ಸ್ಪೀಕರ್ ಖಾದರ್ ಸಮ್ಮುಖದಲ್ಲಿ ಅಸಮಾಧಾನ ಹೊರಹಾಕಿದ ಮಹೇಶ್ ಭಟ್ ಕರಿಕ್ಕಳ

Picture of Savistara

Savistara

Bureau Report

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಆಯ್ಕೆ ಸಂಬಂಧ ತಮ್ಮ ಹೆಸರನ್ನು ಕೈ ಬಿಟ್ಟಿದ್ದಕ್ಕೆ ಮಹೇಶ್ ಕುಮಾರ್ ಕರಿಕ್ಕಳ ಸ್ಪೀಕರ್ ಎದುರು ಅಸಮಾಧಾನ ವ್ಯಕ್ತಪಡಿಸಿದರು. ಮೊದಲಿಗೆ ನನ್ನ ಹೆಸರೇ ಕೇಳಿಬಂದಿದ್ದು,ಆ ಸುದ್ದಿಯೂ ಎಲ್ಲೆಡೆ ಹರಿದಾಡಿತ್ತು ಕೂಡ ,ಆದರೆ ಕೊನೆಗೆ ನನ್ನ ಹೆಸರು ಕೈಬಿಡಲಾಗಿತ್ತು. ಈ ಸಂಬಂಧ ಖಾದರ್ ಅವರೊಂದಿಗೆ ಇದ್ದ ಇನ್ನಿಬ್ಬರನ್ನು ಕಂಡ ಮಹೇಶ್‌ ಕುಮಾರ್. “ಫೋಟೋಗೆ ಫೋಸ್ ಕೊಡುತ್ತಿರುವ ಇವರೇ ನನಗೆ ಅವಕಾಶ ತಪ್ಪಿಸಿದರು’ ಎಂದು ಕಾಂಗ್ರೆಸ್ ಮುಖಂಡ ಸುಧೀರ್ ಶೆಟ್ಟಿ ಮತ್ತಿತರರನ್ನು ಉದ್ದೇಶಿಸಿ ಖಾದರ್ ಸಮ್ಮುಖದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ಸ್ಪೀಕ‌ರ್ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು ಆದರೂ ಸ್ಪೀಕ‌ರ್ ಅವರು ಉಪಹಾರಕ್ಕೆಂದು ಪಕ್ಕದ ಕಟ್ಟಡಕ್ಕೆ ತೆರಳಿದಾಗಲೂ ಮಹೇಶ್ ಮತು ಕೆಲ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಕೆಲ ಮುಖಂಡರು ಮಧ್ಯ ಪ್ರವೇಶಿಸಿ ತಪ್ಪಿಸಿದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!