3 ತಿಂಗಳಲ್ಲಿ ಶಿರಾಡಿ ಹೆದ್ದಾರಿ ಕಾಮಗಾರಿ ಪೂರ್ಣ: ಕಳಪೆಯಾದರೆ ಕೇಂದ್ರಕ್ಕೆ ಪತ್ರ, ನಮ್ಮ ಕೈಯಲ್ಲಿ ಏನಿಲ್ಲ ಎಂದ ಸತೀಶ್ ಜಾರಕಿಹೊಳಿ

Picture of Savistara

Savistara

Bureau Report

ಸಕಲೇಶಪುರ ತಾಲೂಕಿನ ದೊಡ್ಡತಪ್ಪಲು ಗ್ರಾಮದಲ್ಲಿ ಭೂ ಕುಸಿತ ಪ್ರದೇಶವನ್ನು ಸಚಿವ ಸತೀಶ್‌ ಜಾರಕಿಹೊಳಿ ಪರಿಶೀಲಿಸಿದರು. ಶಿರಾಡಿ ಘಾಟ್ ರಸ್ತೆ ಕಾಮಗಾರಿಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಮಗಾರಿ ಕಳಪೆಯಾದರೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಸಚಿವರು ಹೇಳಿದ್ದಾರೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ಹಾಸನ: ಮುಂದಿನ ಮೂರು ತಿಂಗಳಿನಲ್ಲಿ ಶಿರಾಡಿಘಾಟ್‌ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಎಚ್‌ಎಚ್‌ಎಐ ಅಧಿಕಾರಿಗಳು, ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಸಕಲೇಶಪುರ ತಾಲೂಕು ದೊಡ್ಡತಪ್ಪಲು ಗ್ರಾಮದ ಬಳಿ ಭೂ ಕುಸಿತ ಪ್ರದೇಶವನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ”ಮೂರಲ್ಲ ಇನ್ನೂ ಆರು ತಿಂಗಳೇ ಆಗಲಿ ಕಾಮಗಾರಿ ಪೂರ್ಣಗೊಳಿಸಿದರೆ ಒಳ್ಳೆಯದು,” ಎಂದರು.

”ಲೋಕೋಪಯೋಗಿ ಸಚಿವನಾಗಿ ನನ್ನ ಅಧಿಕಾರ ಅವಧಿಯಲ್ಲಿ ಶಿರಾಡಿ ಸಮಸ್ಯೆಗೆ ಮುಕ್ತಿ ಹಾಡುತ್ತೇನೆ ಎಂದು ಹೇಳಿದ್ದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಬೇಗ ಕಾಮಗಾರಿ ಮುಗಿಯಬೇಕಿದೆ,” ಎಂದು ತಿಳಿಸಿದರು.”ಸದ್ಯ ಕಾಮಗಾರಿ ನಡೆಯುತ್ತಿದೆ. ಇದು ನಮ್ಮ ನಿಯಂತ್ರಣದಲ್ಲಿಲ್ಲ. ಕೇಂದ್ರ ಸರಕಾರದ ನಿಯಂತ್ರಣದಲ್ಲಿದೆ. ನಾವು ಮನವಿ ಮಾಡಬೇಕು ಹೊರತು ನೇರವಾಗಿ ಏನು ಮಾಡಲು ಆಗಲ್ಲ,” ಎಂದು ಹೇಳಿದರು. ”ಕಳಪೆ ಕಾಮಗಾರಿ ಆಗಿದೆ ಎಂದು ಕೇಂದ್ರಕ್ಕೆ ನಾವು ಪತ್ರ ಬರೆಯಬಹುದು ಅಷ್ಟೇ. ಆ ಕೆಲಸ ಮಾಡುತ್ತೇನೆ,” ಎಂದರು.

”ಕಾಮಗಾರಿ ಮುಗಿಯುವುದು ತಡ ಆಗಿದೆ. ಸರಕಾರಗಳು ಬದಲಾಗಿದ್ದು ಅದಕ್ಕೆ ಕಾರಣ. ಲೋಕೋಪಯೋಗಿ ಸಚಿವರು ಬದಲಾದರು. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ನಮ್ಮ ಅವಧಿಯಲ್ಲಿ ಶಿರಾಡಿ ಘಾಟ್‌ ರಸ್ತೆ ಕಾಮಗಾರಿ ಮುಗಿಸಬೇಕು ಎನ್ನುವ ಆಸೆ ಇದೆ. ಜನರಿಗೆ ತೊಂದರೆ ಆಗದ ರೀತಿ ನೋಡಿಕೊಳ್ಳುತ್ತೇವೆ,” ಎಂದು ಭರವಸೆ ನೀಡಿದರು.”ಶಿರಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಮ್ಮ ಕೈಯಲ್ಲಿಇದ್ದಿದ್ದರೆ ವೇಗವಾಗಿ ಕಾಮಗಾರಿ ಮಾಡಿಸುತ್ತಿದ್ದೆವು. ಆದರೆ ಕೇಂದ್ರದ ಕೈಯಲ್ಲಿಇದೆ. ಬೇಗ ಮುಕ್ತಿ ನೀಡಲು ಪ್ರಯತ್ನ ಪಡುತ್ತೇವೆ,” ಎಂದರು.

[t4b-ticker]
error: Content is protected !!