ಬಲೂಚಿಸ್ತಾನದ ಮೊದಲ ಹಿಂದೂ ಮಹಿಳಾ ಸಹಾಯಕ ಆಯುಕ್ತೆ ಕಾಶಿಶ್ ಚೌಧರಿ ನೇಮಕ

Picture of Savistara

Savistara

Bureau Report

ಬಲೂಚಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಸಮುದಾಯದ ಕಶಿಶ್‌ ಚೌಧರಿ ಸಹಾಯಕ ಆಯುಕ್ತರಾಗಿ (ಅಸಿಸ್ಟೆಂಟ್‌ ಕಮಿಷನರ್‌ -ಎಸಿ) ನೇಮಕಗೊಳ್ಳುವ ಮೂಲಕ ದಾಖಲೆ ಮಾಡಿದ್ದಾರೆ. ಬಲೂಚ್‌ನಲ್ಲಿ ಈ ಸ್ಥಾನಕ್ಕೆ ನೇಮಕಗೊಂಡ ಮೊದಲ ಹಿಂದೂ ಮಹಿಳೆಯಾಗಿದ್ದಾರೆ.ಬಲೂಚ್‌ನ ಚಗೈ ಎಂಬ ಜಿಲ್ಲೆಯ ನೋಶ್ಕಿಯವರಾದ 25 ವರ್ಷದ ಕಶಿಶ್‌, ಬಲೂಚಿಸ್ತಾನ ಸಾರ್ವಜನಿಕ ಸೇವಾ ಆಯೋಗ (ಬಿಪಿಎಸ್‌ಸಿ) ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ.ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕಶಿಶ್‌, ತನ್ನ ತಂದೆ ಗಿರ್ಧಾರಿ ಲಾಲ್‌ ಅವರ ಜೊತೆಗೂಡಿ ಬಲೂಚ್‌ ಸಿಎಂ ಸರ್ಫರಾಜ್‌ ಬುಗ್ತಿ ಅವರನ್ನು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕಶಿಶ್‌ ಮಹಿಳೆ ಹಾಗೂ ಅಲ್ಪಸಂಖ್ಯಾತರ ಸಬಲೀಕರಣಕ್ಕಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.2022ರ ಜುಲೈನಲ್ಲಿ ಮನೇಶ್ ರೋಪೆಟಾ ಪಾಕಿಸ್ತಾನದ ಕರಾಚಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕವಾಗಿರುವ ಮೊದಲ ಹಿಂದೂ ಮಹಿಳೆಯಾಗಿದ್ದಾರೆ. ಅವರು ಈಗಲೂ ತಮ್ಮ ಕರ್ತವ್ಯಗಳಲ್ಲಿ ನಿರತರಾಗಿದ್ದಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!