ಸುಳ್ಯ : ನಗರದ ರಸ್ತೆಯಲ್ಲಿ ಹೊಂಡ, ವಾರ್ಡ್ ಗಳಲ್ಲಿ ರಸ್ತೆಯ ಬದಿಯ ಪೊದೆ ಕಡಿದು ಚರಂಡಿಯನ್ನು ಸ್ವಚ್ಚಗೊಳಿಸಿ

Picture of Savistara

Savistara

Bureau Report

ಸುಳ್ಯ ನಗರದ ರಸ್ತೆಯಲ್ಲಿರುವ ಹೊಂಡ ಮುಚ್ಚಬೇಕು – ರಸ್ತೆ ಬದಿಯ ಬೆಳೆದಿರುವ ಪೊದೆಗಳನ್ನು ಕಡಿದು ಚರಂಡಿ ಸ್ವಚ್ಚಗೊಳಿಸುವಂತೆ ಸುಳ್ಯ ನಗರ ಬಿಜೆಪಿ ವತಿಯಿಂದ ನ.ಪಂ. ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಸುಳ್ಯನಗರದ ಪ್ರಮುಖ ರಸ್ತೆಯಲ್ಲಿ ಶಾಸ್ತಿವೃತ್ತದಲ್ಲಿ ಹೊಂಡ, ಗಾಂಧಿನಗರ ಮಿತ್ತೂರು ನಾಯರ್ ಕಟ್ಟೆ ಬಳಿ ಹೊಂಡ, ಗಾಂಧಿನಗರ ಶಾಲೆಗೆ ತಿರುಗುವಲ್ಲಿ ಹೊಂಡ ಹಾಗೂ ರಥಬೀದಿಯ ಶ್ರೀದೇವಿ ಸ್ಟುಡಿಯೋ ಎದುರುಗಡೆ ಒಳಚರಂಡಿ ಮ್ಯಾನ್ ಹೋಲ್ ಜಗ್ಗಿರುವುದರಿಂದ ವಾಹನ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗುತ್ತದೆ. ಅದೇ ರೀತಿ ವಾಹನ ಅಪಘಾತ ಆಗುವ ಸಂಭವವಿದೆ ಅದುದರಿಂದ ಈ ಹೊಂಡಗಳನ್ನು ತಕ್ಷಣ ಮುಚ್ಚಿಸಿ ನಾಗರಿಕರಿಗೆ ಸಹಾಯ ಮಾಡಬೇಕು.

ರಸ್ತೆ ಬದಿಯ ಕಾಡು ಪೊದೆಗಳನ್ನು ಕಡಿಸದೆ ರಸ್ತೆಗೆ ವಾಲಿಕೊಂಡು ಹುಲ್ಲು ಮತ್ತು ಮರಗಿಡಗಳಿವೆ. ಇದರಿಂದ ರಸ್ತೆ ಸರಿಯಾಗಿ ಕಾಣಿಸುತ್ತಿಲ್ಲ.ಎಲ್ಲಾ ರಸ್ತೆಗಳ ಬದಿಗಳನ್ನು ಸ್ವಚ್ಛಗೊಳಿಸಬೇಕಾಗಿ ಮನವಿ. ಎಲ್ಲಾ ರಸ್ತೆ ಬದಿಗಳ ಚರಂಡಿಯ ಹೂಳೆತ್ತುವಿಕೆ ಕೆಲಸ ಇನ್ನೂ ಆಗದಿರುವುದರಿಂದ ರಸ್ತೆಯಲ್ಲಿಯೇ ನೀರು ಸಂಚರಿಸುತ್ತದೆ. ಇದರಿಂದ ಪಾದಚಾರಿಗಳಿಗೆ ತುಂಬಾ ತೊಂದರೆಯಾಗುತ್ತದೆ .ಈ ಎಲ್ಲಾ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮಾಡಿಸಿ ಸುಳ್ಯ ನಗರ ನಾಗರಿಕರ ಸಂಚಾರಕ್ಕೆ ಅನುಕೂಲ ಮಾಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ನಗರ ಸಮಿತಿ ಅಧ್ಯಕ್ಷ ಎ.ಟಿ.ಕುಸುಮಾಧರ ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

[t4b-ticker]
error: Content is protected !!