ಇನ್ನೂ ಮುಗಿದಿಲ್ಲ…: ಪಶ್ಚಿಮ ಬಂಗಾಳ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ

Picture of Savistara

Savistara

Bureau Report

ಬಂಗಾಳದ ನೆಲದಿಂದ 140 ಕೋಟಿ ಭಾರತೀಯರ ಪರವಾಗಿ ನನ್ನ ಘೋಷಣೆ…

ಅಲಿಪುರ್ದುವಾ‌ರ್(ಪಶ್ಚಿಮ ಬಂಗಾಳ) : ಆಪರೇಷನ್‌ಸಿಂದೂರ ಇನ್ನೂ ಮುಗಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.ಅಲಿಪುರ್ದುವಾರ್‌ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ “ಭಯೋತ್ಪಾದನೆಯನ್ನು ಪೋಷಿಸುವ ಎಲ್ಲರ ವಿರುದ್ಧ ಭಾರತ ನಿರ್ಣಾಯಕವಾಗಿ ಕ್ರಮ ಕೈಗೊಳ್ಳುತ್ತದೆ. ಭಾರತೀಯ ಮಹಿಳೆಯರ ಘನತೆಗೆ ಅವಮಾನ ಮಾಡಿದ “ಭ*ಯೋತ್ಪಾದಕರ ಹುಂಬ ಧೈರ್ಯ” ಕ್ಕೆ ದೇಶದ ಸಶಸ್ತ್ರ ಪಡೆಗಳು ಪ್ರತೀಕಾರ ತೀರಿಸಿಕೊಂಡಿವೆ ಎಂದರು.“ಬಂಗಾಳದ ಈ ನೆಲದಿಂದ, 140 ಕೋಟಿ ಭಾರತೀಯರ ಪರವಾಗಿ ನಾನು ಘೋಷಿಸುತ್ತೇನೆ, ಆಪರೇಷನ್‌ ಸಿಂದೂ‌ರ್ ಇನ್ನೂ ಮುಗಿದಿಲ್ಲ” ಎಂದು ಮೋದಿ ಹೇಳಿದರು.”ಪಹಲ್ಲಾಮ್ ದಾಳಿಯ ನಂತರ ಪಶ್ಚಿಮ ಬಂಗಾಳದಲ್ಲಿಯೂ ಸಾಕಷ್ಟು ಕೋಪವಿತ್ತು. ನಿಮ್ಮೊಳಗಿನ ಕೋಪವನ್ನು ನಾನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಭ*ಯೋತ್ಪಾದಕರು ನಮ್ಮ ಸಹೋದರಿಯರ ಸಿಂದೂರ ಅಳಿಸುವ ಧೈರ್ಯವನ್ನು ಹೊಂದಿದ್ದರು. ನಮ್ಮ ಸೈನ್ಯವು ಅವರಿಗೆ ಸಿಂದೂರದ ಶಕ್ತಿಯನ್ನು ಅರಿಯುವಂತೆ ಮಾಡಿದೆ’ ಎಂದರು.

ಮೂರು ಬಾರಿ ಹೊಡೆತ ನೀಡಿದ್ದೇವೆ

ಪಹಲ್ಗಾಮ್ ದಾಳಿಯ ಬಳಿಕ ಭಾರತ ವಿಶ್ವಕ್ಕೆ ಸಂದೇಶ ನೀಡಿದ್ದು, ಯಾವುದೇ ಉಗ್ರ ದಾಳಿಗೆ ಭಾರೀ ಬೆಲೆ ತೆರಬೇಕಾಗುತ್ತದೆ. ನಾವು ಪಾಕಿಸ್ತಾನದ ನೆಲಕ್ಕೆ ನುಗ್ಗಿ ಮೂರು ಬಾರಿ ಹೊಡೆದಿದ್ದೇವೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು ಎಂದು 2016 ರ ಸರ್ಜಿಕಲ್ ಸ್ಟೈಕ್, 2019ರ ಬಾಲಕೋಟ್ ಸ್ಟೈಕ್ ಮತ್ತು ಆಪರೇಷನ್ ಸಿಂದೂರ್ ನೆನಪಿಸಿದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!