ಕಾಸರಗೋಡು |ಬಿರುಸಿನ ಮಳೆ:ಮಧೂರು ದೇವಾಲಯಜಲಾವೃತ

Picture of Savistara

Savistara

Bureau Report

ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರವೂ ಮಳೆ ಬಿರುಸಿನಿಂದಸುರಿಯಿತು. ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಜಲಾವೃತವಾಗಿದ್ದು, ಪೂಜಾ ಕಾರ್ಯಕ್ಕೆ ತೊಂದರೆಯಾಗಿತ್ತು.

ಗುಡ್ಡ ಕುಸಿಯುವ ಭೀತಿಯಿಂದ ಬೇವಿಂಜೆ, ವೀರಮಲೆ ಗುಡ್ಡ ಇರುವ ಪ್ರದೇಶಗಳ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ದ್ರಶೇಖ‌ರ್ ತಿಳಿಸಿದ್ದಾರೆ.ಮುಳ್ಳೇರಿಯ ಬಳಿಯ ಬೆಳ್ಳಿಗೆಯಲ್ಲಿ ಗ್ರಾಮ ಪಂಚಾಯಿತಿಯ ಸಾರ್ವಜನಿಕ ಬಾವಿ ಕುಸಿದಿದೆ. ಸಮೀಪದ ಮನೆಯೊಂದು ಅಪಾಯದ ಭೀತಿಯಲ್ಲಿದೆ.ಕಾಸರಗೋಡು: ಪೆರುಂಬಳ ಬಳಿಯ ಕಕ್ಕಡಂ ಬೇನೂರು ರಸ್ತೆಯಅಬ್ದುಲ್ ಮಜೀದ್ ಎಂಬುವರ ಮನೆಯಲ್ಲಿ ಶುಕ್ರವಾರ ವಾಷಿಂಗ್ ಮೆಷಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಮನೆಗೆ ಹರಡಿದ್ದು, ಹಾನಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

[t4b-ticker]
error: Content is protected !!