ಮೊನ್ನೆ ಉಡುಪಿಯ ಸಾರ್ವಜನಿಕ ವೇದಿಕೆಯಲ್ಲಿ ಕಾಂಚನ್ ಹುಂಡೈನ ಮಾಲಕನಾದ ಪ್ರಸಾದ್ ಕಾಂಚನ್ ಎನ್ನುವ ವ್ಯಕ್ತಿ “ರಾಮ ಭಕ್ತರಿಗೆ ಚಪ್ಪಲಿಯಲ್ಲಿ ಹೊಡೆಯಿರಿ”ಎನ್ನುವ ಹೇಳಿಕೆಯನ್ನು ನೀಡಿದ್ದು, ಸಮಸ್ತ ರಾಮ ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ.
ಈ ದಿನ ಸುಬ್ರಮಣ್ಯದ ಬಿಲದ್ವಾರದ ಬಳಿ ಪ್ರಸಾದ್ ಕಾಂಚನ್ ಮಾಲಕತ್ವದ ಹುಂಡೈ ಕಾರು ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿತ್ತು. ಈ ವಿಷಯ ತಿಳಿದ ಸುಬ್ರಹ್ಮಣ್ಯದ ಹಿಂದು ಪ್ರಮುಖರು ಸ್ಥಳಕ್ಕೆಆಗಮಿಸಿ, ಹೇಳಿಕೆಯನ್ನು ಖಂಡಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೆ ಸಮಸ್ತ ಹಿಂದೂ ರಾಮಭಕ್ತರ ಕ್ಷಮೆಯನ್ನು ಯಾಚಿಸುವಂತೆ ಆಗ್ರಹಿಸಿದ್ದಾರೆ. ತದನಂತರ ಪೊಲೀಸ್ ಠಾಣೆ ತೆರಳಿ ಮನವಿಯನ್ನು ಕೂಡ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಪ್ರಮುಖರದ ಡಾ. ರವಿ ಕಕ್ಕೆಪದವು, ಮೋನಪ್ಪ ಮಾನಾಡು, ದಿನೇಶ್ ಸಂಪ್ಯಾಡಿ, ಗಿರೀಶ್ ಪೈಲಾಜೆ, ದಿಲೀಪ್ ಉಪ್ಪಳಿಕೆ, ರಾಧಾಕೃಷ್ಣ ಅರ್ವರ್, ಯಶೋಧ ಕೃಷ್ಣ ನೂಚೀಲ, ಚಿದಾನಂದ ಕಂಡಡ್ಕ, ವೆಂಕಟೇಶ್ ಎಚ್ ಎಲ್, ಶೋಭಾ ಗಿರಿಧರ್, ಶೇಖರ್ ಅಗಲಿಕಜೆ , ಮನೀಶ್ ಪದೇಲ, ಕಿರಣ್ ಪೈಲಾಜೆ, ಯಶವಂತ ಕೊಪ್ಪಳಗದ್ದೆ ಶ್ರೀಕುಮಾರ್ ಬಿಲದ್ವಾರ,ಜಯರಾಮ್ ಹೆಚ್. ಎಲ್, ಮನೋಜ್ ಸುಬ್ರಹ್ಮಣ್ಯ, ರಾಮಚಂದ್ರ ಸುಬ್ರಹ್ಮಣ್ಯ ಹಾಗೂ ಇನ್ನು ಅನೇಕ ರಾಮಭಕ್ತರು ಉಪಸ್ಥಿತರಿದ್ದರು.







































