ಶಬರಿಮಲೆ ದೇವಾಲಯದಲ್ಲಿ ಚಿನ್ನ ದುರುಪಯೋಗ; ಕ್ರಿಮಿನಲ್ ಪ್ರಕರಣ ದಾಖಲಿಸಿ: ಕೇರಳ HC

Picture of Savistara

Savistara

Bureau Report

ಕೊಚ್ಚಿ: ಶಬರಿಮಲೆ ದೇವಾಲಯದ ಚಿನ್ನ ದುರುಪಯೋಗಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿ ಎಂದು ರಾಜ್ಯ ಪೊಲೀಸರಿಗೆ ಕೇರಳ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ನ್ಯಾ. ರಾಜಾ ವಿಜಯರಾಘವನ್ ವಿ. ಮತ್ತು ಕೆ.ವಿ. ಜಯಕುಮಾ‌ರ್ ಅವರಿದ್ದ ಪೀಠ, ದ್ವಾರಗಳ ಚೌಕಟ್ಟಿಗೆ ಚಿನ್ನಲೇಪನದ ವೇಳೆ ಚಿನ್ನ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬುದು ಈವರೆಗಿನ ವಿಚಾರಣೆಯಿಂದ ಕಂಡುಬರುತ್ತಿದೆ ಎಂಬುದನ್ನು ಗಮನಿಸಿದ ಬಳಿಕ ನಿರ್ದೇಶನ ನೀಡಿದೆ.ಚಿನ್ನದ ಲೇಪನಕ್ಕೆ ಮುಂದಾದ ಪ್ರಾಯೋಜಕರು ಉನ್ನಿಕೃಷ್ಣನ್ ಪಾಟಿ ಅವರಿಗೆ ಭಾರಿ ಪ್ರಮಾಣದ ಚಿನ್ನವನ್ನು (ಸುಮಾರು 474.9 ಗ್ರಾಂ) ಹಸ್ತಾಂತರಿಸಲಾಗಿತ್ತು’ ಎಂಬುದು ವಿಜಿಲೆನ್ಸ್ ವರದಿಯಿಂದ ತಿಳಿದುಬಂದಿದೆ ಎಂದಿರುವ ಪೀಠ, ‘ಆದಾಗ್ಯೂ, ಪಾಟಿ ಅವರು ಅಷ್ಟು ಪ್ರಮಾಣದ ಚಿನ್ನವನ್ನು ತಿರುವಾಂಕೂರು ದೇವಸ್ವ ಮಂಡಳಿಗೆ (ಟಿಡಿಬಿ) ಒಪ್ಪಿಸಿದ್ದಾರೆ’ ಎಂಬುದು ದಾಖಲೆಗಳಲ್ಲಿ ಇಲ್ಲ ಎಂದೂ ಪೀಠ ಹೇಳಿದೆ.ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದ ಕೋರ್ಟ್, ದ್ವಾರಗಳ ಚೌಕಟ್ಟಿನಲ್ಲಿನ ಸಮಸ್ಯೆಗಳು ಇತರ ಎಲ್ಲ ಅಂಶಗಳ ಕುರಿತು ತನಿಖೆ ನಡೆಸುವಂತೆ ಆದೇಶಿಸಿತ್ತು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!