ದಕ್ಷಿಣೆ ರೂಪದಲ್ಲಿ ಪಿಒಕೆ ಕೊಡಿ: ಭೂ ಸೇನಾ ಮುಖ್ಯಸ್ಥರಿಗೆ ಸ್ವಾಮಿ ರಾಮಭದ್ರಾಚಾರ್ಯರ ಮನವಿ!

Picture of Savistara

Savistara

Bureau Report

‘ಜನರಲ್ ಉಪೇಂದ್ರ ದ್ವಿವೇದಿಯವರಿಗೆ ಮಂತ್ರ ದೀಕ್ಷೆ ನೀಡಿ ಯಾವ ಗುರುಗಳು ಕೇಳದ ದಕ್ಷಿಣೆ ಕೇಳಿದ್ದೇನೆ’

ನವದೆಹಲಿ: ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರಸೇನಾ ಸಂಘರ್ಷ ಬಳಿಕ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ವನ್ನು ಭಾರತ ಮರಳಿ ಪಡೆಯಬೇಕು ಎಂಬ ಕೂಗು ಹೆಚ್ಚಾಗಿದ್ದು, ಈ ವಿಚಾರಕ್ಕೆ ಪೂರಕವೆಂಬಂತೆ ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ಆಧ್ಯಾತ್ಮಿಕ ಗುರು ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯರ ಆಶ್ರಮಕ್ಕೆ ಭೂ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಭೇಟಿಯಾಗಿ ಆಧ್ಯಾತ್ಮಿಕ ಗುರುಗಳ ಆಶೀರ್ವಾದ ಪಡೆದ ಈ ವೇಳೆ ಸೇನಾ ಮುಖ್ಯಸ್ಥರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತಕ್ಕೆ ಮರಳಿ ತರುವಂತೆ ಸ್ವಾಮಿ ರಾಮಭದ್ರಾಚಾರ್ಯರು ಒತ್ತಾಯಿಸಿದರು.ಚಿತ್ರಕೂಟದಲ್ಲಿನ ತಮ್ಮ ಆಶ್ರಮಕ್ಕೆ ಭೇಟಿ ನೀಡಿದ್ದ ಭೂ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರೊಂದಿಗಿನ ತಮ್ಮ ಸಂವಾದದ ವಿವರಗಳ ಜಗದ್ಗುರು ರಾಮಭದ್ರಾಚಾರ್ಯರು ಗುರುವಾರ ಬಹಿರಂಗಪಡಿಸಿದ್ದಾರೆ.

ಭೇಟಿಯ ಕುರಿತು ಮಾತನಾಡಿದ ರಾಮಭದ್ರಾಚಾರ್ಯರು, “ಭಗವಾನ್ ಹನುಮಂತನು ಸೀತಾಮಾತೆಯಿಂದ ಶ್ರೀರಾಮಮಂತ್ರದ ದೀಕ್ಷೆ ಪಡೆದು ಲಂಕಾ ವಶಪಡಿಸಿಕೊಂಡ. ಅದೇ ರಾಮ ಮಂತ್ರದ ದೀಕ್ಷೆಯನ್ನು ನಾನು ಅವರಿಗೆ ನೀಡಿದ್ದೇನೆ. ನನಗೆ ಪಿಒಕೆ ಮರಳಿಬೇಕು ಎಂದು ನಾನು ಅವರಿಂದ ದಕ್ಷಿಣೆಯನ್ನು ಕೇಳಿದ್ದೇನೆ” ಎಂದು ಹೇಳಿದರು.

ಪಿಒಕೆ ದಕ್ಷಿಣೆಯಾಗಿ ನೀಡಿ

“ಭಾರತೀಯ ಸೇನಾ ಮುಖ್ಯಸ್ಥರು ನನ್ನ ಬಳಿಗೆ ಬಂದರು. ಅವರು ನನ್ನಿಂದ ರಾಮ ಮಂತ್ರದ ದೀಕ್ಷೆ ಪಡೆದರು ಹನುಮಾನ್ ಸೀತಾ ಜಿಯಿಂದ ರಾಮಮಂತ್ರದ ದೀಕ್ಷೆ ಪಡೆದು ಲಂಕಾದ ಮೇಲೆ ವಿಜಯ ಸಾಧಿಸಲು ಸಾಧ್ಯವಾಯಿತು. ನಂತರ, ‘ದಕ್ಷಿಣೆ’ಯ ವಿಚಾರ ಬಂದಾಗ, ನಾನು ಇದುವರೆಗೆ ಯಾವುದೇ ಗುರುಗಳು ಕೇಳದ ‘ದಕ್ಷಿಣೆ’ಯನ್ನು ಕೇಳುತ್ತೇನೆ ಎಂದು ಹೇಳಿದೆ. ನಾನು, ‘ನನಗೆ ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಬೇಕು’ ಎಂದು ಹೇಳಿದೆ. ಅವರು ನನ್ನ ವಿನಂತಿಯ ಸ್ವೀಕರಿಸಿದರು. ಪಾಕಿಸ್ತಾನಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲು ನಾವು ಸಿದ್ಧರಿದ್ದೇವೆ ಎಂದು ಇದೇ ವೇಳೆ ಭರವಸೆ ನೀಡಿದರು.

ಭೂ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಆಶ್ರಮಕ್ಕೆ ಭೇಟಿ ನೀಡಿ ಸದ್ಗುರು ನೇತ್ರ ಚಿಕಿತ್ಸಾಲಯದಲ್ಲಿ ಸಿಮ್ಯುಲೇಟರ್ ಯಂತ್ರ ಉದ್ಘಾಟಿಸಿದರು. ಉಪೇಂದ್ರ ದ್ವಿವೇದಿ ಮತ್ತು ರಾಮಭದ್ರಾಚಾರ್ಯರು ಚಿಕಿತ್ಸಾಲಯಕ್ಕೆ ಭೇಟಿ ನೀಡಿ ಆಪರೇಷನ್ ಥಿಯೇಟರ್ ಪ್ರಕ್ರಿಯೆಯ ವೀಕ್ಷಿಸಿದರು ಎಂದು ಸದ್ಗುರು ಸೇವಾ ಕೇಂದ್ರದ ಸದಸ್ಯರೊಬ್ಬರು ಹೇಳಿದರು.”ನಿಖರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ಹೇಳಿದರು. ಇದಲ್ಲದೆ, ಯಂತ್ರದ ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ಕೇವಲ ನಾಲ್ಕರಿಂದ ಐದು ಇಂತಹ ಯಂತ್ರಗಳಿವೆ ಮತ್ತು ಇದು ಮಧ್ಯಪ್ರದೇಶದಲ್ಲಿರುವ ಮೊದಲ ಯಂತ್ರವಾಗಿದೆ ಎಂದು ಸದಸ್ಯರು ಹೇಳಿದರು.ಭೂ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಮತ್ತು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಆಪರೇಷನ್‌ ಸಿಂದೂರ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

[t4b-ticker]
error: Content is protected !!