ಮತ್ತೆ ಮತ್ತೆ ಕೆಣಕಿದ ಪಾಕ್​​ಗೆ ಸರಿಯಾದ ಉತ್ತರ.. ಪಾಕಿಸ್ಥಾನದ 3 ವಾಯುನೆಲೆಗಳ ಮೇಲೆ ಅಟ್ಯಾಕ್..!

Picture of Savistara

Savistara

Bureau Report

ನಿನ್ನೆಯೂ ಕೂಡ ಪಾಕಿಸ್ತಾನ ನಾಗರಿಕರನ್ನು ಗುರಿಯಾಗಿಸಿ ಭಾರತದ ಮೇಲೆ ದಾಳಿಗೆ ಯತ್ನಿಸಿದೆ. ಅದಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದ್ದು, ಪ್ರತೀಕಾರದ ದಾಳಿ ಮಾಡಿದೆ. ಲಾಹೋರ್​​, ರಾವಲ್ಪಿಂಡಿಯಲ್ಲಿ ಭಾರೀ ಸ್ಫೋಟ ಸಂಭವಿಸಿರುವ ಮಾಹಿತಿ ಸಿಕ್ಕಿದೆ.ಭಾರತದಿಂದ ಕ್ಷಿಪಣಿ ದಾಳಿಯಾಗಿದ್ದು, ಪಾಕಿಸ್ತಾನದ ಮೂರು ವಾಯುನೆಲೆಗಳನ್ನು ಗುರಿಯಾಗಿಸಿಕೊಡು ದಾಳಿ ಮಾಡಲಾಗಿದೆ. ಮುರೀದ್, ನೂರ್​ಖಾನ್​, ರಫೀಖಿ ವಾಯುನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿದೆ. ಆ ಮೂಲಕ ಪದೇ ಪದೆ ಕೆಣಕಿದ ಪಾಕ್​ಗೆ ಭಾರತ ಖಡಕ್​ ತಿರುಗೇಟು ನೀಡಿದೆ. ಪ್ರತಿದಾಳಿಗೆ ಸಂಬಧಿಸಿ ಭಾರತೀಯ ಸೇನೆಯು ಕೆಲವೇ ಕ್ಷಣದಲ್ಲಿ ಮಾಹಿತಿ ನೀಡಲಿದೆ.

ಜಮ್ಮುಕಾಶ್ಮೀರ, ಪಂಜಾಬ್, ರಾಜಸ್ಥಾನ ಹಾಗೂ ಗುಜರಾತ್​ನ 20 ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ಸತತ 2ನೇ ದಿನ ಡ್ರೋಣ್​ ದಾಳಿಗೆ ವಿಫಲ ಯತ್ನ ನಡೆಸಿದೆ. ಏಕೆಂದರೆ ಪಾಕಿಸ್ತಾನದ ಡ್ರೋಣ್​ಗಳು ಗುರಿ ಮುಟ್ಟುವ ಮೊದಲೇ ಭಾರತೀಯ ವಾಯು ಸೇನೆ ಹೊಡೆದುರುಳಿಸಿ ನೆಲಕ್ಕೆ ಕೆಡವಿವೆ.ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌, ಅವಂತಿಪೋರಾದ ವಾಯುನೆಲೆಯ ಮೇಲೆ ಗುರಿಯಾಗಿರಿಸಿಕೊಂಡು ದಾಳಿಗೆ ಯತ್ನಿಸಿತ್ತು. ಆದರೆ ಇದನ್ನು ಮೊದಲೇ ಮನಗಂಡಿದ್ದ ಭಾರತೀಯ ವಾಯು ಸೇನೆ, ಪಾಕಿಸ್ತಾನದ ಎಲ್ಲ ಡ್ರೋನ್​ಗಳನ್ನು ಛಿದ್ರಛಿದ್ರ ಮಾಡಿದೆ. ಇದರಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಪಾಕ್​ ಅಳುತ್ತಿದೆ. ​

[t4b-ticker]
error: Content is protected !!