ಬೆಂಗಳೂರು : ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಭೆ

Picture of Savistara

Savistara

Bureau Report

ಆ.30ರಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಭೆ ಎಲ್ಲಾ ಸಲಹಾ ಸಮಿತಿ ಸದಸ್ಯರು , ಸಮಾಜ ಚಿಂತಕರು , ಸಮಾಜಗಳ ಅದ್ಯಕ್ಷ ಮತ್ತು ಪದಾಧಿಕಾರಿಗಳು ಒಳಗೊಂಡಂತೆಕೊಡಗು ಗೌಡ ಸಮಾಜ ಬೆಂಗಳೂರಿನ ಸಭಾಂಗಣದಲ್ಲಿ ಜರುಗಿತು.

ಸಭೆಯ ಗೌರವ ಉಪಸ್ಥಿತಿರಾಗಿ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ , ಕರ್ನಾಟಕ ವಿಧಾನ ಸಭೆ ಮಾಜಿ ಸಭಾಧ್ಯಕ್ಷ ಕೆ ಜಿ ಬೋಪಯ್ಯ , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ , ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗೌರವ ಅಧ್ಯಕ್ಷರಾಗಿ ಬೆಂಗಳೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಕೇಕಡ ನಾಣಯ್ಯ, ಅಧ್ಯಕ್ಷತೆರಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟ, ಮಡಿಕೇರಿಯ ಅಧ್ಯಕ್ಷ ಆನಂದ ಕರಂದ್ಲಾಜೆ ಉಪಸ್ಥಿತರಿದ್ದರು.

ಎಲ್ಲಾ ಗಣ್ಯರ ಉಪಸ್ಥಿತಿಯಲ್ಲಿ ಒಕ್ಕೂಟದ ನೂತನ ಬೆಂಗಳೂರು ಶಾಖೆಯನ್ನು ಉದ್ಘಾಟಿಸಲಾಯಿತು.ನಂತರ ಉದ್ದೇಶಿತ ಜಾತಿ ಗಣತಿಯಲ್ಲಿ ಕೊಡಗು ಗೌಡರ ನೋಂದಣಿ ಬಗ್ಗೆ ಚರ್ಚೆಯ ಸಭೆಯನ್ನು ದೀಪಾ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು.

ಕೊಡಗು ಗೌಡ ಸಮಾಜ ಬೆಂಗಳೂರಿನ ಅಧ್ಯಕ್ಷರಾದ ಕೇಕಡ ನಾಣಯ್ಯ ರವರು ಎಲ್ಲರನ್ನೂ ಸ್ವಾಗತಿಸಿದರು. ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ರವರು ಒಕ್ಕೂಟದ ಹಿಂದಿನ ನಡಾವಳಿ ಮತ್ತು ಮುನ್ನುಡಿ ಯನ್ನು ಸಭೆಗೆ ವಿವರಿಸಿದರು. ಸಭೆಯ ಮುಖ್ಯ ವಿಷಯವಾದ ಕೇಂದ್ರ ಮತ್ತು ರಾಜ್ಯ ಸರಕಾರದ ಜಾತಿ ಗಣತಿ ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಜಾಗೃತಿ ಅಭಿಯಾನದ ಸಭೆಯ ಬಗ್ಗೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ ವಿ ಸದಾನಂದ ಗೌಡರು ಸಭೆಯನ್ನು ಉದ್ದೇಶಿಸಿ ಸೂಕ್ಷ್ಮವಾಗಿ ಎಲ್ಲರೂ ಸಮೀಕ್ಷೆ ಯಲ್ಲಿ ಬಾಗಿ ಯಾಗಬೇಕು ಮತ್ತು ಆಲೋಚಿಸಿ ನೋಂದಾವಣೆ ಮಾಡಬೇಕೆಂದು ಹೇಳಿದರು.

ನಮಗೆ ಹಿಂದಿನಿಂದ ಸಿಗುತ್ತಿರುವ ಸೌಲಭ್ಯವನ್ನು ಉಳಿಸಿಕೊಂಡು ಹಾಗೆಯೇ ನಮ್ಮ ಜನಾಂಗಕ್ಕೆ ಮುಂದೆ ಯಾವುದೇ ತೊಂದರೆಗೆ ಒಳಪಡದಂತೆ ನಿರ್ಣಯ ಆಗಬೇಕೆಂದು ತಿಳಿಸಿದರು . ಒಕ್ಕೂಟದ ಉಪಾಧ್ಯಕ್ಷರಾದ ಡಾ ತೇನನ ರಾಜೇಶ್ ಸಭೆಗೆ ಜಾತಿ ಸಮೀಕ್ಷೆಯ ಪೂರ್ಣ ವಿವರವನ್ನು ಪುರಾವೆಗಳೊಂದಿಗೆ ಸಭೆಯ ಮುಂದೆ ಮಂಡಿಸಿದರು ಮತ್ತು ಯಾವ ಕಾರಣಕ್ಕಾಗಿ ನಾವು GOWDA ಎಂದು ಜಾತಿ ಕಾಲಂ ನಲ್ಲಿ ನಮೂದು ಮಾಡಬೇಕಿದೆ ಎಂದು ದಾಖಲೆ ಸಮೇತ ವಿವರಿಸಿದರು.

ಪ್ರಸ್ತುತ ಜಾತಿ ಗಣತಿಯಲ್ಲಿ ಭಾಗವಹಿಸುತ್ತಿರುವ ವಿಷಯ ತಜ್ಞ ಪಟ್ಟಡ ಶಿವಕುಮಾರವರು ಈ ದಿಶೆಯಲ್ಲಿ ವಿವರವಾಗಿ ಮಾತನಾಡಿ ನಾವು GOWDA ಎಂಬುದನ್ನು ಮಾತ್ರ ಯಾಕೆ ಬರೆಯಬೇಕೆಂಬುದನ್ನು ಸಭೆಯ ಮುಂದೆ ವಿವರಿಸಿದರು.ಈ ವಿಷಯ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ ಇದರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ ನಮ್ಮ ಎಲ್ಲರ ನಿರ್ಣಯ ಒಂದೇ ಆಗಬೇಕಿದ್ದು ಶೈಕ್ಷಣಿಕ ಮತ್ತು ಆರ್ಥಿಕ ದೃಷ್ಟಿಯಿಂದ GOWDA ಎಂದು ನಮೂದಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು .

ಮಾಜಿ ವಿಧಾನಸಭಾ ಅದ್ಯಕ್ಷ ಕೆ ಜಿ ಬೋಪಯ್ಯ ರವರು ಮಾತನಾಡಿ ಕೊಡಗಿನ ನಮ್ಮಜನಾಂಗದ ಎಲ್ಲಾ ದಾಖಲೆಗಳು GOWDA ಎಂಬ ಹೆಸರಿನಲ್ಲಿದ್ದು ಮುಂದೆ ಜಾತಿ ಕಲಾಂ ನಲ್ಲಿ ಬೇರೆ ನಮೂದು ಮಾಡಿದಲ್ಲಿ ಸಮುದಾಯಕ್ಕೆ ತೊಂದರೆಯಾಗುವ ಆತಂಕ ವ್ಯಕ್ತಪಡಿಸಿ ನಮ್ಮ ಹಿಂದಿನಿಂದ ಬಂದಂತಹ GOWDA ಜಾತಿ ಯನ್ನು ಮುಂದುವರಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಹಾಜರಿದ್ದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿರವರು ಈ ವಿಷಯಗಳಿಗೆ ಸಹಮತ ವ್ಯಕ್ತಪಡಿಸಿ ,GOWDA ಎಂದು ನಮೂದು ಮಾಡುವ ಬಗ್ಗೆ ಸುಳ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಇತರ ಗೌಡ ಪ್ರಮುಖರಿಗೆ ಮಾಹಿತಿ ಮತ್ತು ಸಂವಾದ ನಡೆಸುವಂತೆ ವಿನಂತಿಸಿದರು.

ಸಭೆಯಲ್ಲಿ ಹಾಜರಿದ್ದ ಗಣ್ಯರು ಮತ್ತು ವಿಷಯ ತಜ್ಞರು ಈ ವಿಷಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.ತದನಂತರ ಎಲ್ಲರ ಒಮ್ಮತದಂತೆ ಜಾತಿ ಕಲಾಂ ನಲ್ಲಿ GOWDA ಎಂದು ,ಉಪ ಜಾತಿ ಕಲಾಂ ನಲ್ಲಿ ಅರೆಭಾಷೆ ಗೌಡ ಎಂದೂ,ಮಾತೃಭಾಷೆ ಕಲಾಂನಲ್ಲಿ ಅರೆಭಾಷೆ ಎಂದು ನಮೂದು ಮಾಡುವಂತೆ ಸಭೆ ತೀರ್ಮಾನಿಸಿ ,ಮಡಿಕೇರಿ ಮತ್ತು ಸುಳ್ಯದಲ್ಲಿ ತಕ್ಷಣ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡುವಂತೆ ಸಭೆ ತೀರ್ಮಾನಿಸಿತು.

ಈ ದಿಶೆಯಲ್ಲಿ ಈ ವಿಚಾರವನ್ನು ಪ್ರಚುರ ಪಡಿಸಿ ಜನಾಂಗದ ವ್ಯಕ್ತಿಗಳಿಗೆ ತಲುಪಿಸಲು ಎಲ್ಲ ಗೌಡ ಸಮಾಜಗಳ ಅಧ್ಯಕ್ಷರ ಸಮಿತಿ ಮಾಡಿ ಅವರಿಗೆ ಜವಾಬ್ದಾರಿ ವಹಿಸುವಂತೆ ಸಭೆ ತೀರ್ಮಾನಿಸಿತು.ಸರ್ವರಿಗೆ ವಂದನೆ ಅರ್ಪಿಸುವುದನ್ನು ಕೊಡಗು ಗೌಡ ಸಮಾಜ ಬೆಂಗಳೂರು ಇದರ ಕಾರ್ಯದರ್ಶಿ ಬಿಪಿನ್ ಬೇಕಲ್ ನಿರ್ವಹಿಸಿದರು.

[t4b-ticker]
error: Content is protected !!