ಸುಳ್ಯ: ನಮ್ಮ ದೇಶ ಕಲೆ ಮತ್ತು ಸಂಸ್ಕೃತಿಯೊಂದಿಗೆ ಪ್ರಾಚೀನ ಕಾಲದಿಂದಲೂ ಅವಿನಾಭವ ಸಂಬಂಧ ಹೊಂದಿದಾಗಿದ್ದು, ಅವೆಲ್ಲವೂ ನಮ್ಮ ಬದುಕಿನ ಭಾಗವಾಗಿದೆಯೆಂದು ಎಂದು ಸಾಮಾಜಿಕ ಕಾರ್ಯಕರ್ತ, ನ.ಸೀತಾರಾಮ ಹೇಳಿದರು. ಕನಕಮಜಲು ಕನಕಕಲಾ ಗ್ರಾಮದ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಭಾರತೀಯರು ನೂರಾರು ಕಲಾ ಪ್ರಕಾರವನ್ನು ಜಗತ್ತಿಗೆ ಪರಿಚಯಿಸಿದವರು ಈ ಹಿನ್ನಲೆಯಲ್ಲಿ ಗುರುದೇವ್ ಅಕಾಡೆಮಿ ಭಾರತೀಯ ಕಲಾ ಪರಂಪರೆ ಮುಂದುವರಿಸಿಕೊಂಡು ಮುಂದಿನ ಪೀಳಿಗೆಗೆ ಜೋಡಿಸಿಕೊಳ್ಳುತ್ತ ಹೋಗುತ್ತಿರುವುದು ಶ್ಲಾಘನಿಯ ಕಾರ್ಯವೆಂದು ಅಭಿಪ್ರಾಯಪಟ್ಟರು.

ಸಂಪತ್ ಕುಮಾರ್ ಮಡಿಕೇರಿ ಅಗಲಿದ ಡಾ.ಗಿರೀಶ್ ಭಾರದ್ವಾಜ್ ಅವರಿಗೆ ನುಡಿನಮನ ಸಲ್ಲಿಸಿ ಗ್ರಾಮೀಣ ಪ್ರದೇಶದಿಂದ ತೆರಳಿ ನೂರಾರು ತೂಗು ಸೇತುವೆ ನಿರ್ಮಿಸುವ ಮೂಲಕ ಮನುಷ್ಯ ಸಂಬಂಧವನ್ನು ಹತ್ತಿರಗೊಳಿಸಿದವರು ಭಾರಧ್ವಾಜ್ ರೆಂದು ಅಭಿಪ್ರಾಯಪಟ್ಟರು.ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಸೀತಾರಾಮ ಬುಡ್ಡೆಗುತ್ತು ಮುಖ್ಯ ಅತಿಥಿಗಳಾಗಿದ್ದರು.

ಗುರುದೇವ್ ಅಕಾಡೆಮಿಯ ಕಲಾ ನಿರ್ದೇಶಕರಾದ ಚೇತನ ರಾಧಾಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಗುರುದೇವ್ ಅಕಾಡೆಮಿಯು ಕಳೆದ 32 ವರ್ಷಗಳಿಂದ ನೃತ್ಯ ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದು ಮಂಡ್ಯ, ಮೈಸೂರು, ಕುಶಾಲನಗರ ಶಾಖೆಯ ಜೊತೆಗೆ ಸ್ಥಳೀಯ ಭರತನಾಟ್ಯ ಕಲಾವಿದರ ತಂಡ ರೂಪಿಸಬೇಕು ನೆಲೆಯಲ್ಲಿ ಹುಟ್ಟೂರು ಕನಕಮಜಲುನಲ್ಲಿಯೂ ಭರತನಾಟ್ಯ, ನೃತ್ಯ ಕಲಾ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಗುರುದೇವ್ ಅಕಾಡೆಮಿಯ ವ್ಯವಸ್ಥಾಪಕರಾದ ರಾಧಾಕೃಷ್ಣ ಪಿ.ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನಕಮಜಲು ಯುವಕ ಮಂಡಲದ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕರು ಭಾಗವಹಿಸಿದ್ದರು.







































