ಅಮೆರಿಕ ಮಧ್ಯಸ್ಥಿಕೆ ವಹಿಸಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನವಿರಾಮ (Ceasefire) ಘೋಷಿಸಿತ್ತು.ಆದರೂ ತನ್ನ ಹಳೇ ಚಾಳಿ ಮುಂದುವರೆಸಿರುವ ಪಾಕಿಸ್ತಾನಕದನವಿರಾಮ ಘೋಷಣೆಯಾದ ಮೂರೇ ಗಂಟೆಯಲ್ಲಿ ಮತ್ತೆ ಭಾರತದ ಮೇಲೆ ದಾಳಿ ನಡೆಸಿದೆ.
ಇಂದು ಸಂಜೆ 5 ಗಂಟೆಯಿಂದ ಕದನವಿರಾಮ ಘೋಷಿಸಲಾಗಿತ್ತು. ಆದರೆ, ಇಂದು ರಾತ್ರಿ 8.45ರ ಸುಮಾರಿಗೆ ಜಮ್ಮುವಿನ ಉದಂಪುರ ಮತ್ತು ಸಾಂಬಾದಲ್ಲಿ ಡೋನ್ ಹಾಗೂ ಶೆಲ್ ದಾಳಿ ನಡೆಸಲಾಗಿದೆ. ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಕಚ್ ಗಡಿಯಲ್ಲಿ ಹೊಸ ಡೋನ್‌ಗಳು ಪತ್ತೆಯಾಗಿವೆ, ಶ್ರೀನಗರದಲ್ಲಿ ಸ್ಪೋಟಗಳ ಸದ್ದು ಕೇಳಿಬಂದಿದೆ.













































