ಎಲ್ಲಾ RSS ಚಟುವಟಿಕೆಗಳ ಮೇಲೆ ನಿಷೇಧ ಹೇರಿ​; ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ

Picture of Savistara

Savistara

Bureau Report

ಬೆಂಗಳೂರು (ಅ.12): ಆರ್‌ಎಸ್‌ಎಸ್‌ನ (RSS) ಶತಮಾನೋತ್ಸವ ಸಂಭ್ರಮದ ಅಂಗವಾಗಿ ಬೆಂಗಳೂರಿನ ವಿವಿಧೆಡೆ ಇಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು ಪಥ ಸಂಚಲನ ಕಾರ್ಯಕ್ರಮ ನಡೆಸಿದ್ರು. ಆದ್ರೆ ಇದೀಗ RSSಗೆ ಶಾಕ್​ ಕೊಡಲು ಸಚಿವ ಪ್ರಿಯಾಂಕಾ ಖರ್ಗೆ (Priyank Kharge) ಮುಂದಾಗಿದ್ದಾರೆ. ಆರ್​ಎಸ್​ಎಸ್ ಚಟುವಟಿಗಳ ಮೇಲೆ ನಿಷೇಧ ಹೇರುವಂತೆ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಪತ್ರ ಬರೆದಿದ್ದಾರೆ.

RSS ಚಟುವಟಿಕೆ ನಿಷೇಧಕ್ಕೆ ಪತ್ರಶಾಲಾ-ಕಾಲೇಜು ಮೈದಾನಗಳಲ್ಲಿ ನಡೆಯುವ ಆರ್​ಎಸ್​ಎಸ್ ಚಟುವಟಿಕೆಗಳ​ ಮೇಲೆ ನಿಷೇಧ ಹೇರುವಂತೆ ಸಿಎಂ ಸಿದ್ದರಾಮಯ್ಯ‌ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದು ಸಮಾಜದಲ್ಲಿ RSS ಏಕತೆ ಹಾಗೂ ಸಂವಿಧಾನದ ವಿರುದ್ಧ ನಕಾರಾತ್ಮಕ ಭಾವನೆ ತುಂಬುತ್ತಿದೆ ಎಂದಿದ್ದಾರೆ.ಮಕ್ಕಳ ಮನಸ್ಸಿನ ಮೇಲೆ ಪರಿಣಾಮಪೊಲೀಸ್ ಅನುಮತಿ ಪಡೆಯದೇ ದೊಣ್ಣೆ ಹಿಡಿದು ಆಕ್ರಮಣವಾಗಿ ಪ್ರದರ್ಶನ ಮಾಡುತ್ತಾರೆ. ಇದ್ರಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರಿಯಾಂಕ ಖರ್ಗೆ ಪತ್ರದಲ್ಲಿ ಬರೆದಿದ್ದಾರೆ.

ಎಲ್ಲಾ‌ ಚಟುವಟಿಕೆಗಳಿಗೆ ನಿಷೇಧ ಹೇರಿಆರ್​ಎಸ್​ಎಸ್​ನ ಎಲ್ಲಾ‌ ಚಟುವಟಿಕೆಗಳಿಗೆ ನಿಷೇಧ ಹೇರಿ. ಸರ್ಕಾರಿ ಜಾಗದಲ್ಲಿ RSS ಚಟುವಟಿಕೆ ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ. ಆರ್ ಎಸ್ ಎಸ್ ಸಂಘಟನೆಯ ಶಾಖೆ, ಸಾಂಘಿಕ ಅಥವಾ ಬೈಠೆಕ್ ಹೆಸರಿನಲ್ಲಿ ನಡೆಸುವ ಎಲ್ಲಾ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದು, ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮತ್ತೊಂದು ವಾಗ್ಯುದ್ದಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!