ತ್ರಿಕೋನ ಸರಣಿ: ಅಫ್ಘಾನ್ ಬದಲು ಜಿಂಬಾಬ್ಬೆ ಕಣಕ್ಕೆ

Picture of Savistara

Savistara

Bureau Report

ಲಾಹೋರ್: ಪಾಕಿಸ್ತಾನದಲ್ಲಿ ನವೆಂಬರ್ 17ರಿಂದ 29ರವರೆಗೆ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಅಫ್ಘಾನಿಸ್ತಾನದ ಬದಲು ಜಿಂಬಾಬೈ ತಂಡ ಕಣಕ್ಕಳಿಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಿಳಿಸಿದೆ.

ಪಾಕ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ತಮ್ಮ ದೇಶದ ಮೂವರು ಯುವ ಕ್ರಿಕೆಟಿಗರು ಸಾವನ್ನಪ್ಪಿದ ಬಳಿಕ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಪಾಕಿಸ್ತಾನಕ್ಕೆ ತಮ್ಮ ತಂಡವನ್ನು ಕಳುಹಿಸುವುದಿಲ್ಲ ಎಂದು ಹೇಳಿತ್ತು.’ಶ್ರೀಲಂಕಾವನ್ನು ಒಳಗೊಂಡ ತ್ರಿಕೋನ ಟಿ20 ಸರಣಿಯಲ್ಲಿ ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಹ್ವಾನವನ್ನು ಜಿಂಬಾಬ್ರೆ ಕ್ರಿಕೆಟ್ ಸ್ವೀಕರಿಸಿದೆ’ ಎಂದು ಪಿಸಿಬಿ ಶನಿವಾರ ತಿಳಿಸಿದೆ.’ಪಾಕ್ ನೆಲದಲ್ಲಿ ನಡೆಯಲಿರುವ ಚೊಚ್ಚಲ ಟಿ20 ತ್ರಿಕೋನ ಸರಣಿಯು ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸಲು ಈ ಮೂರು ತಂಡಗಳಿಗೆ ವೇದಿಕೆಯಾಗಿದೆ’ ಎಂದು ಪಿಸಿಬಿ ಅಭಿಪ್ರಾಯಪಟ್ಟಿದೆ.

ಸರಣಿಯ ಮೊದಲ ಪಂದ್ಯ ನ.17ರಂದು ರಾವಲ್ಪಿಂಡಿ ಕ್ರೀಡಾಂಗದಲ್ಲಿ ಪಾಕ್ ಮತ್ತು ಜಿಂಬಾಬೈ ತಂಡಗಳ ನಡುವೆ ನಡೆಯಲಿದೆ. ನ.19ರಂದು ಅದೇ ತಾಣದಲ್ಲಿ ಶ್ರೀಲಂಕಾ ಮತ್ತು ಜಿಂಬಾಬೈ ತಂಡಗಳು ಮುಖಾಮುಖಿಯಾಗಲಿವೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!