ಭದ್ರತೆ

ಬಿಗಿಗೊಳಿಸಲಾಗಿದೆ. ಆ ವಲಯದಲ್ಲಿ ಗರಿಷ್ಠ ಸಂಖ್ಯೆ ಪೊಲೀಸರನ್ನು (ಸಹಿ ನಿಯೋಜಿಸಲಾಗಿದೆ ಎಂದು ಯಾದವ್ ವಿವರಿಸಿದ್ದಾರೆ. ಗಡಿ ಪ್ರದೇಶಗಳಲ್ಲಿ ನಿಯೋಜಿತವಾಗಿರುವ ಎಲ್ಲ ಆಡಳಿತಾತ್ಮಕ ಅಧಿಕಾರಿಗಳು ಮತ್ತು ಪೊಲೀಸರ ರಜೆಗಳನ್ನು ರಾಜಸ್ಥಾನ ಸರ್ಕಾರ ರದ್ದುಪಡಿಸಿದೆ. ಪಾಕ್‌ನೊಂದಿಗೆ ಗುಜರಾತ್ 532 ಕಿ.ಮೀ. ಗಡಿ ಹೊಂದಿದೆ. / ಪಾಕ್‌ನೊಂದಿಗೆ ರಾಜಸ್ಥಾನ ಹೊಂದಿರುವ ಗಡಿ ವಿಸ್ತೀರ್ಣ 1,070 ಕಿ. ಲೊ ಮೀ ಆಗಿದೆ. ಪಾಕ್ ಒಂದಿಗೆ ಗುಜರಾತ್ ಭೂ ಹಾಗೂ ಸಾಗರ ಎರಡೂ ಗಡಿಗಳನ್ನು ಹೊಂದಿದೆ.ಗ್ರಾಮಸ್ಥರ ಸಹಕಾರ: ಗುಜರಾತ್, ರಾಜಸ್ತಾನ, ಪಂಜಾಬ್ರಾಜ್ಯಗಳಲ್ಲಿ ಬಿಗಿಭದ್ರತೆ ವಹಿಸಲಾಗಿದ್ದು, ಸಂಜೆ 6ರ ನಂತರ ವ್ಯಾಪಾರ ವಹಿವಾಟು ಬಂದ್ ಮಾಡಲಾಗುತ್ತಿದೆ. ಸ್ಥಳೀಯರು ಭದ್ರತಾ ಪಡೆ ಮತ್ತು ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ. ಈ ಭಾಗಗಳಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜನರು ಹೇಳಿದ್ದಾರೆ.

ಗಡಿ ಜಿಲ್ಲೆಗಳಲ್ಲಿ ಶಾಲೆಗಳು ಬಂದ್

ಚಂಡೀಗಢ: ಭಾರತ-ಪಾಕ್ ಸಂಘರ್ಷ ತಾರಕಕ್ಕೇರುತ್ತಿರುವ ನಡುವೆ, ಪಂಜಾಬ್‌ನ ಆರು ಗಡಿ ಜಿಲ್ಲೆ ಹಾಗೂ ರಾಜಸ್ಥಾನದ ನಾಲ್ಕು ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರದಿಂದ ಭಾನುವಾರದ ವರೆಗೆ ಎಲ್ಲ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಜಸ್ಥಾನದ ಶ್ರೀ ಗಂಗಾನಗರ, ಬಿಕಾನೇರ್, ಜೈಸರ್ ಮತ್ತು ಬಾರ್ಮೇರ್ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಸಾರಲಾಗಿದೆ. ರಾಜ್ಯಾದ್ಯಂತ ಭದ್ರತೆ ಬಿಗಿಗೊಳಿಸುವಂತೆ ರಾಜಸ್ಥಾನ ಸಿಎಂ ಭಜನ್‌ಲಾಲ್ ಶರ್ಮಾ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

[t4b-ticker]
error: Content is protected !!