ಸುಳ್ಯ: ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಮಾಜವನ್ನು ಒಗ್ಗೂಡಿಸಲು ಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೆಶೋತ್ಸವ ಪ್ರಾರಂಭ ಮಾಡಿದ್ದರು ಅಂತಹ ಪರಂಪರೆಯ ಇತಿಹಾಸ ಹೊಂದಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿ ರಾತ್ರಿ10 ಗಂಟೆ ವೇಳೆಗೆ ಸರಕಾರದ ಒತ್ತಡದ ಮೂಲಕ ಆರಕ್ಷಕ ಇಲಾಖಾಧಿಕಾರಿಗಳು ಕಾರ್ಯಕ್ರಮ ನಿಲ್ಲಿಸುವಂತೆ ಸೂಚನೆ ನೀಡಿರುವುದು ಖಂಡನಿಯವೆಂದು ಬಿಜೆಪಿ ಮಂಡಲ ಸಮಿತಿ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾನೂನಿಗೆ ಗೌರವ ನೀಡಿ ವಳಲಂಬೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಿಲ್ಲಿಸಿದ್ದೇವೆ. ಆದರೆ ಆಡಳಿತ ನಡೆಸುವ ಸರಕಾರಗಳು ಈ ರೀತಿಯ ಕೆಟ್ಟ ಸಂಪ್ರದಾಯ ಅಳವಡಿಸಿರುವುದು ಜನರಿಂದ ಆಯ್ಕೆಯಾದವರು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಬಳಸುವುದು ಶೋಬೇತರುವಂಥದಲ್ಲ ವರುಷಕ್ಕೊಂದು ಬಾರಿ ಜನ ಸಾಮಾನ್ಯರು ಸಮಾಜ ಒಂದಾಗಿ ಸೇರುವ ಮುಗ್ಧ ಮಕ್ಕಳ ಪ್ರತಿಭೆ ಪ್ರದರ್ಶಿಸುವ ಸಂಸ್ಕಾರಕ್ಕೆ ತನ್ನೇರೆಚುವ ಹಾಗೂ ಚೌತಿ ಕಾರ್ಯಕ್ರಮಕ್ಕೆ ಕಾನೂನು ಕಟ್ಟಲೆ ತರುವ ಮುಖಾಂತರ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸವಾಗುತ್ತಿದೆ ಇಂತಹ ಧೋರಣೆ ಯನ್ನು ಹಿಂದೂ ಸಮಾಜ ಕ್ಷಮಿಸಲು ಸಾಧ್ಯವಿಲ್ಲ,ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೋಲ,ನೇಮ,ಜಾತ್ರೆಗಳಿಗೂ ಹಾಗೂ ಮನೆಯಲ್ಲಿ ಟಿ ವಿ ಹಾಕುವುದಕ್ಕೂ ನಿರ್ಬಂಧ ಆಗುವ ಆತಂಕವಿದ್ದು ಜಿಲ್ಲೆಯ ವಿವಿಧ ,ತಾಲೂಕಿನಲ್ಲಿ ರಾತ್ರಿಯಿಡಿ ನಡೆಯುವ ಬೇರೆ ಬೇರೆ ಕಾರ್ಯಕ್ರಮಗಳಿಗೆ ನಿರ್ಬಂಧಗಳು ಯಾಕಿಲ್ಲ ವೆಂದು ಪ್ರಶ್ನಿಸಿದ್ದಾರೆ.ಪ್ರತಿ ಮನೆ ಮನೆಯಲ್ಲೂ ಗಣೇಶ ಹಬ್ಬವನ್ನು ಶ್ರದ್ಧೆ,ಸಂಭ್ರಮ ಸಡಗರದಿಂದ ತಲೆ ತಲಾಂತರ ಆಚರಿಸುತ್ತ ಬರುತ್ತಿದ್ದು ಇವುಗಳಿಗೂ ಸಮಯ ಮಿತಿ ಹೇರಿರುವುದು ಧಾರ್ಮಿಕ ಸ್ವಾತಂತ್ರ್ಯದ ಹರಣ ಮುಂದಿನ ದಿನಗಳಲ್ಲಿ ಸಮಸ್ತ ಹಿಂದೂ ಸಮಾಜ ಅಡಲಿತಶಾಹಿ ಗಳಿಗೆ ತಕ್ಕ ಉತ್ತರ ನೀಡಲಿದೆಯೆಂದು ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೊಲೀಸರ ಸೂಚನೆಯಂತೆ ಗಣೇಶೋತ್ಸವ ರದ್ದು | ಮುಂದಿನ ದಿನಗಳಲ್ಲಿ ಸಮಸ್ತ ಹಿಂದೂ ಸಮಾಜ ಆಡಳಿತಶಾಹಿಗಳಿಗೆ ತಕ್ಕ ಉತ್ತರ ನೀಡಲಿದೆ -ವೆಂಕಟ್ ವಳಲಂಬೆ
Savistara
Bureau Report
[t4b-ticker]










































