ಮೈಸೂರು: ಹಸಿಶುಂಠಿ ಧಾರಣೆಯು ಈ ಹಂಗಾಮಿನಲ್ಲಿ ಮೊದಲ ಬಾರಿಗೆ ₹3 ಸಾವಿರದ ಗಡಿ ದಾಟಿದ್ದು, ರೈತರು ಅವಧಿ ಪೂರ್ವ ಕೊಯ್ಲಿಗೆ ಮುಂದಾಗಿದ್ದಾರೆ.
ಕಳೆದ ತಿಂಗಳಷ್ಟೇ ಹಸಿಶುಂಠಿ ದರ ಪ್ರತಿ ಚೀಲಕ್ಕೆ (60 ಕೆ.ಜಿ.) ₹1500-1800 ಇತ್ತು. ಶನಿವಾರ ಚೀಲಕ್ಕೆ ₹3,000-3,200ರಂತೆ ಖರೀದಿ ನಡೆಯಿತು.
ಒಂದೆರಡು ವಾರದಲ್ಲೇ ಪ್ರತಿ ಚೀಲಕ್ಕೆ ಸರಾಸರಿ ₹1,000-1,500ರಷ್ಟು ಬೆಲೆ ಹೆಚ್ಚಾಗಿದೆ.ಸಾಮಾನ್ಯವಾಗಿ ಜನವರಿ-ಫೆಬ್ರುವರಿಯಲ್ಲಿ ಶುಂಠಿ ಕೊಯ್ಲು ನಡೆಯುತ್ತದೆ. ಆದರೆ ಈ ವರ್ಷ ರೋಗಬಾಧೆಯಿಂದ ಬೆಳೆ ಒಣಗಿರುವ ಕಡೆ ಕೊಳೆಯಲು ಶುರುವಾಗಿದೆ. ಅಂತಹ ಜಮೀನುಗಳಲ್ಲಿ ಅವಧಿಪೂರ್ವ ಕೊಯ್ಲು ನಡೆದಿದೆ.ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಈಚಿನ ವರ್ಷಗಳಲ್ಲಿ ಶುಂಠಿಯನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. ಮೈಸೂರು ಜಿಲ್ಲೆ ಒಂದರಲ್ಲಿಯೇ 8 ಸಾವಿರ ಹೆಕ್ಟೇರ್‌ಗೂ ಅಧಿಕ ಜಮೀನಿನಲ್ಲಿ ಶುಂಠಿ ಬಿತ್ತನೆಯಾಗಿದೆ.ಆದರೆ ತೀವ್ರ ರೋಗಬಾಧೆಯ ಕಾರಣಕ್ಕೆ ಅರ್ಧದಷ್ಟು ಫಸಲು ರೈತರ ಕೈ ಸೇರಿಲ್ಲ. ಬೆಳೆಯನ್ನು ಉಳಿಸಿಕೊಳ್ಳುವುದೋ, ಸಿಕ್ಕಷ್ಟು ದರಕ್ಕೆ ಮಾರುವುದೋ ಎನ್ನುವ ಚಿಂತೆಯಲ್ಲಿದ್ದವರಿಗೆ ದರ ಏರಿಕೆಯು ಸಮಾಧಾನ ತಂದಿದೆ.ಕೆಲವು ವರ್ಷಗಳ ಹಿಂದೆ ಶುಂಠಿಗೆ ಪ್ರತಿ ಚೀಲಕ್ಕೆ ₹5-6 ಸಾವಿರದವರೆಗೂ ದಾಖಲೆಯ ಬೆಲೆ ಸಿಕ್ಕಿತ್ತು. ರೈತರು ಇದೇ ಹುರುಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ಆದರೆ ಇದೇ ವರ್ಷ ಜನವರಿ-ಫೆಬ್ರುವರಿಯಲ್ಲಿ ₹1,000-1,200ಕ್ಕೆ ಧಾರಣೆ ಕುಸಿದಿತ್ತು. ಮೇನಲ್ಲಿ ಕೇಂದ್ರ ಸರ್ಕಾರವು ರೈತರಿಂದ ಪ್ರತಿ ಕ್ವಿಂಟಲ್‌ಗೆ ₹2,445ರ ದರದಲ್ಲಿ ರೈತರಿಂದ ಉತ್ಪನ್ನ ಖರೀದಿಸಿತ್ತು.ಉಮೇಶ್, ರೈತ ಕೊಮ್ಮೇಗೌಡನಕೊಪ್ಪಲು ಮೈಸೂರು ತಾಲ್ಲೂಕುಶುಂಠಿ ಬೆಳೆಯಲು ಎಕರೆಗೆ ₹5-6 ಲಕ್ಷ ಬೇಕು. ರೋಗಬಾಧೆಯಿಂದ ಖರ್ಚು ದುಪ್ಪಟ್ಟಾಗಿದ್ದು ಅರ್ಧದಷ್ಟು ಬೆಳೆ ನಾಶವಾಗಿದೆ.














































